Tuesday, 29 December 2020

ಕುವೆಂಪು ಜನ್ಮ ದಿನಾಚರಣೆ

 ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಪೀಠ, (ರಿ ) ಚಿತ್ರದುರ್ಗ

ಎಸ್.ಎಸ್.ಕೆ.ಎಸ್. ಶಿಕ್ಷಣ ಮಹಾವಿದ್ಯಾಲಯ ಚಿತ್ರದುರ್ಗ



ಕುವೆಂಪುರವರು ಕನ್ನಡ ಸಾಹಿತ್ಯಕ್ಕೆ ವಿಶೇಷ ಹಾಗೂ ವಿಶಿಷ್ಟ ಸಾಹಿತ್ಯ ಕೃಷಿಯಲ್ಲಿ ತಮ್ಮ ಬದುಕನ್ನು ಮೀಸಲಿಟ್ಟು, ಕನ್ನಡ ಸಾಹಿತ್ಯಕ್ಕೆ ಹೊಸ ಭಾಷ್ಯವನ್ನು ಬರೆದ ರಸಋಷಿ ರಾಷ್ಟ್ರಕವಿ ಕುವೆಂಪು. ಕನ್ನಡ ಭಾಷೆ, ಕಾವ್ಯ, ಕಾದಂಬರಿ, ನಾಟಕ, ಕವಿತೆ ಹಾಗೂ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಹೊಸಚಾಪನ್ನು ಮೂಡಿಸಿದ ಮಹಾಕವಿ ಕುವೆಂಪುರವರು ಆಧುನಿಕ ಕನ್ನಡ ಸಾಹಿತ್ಯಕ್ಕೆ ಯುಗಪ್ರವರ್ತಕರಾಗಿದ್ದಾರೆಂದು ಎಂದು ಡಾ ನೆಲ್ಲಿಕಟ್ಟೆ ಎಸ್.ಸಿದ್ದೇಶ್, ಪ್ರಾಧ್ಯಾಪಕರು ಕುವೆಂಪು ವಿಶ್ವವಿದ್ಯಾಲಯ ಶಂಕಟಘಟ್ಟ ರವರು ಚಿತ್ರದುರ್ಗ ನಗರದ ಎಸ್.ಎಸ್.ಕೆ.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ "ಕುವೆಂಪು ಜನ್ಮದಿನಾಚರಣೆಯ" ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲ್ಲಿ "ಆಧುನಿಕ ಕನ್ನಡ ಸಾಹಿತ್ಯ ಮತ್ತು ಕುವೆಂಪು" ವಿಷಯ ಕುರಿತು ಮಾತನಾಡಿದರು.

                 ಕುವೆಂಪುರವರು ಸರ್ವಕಾಲಕ್ಕೂ ಅನುಸರಣೀಯವಾದ ಬದುಕು ಮತ್ತು ಬರಹವನ್ನು ನೀಡಿರುವ   ಅಪರೂಪದ ವ್ಯಕ್ತಿ-ಶಕ್ತಿಯಾಗಿದ್ದಾರೆ. ಅವರು ತಾ ನು ಬದುಕಿದಂತೆ ಬರೆದವರು, ತಾನು ಬರೆದಂತೆ ಬದುಕಿದ ವಿಶೇಷ ವ್ಯಕ್ತಿತ್ವದವರು. ಕುವೆಂಪು ಹಾಡಿದರೆಂದರೆ ಮೌಢ್ಯಗಳು ಯುಗ ಮೌಲ್ಯಗಳ ಯುಗವಾಗುವುದು!, ಜಾತಿಜಲ ಬತ್ತುವುದು, ಮತಮರ ಒಣಗುವುದು!, ಕುವೆಂಪು ಹಾಡಿದರೆಂದರೆ ಆಧ್ಯಾತ್ಮ ಅರಳುವುದು, ಪತಿತ ಜೀವನ ಪಾವನವಾಗುವುದು. ವಿಷಮಾನವ ವಿಶ್ವಮಾನವನಾಗುವನು!, ಕುವೆಂಪು ಹಾಡಿದರೆಂದರೆ ಪ್ರೀತಿ-ನೀತಿ ಗೆಲ್ಲುವುದು, ಸಾತ್ವಿಕತೆಯ ಸತ್ವ ಬೆಳಗುವುದು, ವಿಕೃತಿ ಆಕೃತಿಯಾಗುವುದು, ಬಡವರ ಬದುಕು ಬಲಿಯುವುದು, ಕೊಳಲು ಉಲಿಯುವುದು ಪಾಂಚಜನ್ಯ ಮೊಳಗುವುದು, ಮಾಲಿನ್ಯ ಮಾಣಿಕ್ಯವಾಗುವುದು ಎಂದು ತಾವೇ ಬರೆದ ಕವನ ವಾಚನದೊಂದಿಗೆ ಕುವೆಂಪು ಇಂತಹ ತನ್ನ ಕಾವ್ಯ ಶಕ್ತಿಯ ಮೂಲಕ ಪ್ರಕೃತಿಯ ಪ್ರಖರತೆಯನ್ನು ಅನಾವರಣಗೊಳಿಸಿದವರು, ಕಾವ್ಯಕಡಲ ಒಡಲ ಮೂಲಕ ಇಳೆಯ ಇರುವಿನಲ್ಲಿ ಅರಿವಿನ ಬೀಜ ಬಿತ್ತಿದವರು, ಬೆಳೆಯನ್ನು ಬೆಳೆದವರು. 'ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು' ಎಂಬ ಮಾನವ ಪ್ರೀತಿಯ ವಿಶ್ವಮಾನವತೆಯ ನವಯುಗವಾಣಿನ್ನು ಘೋಷಿಸಿದ ಕನ್ನಡ ನಾಡು, ನುಡಿ, ಜನತೆಯ ಆಸ್ಮೀತೆಯ ಪ್ರವರ್ತಕ ಪುರುಷ ಕುವೆಂಪು.

 ಕುವೆಂಪುರವರ ಬದುಕು ಮತ್ತು ಬರಹವನ್ನು ಅಧ್ಯಯನದಲ್ಲಿ ತೊಡಗಿದರೆ ನಮ್ಮಲ್ಲಿರುವ ಕಲ್ಮಶಗಳು ಕರಗುತ್ತವೆ, ಕೀಳಿರಿಮೆಗಳು ನಾಶವಾಗುತ್ತವೆ. ಆಧುನಿಕ ತಾಂತ್ರಿಕ ಯುಗದ ಒತ್ತಡದ, ಆತುರದ, ಆತಂಕಗಳನ್ನು ಹೊಗಲಾಡಿಕೊಳ್ಳಲು ಕುವೆಂಪು ಓದು ಅಗತ್ಯವಾಗಿದೆ. ಮನುಜಮತ, ವಿಶ್ವಪಥ, ಸರ್ವೋದಯ,ಸಮನ್ವಯ ಮತ್ತು ಪೂರ್ಣದೃಷ್ಟಿಗಳೆಂಬ ಪಂಚಮಂತ್ರಗಳ ಅನುಸರಣೆ ಮತ್ತು ಅಧ್ಯಯನದ ಮೂಲಕ ನಮ್ಮಲ್ಲೇರ ಬದುಕನ್ನು ಸಾರ್ಥಕಗೊಳಿಸಿಕೊಳ್ಳೊಣವೆಂದು ಕರೆನೀಡಿದರು. 

     ದಿವ್ಯಸಾನ್ನಿಧ್ಯವಹಿಸಿದ್ದ ಶ್ರೀ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಸ್ವಾಮೀಜಿಯವರು ಕುವೆಂಪುರವರ ಅಧ್ಯಯನ ನಮ್ಮೇಲ್ಲರ ಬದುಕಿಗೆ ಅಮೃತವಾಣಿಯಾಗಿದೆ. ಅವರ ಸಾಹಿತ್ಯ ಶಕ್ತಿಯ ಮೂಲಕ ನಾಡು ನುಡಿಯನ್ನು ಅತ್ಯುನ್ನತಮಟ್ಟಕ್ಕೆ ಎತ್ತರಿಸಿದ ಮಹಾಪುರುಷರಾಗಿದ್ದಾರೆಂಬ ನುಡಿಗಳೊಂದಿಗೆ ವಿಶೇಷ ಉಪನ್ಯಾಸ ನೀಡಿದ ಡಾ. ನೆಲ್ಲಕಟ್ಟೆ ಸಿದ್ದೇಶರವರನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಡಿ.ಪಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನಿರಂಜನಮೂರ್ತಿ, ಪದವಿಪೂರ್ವ ಕಾಲೇಜ್ ಪ್ರಾಂಶುಪಾಲರಾದ  ಶ್ರೀ ಪ್ರಶಾಂತ್ , ಹಾಗೂ ಬಿ.ಇಡಿ. ಕಾಲೇಜಿನ ಉಪನ್ಯಾಸಕರಾದ ವಿಜಯ್ ಕುಮಾರ್ , ಭುವನೇಶ್ವರಿ ಮತ್ತು ಎಲ್ಲ ಬೋಧಕ ಬೋಧಕೇತರ ಸಿಬ್ಬಂದ್ಧಿಗಳು ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ಟಿ ಸ್ವಾಗತಿಸಿದರು, ಉಪನ್ಯಾಸಕಿ ಶ್ರೀಮತಿ ನೇತ್ರಾವತಿ ಅತಿಥಿಗಳನ್ನು ಪರಿಚಯಿಸಿದರು, ಪ್ರಶಿಕ್ಷಣಾರ್ಥಿ ಜಗದೀಶ್ ಪ್ರಾರ್ಥಿಸಿದರು, ಜಯ್ಯಪ್ಪ ವಂದಿಸಿದರು, ಯಶವಂತ್ ನಿರೂಪಿಸಿದರು.





Thursday, 9 July 2020



ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಪೀಠ (ರಿ) ಚಿತ್ರದುರ್ಗ
ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಚಿತ್ರದುರ್ಗ.

ದಿನಾಂಕ: 14/10/2019

ವಾಲ್ಮೀಕಿ ಜಯಂತಿ




ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಪೀಠ (ರಿ) ಚಿತ್ರದುರ್ಗ
ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಚಿತ್ರದುರ್ಗ.

ದಿನಾಂಕ: 15/08/2019

ಸ್ವಾತಂತ್ರ್ಯ ದಿನಾಚರಣೆ





ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಪೀಠ (ರಿ) ಚಿತ್ರದುರ್ಗ
ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಚಿತ್ರದುರ್ಗ.

ದಿನಾಂಕ: 15/08/2019

ಸ್ವಾತಂತ್ರ್ಯ ದಿನಾಚರಣೆ






ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಪೀಠ (ರಿ)
ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಚಿತ್ರದುರ್ಗ.

ದಿನಾಂಕ: 16/07/2019
ಗುರು ಪೂರ್ಣಿಮ ಕಾರ್ಯಕ್ರಮ






ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಪೀಠ (ರಿಚಿತ್ರದುರ್ಗ


ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿಚಿತ್ರದುರ್ಗ.

                                                            ದಿನಾಂಕ: 20/05/2019
“ ಅಂಧ ಮಕ್ಕಳ ಕುರಿತು ಮಾಹಿತಿ ಕಾರ್ಯಗಾರ








ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಪೀಠ (ರಿ) ಚಿತ್ರದುರ್ಗ
ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಚಿತ್ರದುರ್ಗ.

                                                                                                        ದಿನಾಂಕ: 07/05/2019
      “ ಬಸವೇಶ್ವರ ಜಯಂತಿ ”


                                        
ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಪೀಠ (ರಿ) ಚಿತ್ರದುರ್ಗ
ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಚಿತ್ರದುರ್ಗ.

                                                                                                                                ದಿನಾಂಕ:22/03/2019

ಪ್ರಥಮ ವರ್ಷದ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ






Tuesday, 14 April 2020


ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ Online Webinar (ZOOM) ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ರವರ ಜನ್ಮದಿನಾಚರಣೆ, ಡಾ. ಜಗನ್ನಾಥ್ ಕೆ.ಡಾಂಗೆ, ಪ್ರಾಧ್ಯಾಪಕರು ಶಿಕ್ಷಣ ಅಧ್ಯಯನ ವಿಭಾಗ ಕುವೆಂಪು ವಿಶ್ವವಿದ್ಯಾಲಯ ಇವರು " ಡಾ.ಬಿ.ಆರ್.ಅಂಬೇಡ್ಕರ್ ರವರ ಕೊಡುಗೆಗಳು" ಎಂಬ ವಿಷಯವನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು
(Celebration of Dr. B. R. Ambedkar 129 Birth Anniversary at S.S.K.S College of Education Chitradurga. Dr.Jagannath K Dange, Associate Professor Kuvempu University is delivered talks on the Contribution of Dr. B. R Ambedkar and Understanding of Dr. B. R Ambedkar in the present context.)








ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾಗಿರೀಶ್ ಟಿ ಡಾ. ಪ್ರದೀಪ್ ಕುಮಾರ್, ಡಾ, ಶಿವಣ್ಣ ಟಿ,  ಹಾಗೂ ಬಿ,ಇಡಿ. ಕಾಲೇಜಿನ ಉಪನ್ಯಾಸಕ ವರ್ಗ ಮತ್ತು ಬಿ.ಇಡಿ.ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.

Monday, 13 April 2020


ಜನ ಹಿತ ಸಭಾ” (ರಿ) ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆ ಹಾಗೂ “ಜನ ಹಿತ ಸೇವಾ ಪ್ರಶಸ್ತಿ ಪ್ರದಾನ”

ನಗರದ ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ “ಜನ ಹಿತ ಸಭಾ” (ರಿ) 





ಜನ ಹಿತ ಸಭಾ” (ರಿ) ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆ ಹಾಗೂ “ಜನ ಹಿತ ಸೇವಾ ಪ್ರಶಸ್ತಿ ಪ್ರದಾನ”
ನಗರದ ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ “ಜನ ಹಿತ ಸಭಾ” (ರಿ) ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆ ಹಾಗೂ “ಜನ ಹಿತ ಸೇವಾ ಪ್ರಶಸ್ತಿ ಪ್ರದಾನ” ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಜನ ಹಿತ ಸಭಾ ಸಂಸ್ಥೆಯು ಜನರಿಂದ ಜನರಿಗಾಗಿ ಜನ ಸೇವೆ ಮಾಡಲು ಸ್ಥಾಪಿಸಿದ ಸಂಸ್ಥೆಯಾಗಿದೆ. ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಜನತೆಯ ಶ್ರೇಯೋಭಿವೃದ್ಧಿಗಾಗಿ, ಲಿಂಗ ತಾರತಮ್ಯ, ಗ್ರಾಮೀಣ ಅಭಿವೃದ್ಧಿಯಂತಹ ಧ್ಯೇಯೊದ್ದೇಶಗಳನ್ನು ಹೊಂದಿದೆ. ಈಗಾಗಲೇ ಸಂಸ್ಥೆಯ ವತಿಯಿಂದ ವಿವಿಧ ಜಿಲ್ಲೆಗಳಲ್ಲಿ ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ, ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ರಾಷ್ಟ್ರೀಯ ಹಬ್ಬಗಳ ಆಚರಣೆ ಮತ್ತು ಮಹತ್ವ ಹಾಗೂ ಮಹಿಳಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಇದೇ ರೀತಿಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ‘ಜನರ ಹಿತವೇ ನಮ್ಮ ಹಿತ’ ವಾಗಿದೆ ಎಂದು ಜನ ಹಿತ ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀಮತಿ ರತ್ನ ಎಂ ರವರು ಸಂಸ್ಥೆಯ ಕಾರ್ಯಕ್ರಮಗಳನ್ನು ತಿಳಿಸಿದರು.  
ಡಾ. ಜಗನ್ನಾಥ ಕೆ. ಡಾಂಗೆ,  ಸಹ ಪ್ರಾಧ್ಯಾಪಕರು ಕುವೆಂಪು ವಿಶ್ವವಿದ್ಯಾಲಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಸಮಾಜದಿಂದ ಎಲ್ಲವನ್ನು ಪಡೆದ ನಾವುಗಳು ಮುಂದಿನ ಪೀಳಿಗೆಗಾಗಿ ಪಡೆದ ಒಂದಿಷ್ಟು ಸೌಲಭ್ಯಗಳನ್ನು ಪುನಃ ಸಮಾಜಕ್ಕೆ ನೀಡುವ ಜವಬ್ದಾರಿ ಪ್ರತಿ ಪ್ರಜೆಯ ಕರ್ತವ್ಯವಾಗಿದೆ. ಯುವ ಜನತೆಗೆ ಆಸಕ್ತಿ, ಅಭಿರುಚಿಗಳನ್ನು ಬೆಳೆಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸುವುದು ಪ್ರಸ್ತುತ ಸಮಾಜಕ್ಕೆ ಅಗತ್ಯವಾಗಿದೆ. ವಿದ್ಯಾವಂತರೆಲ್ಲ ತಮ್ಮ ತಮ್ಮ ಹಳಿಗಳಿಗೆ ಪುನಃ ತೆರಳಿ ಅಲ್ಲಿಯ ಸಾರ್ವಜನಿಕ ಕ್ಷೇತ್ರವನ್ನು ಅಬಿವೃದ್ಧಿಮಾಡುವಲ್ಲಿ ನಿರತರಾಗಕಬೇಕು. ಸಮಾಜಕ್ಕೆ ಅಂಟಿಕೊಂಡಿರುವ ಮೌಢ್ಯಗಳಿಂದ ಮುಕ್ತವಾಗಿ, ವೈಚಾರಿಕ ಹಾಗೂ ವೈಜ್ಞಾನಿಕ ಅರಿವು ಮೂಢಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು. ಸಂಸ್ಥೆವತಿಯಿಂದ ಪ್ರತಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಸಮಸ್ಯೆಗಳ ನಿರ್ಮೂಲನೆಗೆ ಸಮ್ಮೇಳನ ಹಾಗೂ ಕಾರ್ಯಕ್ರಮ ಆಯೋಜಿಸುವ ಗುರಿ ಹೊಂದಿರುವುದನ್ನು ತಿಳಿಸಿ, ಇಂತಹ ಕಾರ್ಯಕ್ಕಾಗಿ ಸಮಾಜದ ಎಲ್ಲ ಸಮುದಾಯಗಳು ಕೈಜೋಡೊಸಬೇಕಾಗಿ ಕರೆನೀಡಿದರು. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಜನ ಹಿತ ಸಭೆಯಂತಹ ಸ್ವಯಂ ಸೇವಾ ಸಂಸ್ಥೆಗಳು ಮಾಡುವಂತಹ ಉತ್ತಮ ಕಾರ್ಯಗಳು ಇತರರಿಗೂ ಸೇವೆ ಮಾಡುವವರಿಗೆ ಪ್ರೇರಣೆ ನೀಡುತ್ತವೆ ಎಂದು ಡಿ.ಪಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ನಿರಂಜನ ಮೂರ್ತಿಯವರು ತಿಳಿಸಿದರು. 
ಜನ ಹಿತ ಸಭಾ ದ ವತಿಯಿಂದ, ಜನ ಹಿತ ಸೇವಾ ಪ್ರಶಸ್ತಿ ಪ್ರದಾನ : ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ರುದ್ರೇಶ್ (ಕ್ರೀಡೆ), ದೇಶ ರಕ್ಷಣೆ ಸೇವೆ ಸಲಿಸಿದ ಶ್ರೀಯುತ ಎಮ್. ಜಿ. ಪ್ರಕಾಶ್, ಹಾಗೂ ಶ್ರೀಯುತ ಶಾಂತಕುಮಾರ್, ಶ್ರೀಯುತ ಸುಬ್ರಮಣ್ಯ (ಮಾಜಿ ಸೈನಿಕರು  ಹಾಗೂ ದೇಶೀಯ ಉತ್ಪನ್ನ ತಯಾರಿಕೆ), ಶ್ರೀಯುತ ಮುರುಗನ್ (ಪಕ್ಷಿಪ್ರೇಮಿ), ಶ್ರೀಯುತ ಪ್ರಶಾಂತ್ ಎಲ್. (ಪರಿಸರ ಸ್ವಚ್ಛತೆ-ಮಾರ್ಗ ಸಂಸ್ಥೆ),  ಶ್ರೀಮತಿ ಸುಮತಿ (ಸಾವಯವ ಕೃಷಿ) ಹಾಗೂ ಮಹಮದ್ ಲಥೀಫ್ ಉಲ್ಹಾ (ಕರಾಟೆ). ಇವರೆಲ್ಲರನ್ನು ಸಂಸ್ಥೆವತಿಯಿಂದ ಸನ್ಮಾನಿಸಲಾಯಿತು. 


ಜನ ಹಿತ ಸಭೆಯ ಚಿತ್ರದುರ್ಗ ಜಿಲ್ಲಾ ಸಂಚಾಲಕರಾದ ಡಾ. ಗಿರೀಶ್ ಟಿ ರವರು ಪ್ರಾಸ್ತವಿಕವಾಗಿ ಮಾತನಾಡಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು, ಬಿ.ಡಿ.ಪ್ರಶಿಕ್ಷಣಾರ್ಥಿಯಾದ ಈಶ್ವರಪ್ಪ ಸ್ವಾಗತಿಸಿದರು, ಎಸ್.ಎಸ್.ಕೆ.ಎಸ್. ಬಿ.ಇಡಿ. ಕಾಲೇಜಿನ ಉಪನ್ಯಾಸಕಿಯಾದ ಶ್ರೀಮತಿ ರೂಪ ಕಾರ್ಯಕ್ರಮವನ್ನು ನಿರೂಪಿಸಿದರು. ಜನ ಹಿತ ಸಂಸ್ಥೆಯ ದಾವಣಗೆರೆ ಜಿಲ್ಲಾ ಸಂಚಾಲಕರಾದ ಡಾ. ನಾಗರಾಜ್ ರವರು ಎಲ್ಲರನ್ನು ವಂದಿಸಿದರು, ಶಿವಮೊಗ್ಗ ಸಂಚಾಲಕರಾದ ಶ್ರೀ ಸೋಮಶೇಖರ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅನಿತ ಹಾಗೂ ಸಂಸ್ಥೆಯ ಉಪನ್ಯಾಕರು ವಿದ್ಯಾರ್ಥಿಗಳು, ಹಾಗೂ ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು ಹಾಜರಿದ್ದರು.

"64ನೇ ಕನ್ನಡ ರಾಜೋತ್ಸವ ಕಾರ್ಯಕ್ರಮ"

"ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಬಿ. ಇಡಿ. ಕಾಲೇಜ್ ಚಿತ್ರದುರ್ಗ
 "64ನೇ ಕನ್ನಡ ರಾಜೋತ್ಸವ ಕಾರ್ಯಕ್ರಮ"

ದಿನಾಂಕ:02:11:2019




“ಕನ್ನಡ ರಾಜೋತ್ಸವ”

ಸಮಾಜ, ಸಮುದಾಯದ ಜನತೆಯಲ್ಲಿ ಐಕ್ಯತೆಯನ್ನು ಮೂಡಿಸುವುದು ಭಾಷೆ. ಪರಸ್ಪರ ಸಂಬಂಧಗಳನ್ನು ಬೆಳೆಸುವುದು ನಮ್ಮ ನಾಡಿನ ಭಾಷೆ. ಭಾಷೆಯಲ್ಲಿ ಸಾಹಿತ್ಯವಿದೆ, ಕಲೆ, ಸಂಸ್ಕೃತಿ, ಮೌಲ್ಯ, ಜಿವನ ನೀತಿ, ಮಾದುರ್ಯತೆ, ಪ್ರೀತಿ ಎಲ್ಲವು ಸಹ ಇದೆ. ನಮ್ಮ ನಾಡಿನ ನಾಡ ಭಾಷೆ ಸಂಪರ್ಕ ಭಾಷೆ ಅಷ್ಟೇ ಅಲ್ಲದೇ ನಮ್ಮಗಳ ಜೀವನದಲ್ಲಿ ಬೆರೆತು ಹೋಗಿದೆ. ನಾವು ದಿನ ನಿತ್ಯ ಅದನ್ನು ಬಳಸುವ ಪರಿಪಾಠದಿಂದ ಭಾಷೆಯ ಬೆಳವಣಿಗೆಯಾಗುತ್ತದೆ ಎಂದು ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜಿಯವರು ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಬಿ. ಇಡಿ. ಕಾಲೇಜನಲ್ಲಿ ಏರ್ಪಡಿಸಿದ್ದ 64ನೇ ಕನ್ನಡ ರಾಜೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 
ಶಿಕ್ಷಕರಾದವರಿಗೆ ಭಾಷೆಯ ಶಬ್ದ ಭಂಡಾರದ ಸಂಗ್ರಹ ಹೆಚ್ಚ ಆದಂತೆ ಭಾಷೆಯ ಬಳಕೆ ಉತ್ತಮವಾಗುತ್ತದೆ. ಭಾಷೆ ಪ್ರಾವೀಣ್ಯತೆ ಶಿಕ್ಷಕರ ರೂಪ ಲಾವಣ್ಯವನ್ನು ಹೆಚ್ಚಿಸುತ್ತದೆ. ಶಿಕ್ಷಕರಾಗುವವರಿಗೆ ವಿಷಯಜ್ಞಾನದೊಂದಿಗೆ ಶಬ್ದಗಳನ್ನು ಸೃಜನಾತ್ಮವಾಗಿ ಬಳಸವುದು ಅಗತ್ಯವಾಗಿದೆ. ಕನ್ನಡ ಭಾಷೆಯಲ್ಲಿ ಒಂದ ಪದಕ್ಕೆ ವಿವಿಧ ಅರ್ಥಗಳಿವೆ, ಅವುಗಳನ್ನು ಗ್ರಹಿಸಬೇಕು. ಕನ್ನಡ ಭಾಷೆಯ ಪದಗಳು ಸಮಾಜ, ಸಂಸ್ಕೃತಿ, ಪ್ರಕೃತಿಯೊಂದಿಗೆ ಸಂಬಂಧಿಸುವ ಭಾಷೆಯಾಗಿದೆ, ಇದನ್ನು ಸಂದರ್ಭಕ್ಕನುಗುಣವಾಗಿ ಬಳಸುವ ಮೂಲಕ ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆಯಲು ಸಾಧ್ಯವಾಗುವುದು. ಹಾಗಾಗಿ ಶಿಕ್ಷಕರು ಮಕ್ಕಳಿಗೆ ಭಾಷೆ ಬಳಕೆ ಕೌಶಲ್ಯವನ್ನು ಹೆಚ್ಚು ಮಾಡಿದರೆ ವಿಷಯ ಜ್ಞಾನ ಹೆಚ್ಚುವುದು ಹಾಗೂ ಅವುಗಳ ಅರ್ಥ ಮೌಲ್ಯಗಳನ್ನು ಕಲಿಸಲು ಸಾಧ್ಯ, ಇದರಿಂದಾಗಿ ನಮ್ಮ ಭಾಷೆ ಬೆಳವಣಿಗೆ ಸಾಧ್ಯ.  ಮಕ್ಕಳು ಶಿಕ್ಷಕರನ್ನು ಅನುಸರಿಸಿ ಕಲಿಯುವುದರಿಂದ ಶಿಕ್ಷಕರು ಮಕ್ಕಳಿಗೆ ಆದರ್ಶವಾದ ವ್ಯಕ್ತಿತ್ವವನ್ನು ರೂಡಿಸಿಕೊಳ್ಳಬೇಕು. ಅದಕ್ಕಾಗಿ ಶಿಕ್ಷಕನಾದವನು ನಿತ್ಯ ಅಭ್ಯಾಸಶೀಲನಾಗಬೇಕು, ನಿರಂರತ ಅಭ್ಯಾಸದಿಂದ ಭಾಷೆಯ ಪ್ರಾವೀಣ್ಯತೆ ಹೆಚ್ಚವುದು, ಆಗ ನಮ್ಮ ಭಾಷೆ ಅಪ್ಯಾಯ ಮಾನವಾದ ಭಾಷೆಯಾಗುತ್ತದೆ. 
ಮುಖ್ಯ ಅತಿಥಿಗಳಾ ಮಾತನಾಡಿದ ಶ್ರೀ ನಿರಂಜನಮೂರ್ತಿಯವರು, ಭಾಷೆ ಒಂದು ನಿರ್ದಿಷ್ಟ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಭಿನ್ನತೆಯನ್ನು ಪಡೆಯುತ್ತದೆ, ಕನ್ನಡ ಸಾಹಿತ್ಯದ ಕತೆ, ಕಾದಾಂಬರಿ, ಕವಿತೆ ಓದುವುದು ಭಾಷೆಯಲ್ಲಿ ಆಸಕ್ತಿಯನ್ನು ಉಂಟು ಮಾಡುತ್ತದೆ. ಭಾಷೆ ಒಂದು ನಾಡಿನ ಒಗ್ಗೂಡಿಸುವಲ್ಲಿ ಮಹತ್ವವನ್ನು ಪಡೆದುಕೊಂಡಿದೆ ಎಂದು ತಿಳಿಸಿದರು. ಆಂಗ್ಲ ವ್ಯಾಮೋಹ ಕಡಿಮೆ ಮಾಡಿಕೊಂಡು ನಮ್ಮ ಕನ್ನಡ ಮಾತೃ ಭಾಷೆಯ ಶಿಕ್ಷಣಕ್ಕೆ ಒತ್ತು ಕೊಡಬೇಕೆಂದು ತಿಳಿಸಿದರು.
ಉಪನ್ಯಾಸಕಿಯಾದ ಶ್ರೀಮತಿ ರೂಪ ಮಾತನಾಡಿ, ಪ್ರಸ್ತುತ ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಅದರ ಸ್ಥಾನಮಾನ ಕುಂಟಿತವಾಗುತ್ತಿದೆ, ಇಂದಿನ ಯುವ ಪೀಳಿಗೆ ಪರಭಾಷೆಗೆ ವ್ಯಾಮೋಹಿತರಾಗದೆ ಕನ್ನಡ ಭಾಷೆಯನ್ನು ಉಳಿಸುವ ಬೆಳೆಸುವ ಸಂಘಟಿತ ಪ್ರಯತ್ನಗಳಲ್ಲಿ ತೊಡಗಬೇಕೆಂದು ತಿಳಿಸಿದರು.
ಪ್ರಾಂಶುಪಾಲರಾದ ಡಾ. ಗಿರೀಶ್ ಟಿ. ಮಾತನಾಡಿ, ಕನ್ನಡವೆಂಬುದು  ಕೇವಲ ಸಂಪರ್ಕ ಭಾಷೆಯಲ್ಲ, ಅದು ನಮ್ಮ ಜೀವದಾತೆ, ಜನ್ಮದಾತೆ. ನಮ್ಮ ಬದುಕನ್ನು, ಭವಿಷ್ಯನ್ನು ನಿರ್ಮಿಸುವುದು ಕನ್ನಡ ಭಾಷೆ. ನಿತ್ಯ ನಾವುಗಳು ಬಳಸುವ ಪದಾರ್ಥಗಳ ಹೆಸರುಗಳು ಸಹ ಆಂಗ್ಲಮಹವಾಗಿವೆ. ಉದಾರೀಕರಣ ಹಾಗೂ ಜಾಗತೀಕತಣದ ಭರಾಟೆಯಲ್ಲಿ ಒಂದು ಪ್ರಾಂತ್ಯದ ಜನರ ಜೀವನಾಡಿಯಾದ ಭಾಷೆಯನ್ನು ಕೆಳಮಟ್ಟದಲ್ಲಿ ನೋಡುವಂತಹ ಕೀಳು ಭಾವನೆ ರೂಢಿಗತವಾಗುತ್ತಿದೆ, ಇದು ಮೊದಲು ದೂರವಾಗಬೇಕು. ಪರಭಾಷೆಯ ವ್ಯಾಮೋಹದಿಂದ ಕನ್ನಡ ಮಾಧ್ಯಮದ ಶಾಲೆಗಳ ಸ್ಥಿತಿ ಅಸ್ಥಿರವಾಗುತ್ತಿದೆ. ಅದಕ್ಕಾಗಿ ನಾವುಗಳು ಮೊದಲು ನಮ್ಮ ಪರಿಸರದಲ್ಲಿ ನಮ್ಮ óಭಾಷೆಯನ್ನು ನಿತ್ಯ ಬಳಸುವ ಪರಿಪಾಠ ಬೆಳೆಸಿಕೊಳ್ಳಬೇಕು, ಭಾಷೆಯನ್ನು ಸೃಜನಾತಕವಾಗಿ ಪ್ರಯೋಗಿಸುವ ಚಟುವಟಿಕೆಯನ್ನು ಇಂದಿನ ಜನತೆಗೆ ರೂಢಿತಗಮಾಡಬೇಕಾಗಿದೆ. ನಮ್ಮ ಮನಸ್ಸಿನ ರಸಭಾವಗಳನ್ನು ವ್ಯಕ್ತ ಪಡಿಸುವದು ನಮ್ಮ ಮಾತೃಭಾಷೆಯಿಮದ ಸಾಧ್ಯ, ಅದು ಎಷು ಕಾರ್ಯರೂಕ್ಕೆ ಒಳಪಡುವುದೋ ಅಷ್ಟು ಭಾಷಾ ಪರಿಣಿತ ಬೆಳೆಯಲು ಸಾಧ್ಯ, ಹಾಗಾಗಿ ಸೀಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ತಮ್ಮ ಪ್ರತಿಭೆಗಳನ್ನು ಬೆಳೆಸಿಕೊಳ್ಳಬೇಕು. ಇಂತಹ ಪ್ರಯತ್ನದಿಂದ ನಮ್ಮ ನಾಡು, ನುಡಿ, ಸಂಸ್ಕøತಿ, ಕಲೆಗಳನ್ನು ಉಳಿಸಲು ಸಾಧ್ಯವಾಗುವುದುತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ನೇತ್ರಾವತಿ, ಶ್ರೀ ವಿಜಯ್ ಕುಮಾರ್, ಶ್ರೀಪ್ರಶಾಂತ್, ಕು. ಭುವನೆಶ್ವರಿ ಕಾರ್ಯಕ್ರಮವನ್ನ ಕುರಿತು ಮಾತನಾಡಿದರು, ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಗಳು ರಮೇಶ್ ಮತ್ತು ಮೋಹನ್ ನಿರೂಪಿಸಿದರು, ಈಶ್ವರಪ್ಪ ನಾಡಗೀತೆ & ರೈತಗೀತೆ ಹಾಡಿದರು,ಕಾವ್ಯ ವಂದಿಸಿದರು. 
 ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ವಿಶೇಷವಾಗಿ ಕನ್ನಡ ಪದ್ಯಗಳಿಗೆ ಕೋಲಾಟ ನೃತ್ಯ ನಡೆಸಿಕೊಟ್ಟರು.







“ ಮಾಜಿ ಸೈನಿಕರಾದ ಶ್ರೀ ಪ್ರಕಾಶ್ ರವರಿಂದ ಸ್ವಾತಂತ್ರ್ಯೋತ್ಸವ ದಿನದ ಧ್ವಜಾರೋಹಣ ”


ದೇಶದ ಜನತೆ ಶಾಂತಿ ಮತ್ತು ಸ್ವಾವಲಂಬನೆಯಿಂದ ಜೀವನ ನಡೆಸಬೇಕೆಂದರೆ ಪ್ರತಿಪ್ರಜೆಯಲ್ಲಿ ದೇಶಭಕ್ತಿ, ದೇಶಪ್ರೇಮ ಅಗತ್ಯವಾದುದು. ಸ್ವಾತಂತ್ರ್ಯ ಪಡಿಯಲು ಹೋರಾಡಿದ ಸಾವಿರಾರು ಹೋರಾಟಗಾರರ ಹೋರಾಟ, ಬಲಿದಾನಗಳಿಂದ ನಾವೇಲ್ಲರೂ ಸ್ವತಂತ್ರದಿಂದ ಬದುಕುವಂತಾಗಿದೆ. ನಮ್ಮ ಇಂದಿನ ಸ್ವತಂತ್ರದ ಬದುಕಿಗೆ ಕಾರಣಕರ್ತರಾದ ಅಸಂಖ್ಯಾತ ದೇಶಪ್ರೇಮಿಗಳನ್ನು ಸ್ಮರಿಸುವ ಸುದಿನವಾಗಿದೆ ಎಂದು ಮಾಜಿ ಸೈನಿಕರಾದ ಶ್ರೀ ಪ್ರಕಾಶ್ ರವರು ಶ್ರೀ ಸದ್ಗುರು ಕಬೀರಾನಂದಸ್ವಾಮಿ ಬಿ.ಇಡಿ. ಮತ್ತು ನರ್ಸಿಂಗ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಭವಿಷ್ಯದ ಸಮಾಜಕ್ಕೆ ಈ ದಿನದ ಮಹತ್ವವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ತಿಳಿಸುವ ಪ್ರಯತ್ನವನ್ನು ನಾವು ಮಾಡಬೇಕು. ದೇಶಾಭಿಮಾನ ನಮ್ಮ ಸಮಾಜದ, ಸಂಸ್ಕøತಿಯ ಒಂದು ಭಾಗವಾಗಬೇಕು. ಶಿಕ್ಷಣದ ಪ್ರಾರಂಭದ ಅವಧಿಯಲ್ಲಿಯೇ ದೇಶಪ್ರೇಮದ ಪರಿಚಯ ಹಾಗೂ ಪರಿಪಾಠವನ್ನು ರೂಢಿಸಬೇಕು. ಸಮಾಜದ ಹಲವು ಸಮಸ್ಯೆಗಳಿಗೆ ನಮ್ಮಲ್ಲಿರುವ ಹಣ, ಆಸ್ತಿಯ ವ್ಯಾಮೋಹವೇ ಕಾರಣವಾಗಿದೆ, ಇಂತಹ ಸಮಸ್ಯೆಗೆ ನಮ್ಮಿಂದ ಸಾಧ್ಯವಾಗುವ ಪರಿಹಾರವನ್ನು ನಾವೇ ಕಂಡುಕೊಳ್ಳಬೇಕು. ವಿದ್ಯಾರ್ಥಿಗಳು ದಿನನಿತ್ಯ ಓದುವುದನ್ನು ರೂಢಿಸಿಕೊಳ್ಳಬೇಕು, ನೈಜ ಇತಿಹಾಸವನ್ನು ತಿಳಿಯಬೇಕು. ದೇಶೀಯ ವಸ್ತುಗಳು ಹಾಗೂ ಉತ್ಪನ್ನಗಳನ್ನು ಬಳಸುವುದನ್ನು ರೂಢಿಸಿಕೊಳ್ಳಬೇಕು ಹಾಗೂ ಇತರರಿಗೂ ತಿಳಿಸಬೇಕು. ಇಂತಹ ಪ್ರಯತ್ನಗಳಿಂದ ದೇಶವನ್ನು ಆಧುನಿಕ ಗುಲಾಮಗಿರಿಯಿಂದ ಹೊರತರಬೇಕು. ಅಮೂಲ್ಯವಾದ ಮಾನವ ಜೀವನವನ್ನು ಸಂತೋಷದಿಂದ ನೆಮ್ಮದಿಯಿಂದ ಸನ್ಮಾರ್ಗದಲ್ಲಿ ನಡೆಸುವಂತೆ ಕರೆನೀಡಿದರು ಹಾಗೂ ಸೈನಿಕ ಸೇವೆಯ ಅನಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.  

ಡಿ.ಪಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ನಿರಂಜನಮೂರ್ತಿಯವರು ಮಾತನಾಡಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟನೆಗಳನ್ನು ತಿಳಿಸಿ, ಪ್ರಸ್ತುತ ಸಮಾಜದಲ್ಲಿ ನಾವೆಲ್ಲರೂ ಸ್ವತಂತ್ರರು, ನಮಗೆ ಸಿಕ್ಕಿರುವ ಈ ಅಮೂಲ್ಯವಾದ ಸ್ವಾತಂತ್ರ್ಯವನ್ನು ನಾವುಗಳು ನಮ್ಮ ಉತ್ತಮ ಜೀವನವನ್ನು ಕಟ್ಟಿಕೊಂಡರೆ ಸಾರ್ಥವಾಗುತ್ತದೆ. ಎಲ್ಲ ಬೇಧಭಾವಗಳನ್ನು ಮರೆತು ನಾವೇಲ್ಲರೂ ಭಾರತೀಯರೆಂಬ ಏಕತೆಯ ಭಾವನೆ ನಮ್ಮಲ್ಲಿ ಇಂದು ಮೂಡುವಂತಾಗಿದೆ. ಸ್ವಾವಲಂಬನೆ, ಶಿಸ್ತು, ಸರಳತೆಯ ಜೀವನವನ್ನು ರೂಢಿಸಿಕೊಳ್ಳಬೇಕು. ಮಹಾತ್ಮಗಾಂಧೀಜಿಯವರ ಸರಳತೆ, ಅಹಿಂಸಾ ತತ್ವದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಬಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ರವರು ಮಾತನಾಡುತ್ತಾ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ನಾವೇಲ್ಲರೂ ಭಾರತೀಯರೆಂಬ ದೇಶಾಭಿಮಾನ ಬೆಳೆಯುವಂತಹ ದೃಢನಿರ್ಧಾರವನ್ನು ಕೈಗೊಂಡ ಸರ್ಕಾರಕ್ಕೆ ಹಾಗೂ ದೇಶದ ಪ್ರಧಾನಮಂತ್ರಿಯಾದ ಸನ್ಮಾನ್ಯ ನರೇಂದ್ರಮೋದಿಯವರಿಗೆ ಕೃತಜ್ಞತೆಗಳನ್ನು ತಿಳಿಸಿದರು. ಸ್ವತಂತ್ರ ಹೋರಾಟದ ಧೃವತಾರೆಗಳಾದ ಮಹಾತ್ಮಗಾಂಧೀ, ಭಗತ್‍ಸಿಂಗ್, ಸುಭಾಷ್ ಚಂದ್ರಬೋಸ್‍ರ ದೇಶಾಭಿಮಾನದ ಹೋರಾಟವನ್ನು ನೆನಪಿಸಿದರು. ದೇಶಾಭಿಮಾನವು ಮಾನವ ಮಾನವರ ಮಧ್ಯೆ ಉತ್ತಮ ಭಾಂದವ್ಯ, ಸಹಬಾಳ್ವೆ ಸಹಕಾರ ಹಾಗೂ ಭ್ರಾತೃತ್ವದ ಭಾವನೆಯನ್ನು ಬೆಳೆಸಬೇಕು. ಅಂಧ ದೇಶಾಭಿಮಾನದಿಂದ ಯುವ ಜನತೆ ಸಮಸ್ಯೆಗಳಲ್ಲಿ ಸಿಲುಕುತ್ತಿದ್ದಾರೆ. ದೇಶಾಭಿಮಾನ ಎನ್ನುವುದು ಭೌತಿಕವಾಗಿ ಕಾಣವುದಲ್ಲ, ಅದನ್ನು ಭಾವನಾತ್ಮಕತೆಗೆ ಸೀಮಿತಗೊಳಿಸದೆ, ದೇಶಾಭಿಮಾನವು ನಮ್ಮ ದಿನನಿತ್ಯದ ಬದುಕಿನಲ್ಲಿ ನಾವೇ ರೂಢಿಸಿಕೊಳ್ಳುವುದಾಗಿದೆ ಎಂದು ತಿಳಿಸಿದರು. ಉಪನ್ಯಾಸಕರಾದ ಹಾಗೂ ಮಾಜಿ ಸೈನಿಕರಾದ ಶ್ರೀ ಪ್ರಕಾಶ್‍ರವರ ಪತ್ನಿ  ಶ್ರೀಮತಿ ರೂಪರವರು ಮಾತನಾಡಿ ರಾಷ್ಟ್ರೀಯ ಹಬ್ಬಗಳು ನಮ್ಮ ಮನೆಯ ಹಬ್ಬಗಳಂತೆ ಅತ್ಯಂತ ಸಂಭ್ರಮದಿಂದ ಆಚರಿಸುವಂತಾಗಬೇಕು, ಅಂತಹ ದೇಶಾಭಿಮಾನ ಇಂದಿನ ಯುವಶಕ್ತಿಗೆ ಬೆಳೆಸಿಕೊಳ್ಳುವಂತೆ ಕರೆನೀಡಿದರು. ಶ್ರೀಮತಿ ನೇತ್ರಾವತಿಯವರು ಸ್ವತಂತ್ರ ಹೋರಾಟಗಾರರ ಹೋರಾಟದ ಘಟನೆಗಳನ್ನು ತಿಳಿಸಿದರು. ಬಿ.ಇಡಿ. ಉಪನ್ಯಾಸಕರಾದ ವಿಜಯ್ ಕುಮಾರ್, ಪ್ರಶಾಂತ್ ಹಾಗೂ ಪ್ಯಾರಮೇಡಿಕಲ್ ಕಾಲೇಜಿ ಪ್ರಾಂಶುಪಾಲರಾದ ಶ್ರೀ ರಾಘವೇಂದ್ರರವರು, ಐಶ್ವರ್ಯ ಮತ್ತು  ಬಿ.ಇಡಿ. ಹಾಗೂ ನರ್ಸಿಂಗ್, ಪ್ಯಾರಮೇಡಿಕಲ್ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ನಡೆಸಿಕೊಟ್ಟರು.


Farewell party of B.Ed students -2017-18


S.S.K.S. COLLEGE OF EDUCATION, CHITRADURGA  

 Farewell party of B.Ed students -2017-18

15-12-2018

         “¢éwÃAiÀÄ ªÀµÀðzÀ ©.Er. ¥Àæ²PÀëuÁyðUÀ½UÉ ¸ÀªÀiÁgÉÆÃ¥À ¸ÀªÀiÁgÀA¨sÀ ºÁUÀÆ ¥ÀæweÁÕ«¢ü” PÁAiÀÄðPÀæªÀÄ 







²æà ¸ÀzÀÄÎgÀÄ ²ªÀ°AUÁ£ÀAzÀ ¸Áé«ÄfAiÀĪÀgÀÄ, ²æà ¸ÀzÀÄÎgÀÄ PÀ©ÃgÁ£ÀAzÀ D±ÀæªÀÄ avÀæzÀÄUÀð.


qÁ. C£ÀAvÀgÁªÀiï, rãÀgÀÄ, ²PÀët CzsÀåAiÀÄ£À «¨sÁUÀ zÁªÀtUÉgÉ «±Àé«zÁå®AiÀÄ 

                   ²æà ¤gÀAd£ÀªÀÄÆwð ¥ÁæA±ÀÄ¥Á®gÀÄ, J¸ï.J¸ï.PÉ.J¸ï. r.¦.Er. PÁ¯ÉÃeï


²æêÀÄw C¤vÀ, ¥ÁæA±ÀÄ¥Á®gÀÄ, J¸ï.J¸ï.PÉ.J¸ï. £À¹ðAUï PÁ¯ÉÃeï. 



ಉತ್ತಮ ಸಮಾಜದ ನಿರ್ಮಾತೃ ಶಿಕ್ಷಕ ” -ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜಿಯವರು


ಸಮಾಜದಲ್ಲಿ ಶಿಕ್ಷಕ ನಿಜವಾದ ಮಾತೃ ಸ್ಥಾನದಲ್ಲಿದ್ದಾನೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ವಿಷಯ ಜ್ಞಾನದೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸುವ ಕಾರ್ಯದಲ್ಲಿ ತೊಡಗಿದ್ದಾನೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನೆ ಅನುಕರಣೆ ಮಾಡುವುದು ಸಹಜವಾದುದು, ಹಾಗಾಗಿ ಶಿಕ್ಷಕರು ಉತ್ತಮ ರೂಢಿಗಳನ್ನು ಮಕ್ಕಳಿಗೆ ರೂಢಿಸವುದು ಅಗತ್ಯವಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿಗೆ ಶಿಕ್ಷಕನೆ ಪ್ರಮುಖ ಪಾತ್ರವಹಿಸುವವನಾಗಿದ್ದು, ಶಿಕ್ಷಕ ನಿಜವಾದ ದೇಶ ನಿರ್ಮಾತೃವಾಗಿದ್ದಾನೆ. ವಿದ್ಯಾರ್ಥಿಗಳನ್ನು ಉತ್ತಮ ಜ್ಞಾನವಂತರನ್ನಾಗಿ ಮಾಡುವುದರೊಂದಿಗೆ ಉತ್ತಮ ನಾಗರೀಕ ಗುಣಗಳನ್ನು ಬೆಳೆಸಬೇಕು ಎಂದು ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜಿಯವರು ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಬಿ. ಇಡಿ. ಕಾಲೇಜನಲ್ಲಿ ಏರ್ಪಡಿಸಿದ್ದದ್ವಿತೀಯ ವರ್ಷದ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಸಮಾರೋಪ ಸಮಾರಂಭ ಹಾಗೂ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ  ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಶಿಕ್ಷಕನ ಕೆಲಸ ಪ್ರತಿ ಮಗುವಿಗೂ ಜೀವನದ ಬೆಳಕನ್ನು ಬೆಳಗಿಸುವ ಕಾರ್ಯ. ತಾನು ಕಲಿತ ಜ್ಞಾನವನ್ನು ಮಕ್ಕಳಿಗೆ ಕಲಿಸುವ ಮೂಲಕ ಜ್ಞಾನಜ್ಯೋತಿಯನ್ನು ಬೆಳಗಿಸುವಂತಾಗಬೇಕು. ಪ್ರತಿ ವಿದ್ಯಾರ್ಥಿಯ ಕಲಿಕೆ ಸಮಸ್ಯೆಯನ್ನು ಪರಿಹರಿಸಿ ಜೀವನಕ್ಕೆ ಅಗತ್ಯವಾದ ಜ್ಞಾನ ಮತ್ತು ಕೌಶಲಗಳೊಂದಿಗೆ ಮೌಲ್ಯಗಳನ್ನು ಕಲಿಸಬೇಕು. ಶಿಕ್ಷಕ ತರಬೇತಿ ಪೂರ್ಣಗೊಳಿಸಿ ಹೊರಹೋಗುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಉತ್ತಮ ಶಿಕ್ಷಕರಾಗಿ ಎಂದು ಸ್ವಾಮಿಜಿಯವರು ಹಾರೈಸಿದರು.
ಮುಖ್ಯ ಅತಿಥಿಕಾಗಿದ್ದ ಡಾ. ಅನಂತರಾಮ್, ಡೀನರು, ಶಿಕ್ಷಣ ಅಧ್ಯಯನ ವಿಭಾಗ ದಾವಣಗೆರೆ ವಿಶ್ವವಿದ್ಯಾಲಯ ಇವರು ಮಾತನಾಡಿ, ಶಿಕ್ಷಕನ ಕೆಲಸ ಕಲಿಕೆಯನ್ನು ವರ್ಗಾಹಿಸುವುದಲ್ಲ ಬದಲಾಗಿ ವಿದ್ಯಾರ್ಥಿಗಳಲ್ಲಿ ಜ್ಞಾನ ಅನ್ವೇಷಣೆಯ ಕೌಶಲ ಬೆಳೆಸುವುದು. ಶಿಕ್ಷಕನ ಬೋಧನೆ ಯಾಂತ್ರಿಕ ಬೋಧನೆಯಾಗಬಾರದು. ಕಲಿಕೆ ಜೀವಂತ ಅನುಭವಗಳನ್ನು ನೀಡಬೇಕೆಂದರೆ ಶಿಕ್ಷಕಕು ಪ್ರತಿನಿತ್ಯದ ತರಗತಿಗೆ ಪೂರ್ಣಸಿದ್ದತೆಯೊಂದಿಗೆ ಪಾಠ ಬೋಧನೆಯಲ್ಲಿ ತೊಡಗಬೇಕು. ಶಿಕ್ಷಕ ಕೇವಲ ಪಠ್ಯಪೂರ್ಣಗೊಳಿಸಲು ಮಾತ್ರ ಒತ್ತು ಕೊಡಬಾರದು. ವಿದ್ಯಾರ್ಥಿ ಏನನ್ನು ಕಲಿತಿದ್ದಾನೆ, ಎಷ್ಟು ಕಲಿತಿದ್ದಾನೆ ಎಂಬ ಮನವರಿಕೆಯೊಂದಿಗೆ ಎಲ್ಲ ವಿದ್ಯಾರ್ಥಿಗಳ ಕಡೆ ಗಮನಹರಿಸಬೇಕು. ಶಿಕ್ಷಕರಿಗೆ ವೃತ್ತಿ ಬದ್ಧತೆ ಬಹಳ ಮುಖ್ಯವಾದುದು, ಎಲ್ಲಿ ವೃತ್ತಿಬದ್ದತೆ ಪೂರ್ಣಪ್ರಮಾಣದಲ್ಲಿರುತ್ತದೊ ಅಲ್ಲಿ ವಿದ್ಯಾರ್ಥಿಗಳ ಯಶಸ್ಸು ದೊರೆಯುತ್ತದೆ. ವಿದ್ಯಾಥಿಗಳನ್ನು ಹೆಚ್ಚು ಗೊಂದಲಗಳಿಗೆ ಸಿಲುಕಿಸದೆ, ಕಲಿಕೆಗೆ ಸದಾ ಪ್ರೇರಣೆಯ ಚಟುವಟಿಗಳನ್ನು ಅಳವಡಿಸಬೇಕು. ವಿದ್ಯಾರ್ಥಿಗಳನ್ನು ಅಂಕ ಗಳಿಕೆಗೆ ಸಿದ್ಧ ಮಾಡುವುದನ್ನು ಬಿಟ್ಟು ದೇಶಕ್ಕೆ ಉತ್ತಮ ಪ್ರಜೆಯನ್ನಾಗಿ ಮಾಡುವ ಕಾರ್ಯ ಮಾಡಬೇಕಿದೆ. ಶಿಕ್ಷಕರು ಸಮಾಜದ ಸುತ್ತಮುತ್ತಲ ಪರಿಸರದ ವಾಸ್ತವತೆಯ ಜ್ಞಾನವನ್ನು ನೀಡಬೇಕು. ಶಿಕ್ಷಕರು ಜೀವನ ಕೌಶಲ್ಯವನ್ನು ಹಾಗೂ ಗೌರವದ ಮೌಲ್ಯಗಳನ್ನು ಕಲಿಸಬೇಕಾಗಿದೆ. ಇಂತಹ ಜ್ಞಾನ, ಮೌಲ್ಯಗಳನ್ನು ರೂಢಿಸಿಕೊಳ್ಳುವಂತೆ ಪ್ರಶಿಕ್ಷಣಾರ್ಥಿಗಳಿಗೆ ಕರೆನೀಡಿದರು.

ಮತ್ತೊರ್ವ ಮುಖ್ಯ ಅತಿಥಿಗಳಾದ ಶ್ರೀ ನಿರಂಜನಮೂರ್ತಿ ಪ್ರಾಂಶುಪಾಲರು, ಎಸ್.ಎಸ್.ಕೆ.ಎಸ್. ಡಿ.ಪಿ.ಇಡಿ. ಕಾಲೇಜಿನ ಇವರು ಮಾತನಾಡಿ ಶಿಕ್ಷಕರು ಸದಾ ಅಧ್ಯಯನದಲ್ಲಿ ತೊಡಿದಾಗ ಉತ್ತಮ ಬೋಧನೆಗೆ ಸಹಕಾರಿಯಾಗುವುದು. ಮಕ್ಕಳಿಗೆ  ಕೇವಲ ಪರೀಕ್ಷಾ ದೃಷ್ಟಿಯಿಂದ ಬೋಧಿಸುವುದು ಬಿಡಬೇಕು, ಮಕ್ಕು ಜ್ಞಾನವನ್ನು ಚಿಂತಿಸುವ, ಆಲೋಚಿಸುವ ಹಾಗೂ ಜೀವನದ ಸನ್ನಿವೇಶಕ್ಕೆ ಅಳವಡಿಸಿಕೊಳ್ಳುವಂತಹ ಶಿಕ್ಷಣ ನೀಡಬೇಕು ಎಂದು ತಿಳಿಸಿದರು. ಶಿಕ್ಷಕರು ಸ್ವಾರ್ಥರಹಿತ, ಸ್ವಜನ ಪಕ್ಷಪಾತ ಇಂತಹ ಗುಣಗಳಿಂದ ಮುಕ್ತರಾಗಿ ವಿದ್ಯಾರ್ಥಿಗಳಿಗೆ ಆದರ್ಶವಾದ ಅನುಕರನೀಯ ವ್ಯಕ್ತಿತ ಗುಣವಳನ್ನು ರೂಢಿಸಿಕೊಳ್ಳಬೇಕೆಂದುಎಸ್.ಎಸ್.ಕೆ.ಎಸ್ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅನಿತರವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದಡಾ. ಗಿರೀಶ್ ಟಿ ವಹಿಸಿ ತರಬೇತಿಯ ಅವಧಿಯಲ್ಲಿ ಕಲಿತ ಜ್ಞಾನ ಮತ್ತು ಬೋಧನಾ ಕೌಶಲಗಳನ್ನು ತರಗತಿಯಲ್ಲಿ ಅಳವಡಿಸಿಕೊಂಡು ಉತ್ತಮವಾಗಿ ಬೋಧಿಸುವಂತೆ ತಿಳಿಸಿದರು. ಉಪನ್ಯಾಸಕರಾದ ಶ್ರೀಮತಿ ರೂಪ ಪ್ರಾಸ್ತವಿಕವಾಗಿ ಮಾತನಾಡಿ, ಶಿಕ್ಷಕ ವೃತ್ತಿಯ ಮಹತ್ವ ಮತ್ತು ಶಿಕ್ಷಕರಾಗಿ ನಮ್ಮಗಳ ಪಾತ್ರವೆನಂಬುದನ್ನು ತಿಳಿಸಿ ಅತಿಥಿಗಳನ್ನು ಸ್ವಾಗತಿಸಿದರು, ಉಪನ್ಯಾಸಕರಾದ ಶ್ರೀಮತಿ ನೇತ್ರಾವತಿ, ಶ್ರೀ ವಿಜಯ್ ಕುಮಾರ್, ಶ್ರೀಮತಿ ಉಷಾ, ಶ್ರೀಪ್ರಶಾಂತ್, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರುಶಿಕ್ಷಕ ತರಬೇತಿ ಪೂರ್ಣಗೊಳಿಸಿ ಹೊರಹೋಗುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಪ್ರಥಮ ವರ್ಷದ ಬಿ.ಇಡಿ.ಪ್ರಶಿಕ್ಷಣಾರ್ಥಿಗಳು ಸ್ನೇಹದ ಸಂಕೇತವಾಗಿ ನೆನಪಿನಕಾಣಿಕೆ ಕೊಟ್ಟು ಬೀಳ್ಕೊಟ್ಟರು.



¢éwÃAiÀÄ ªÀµÀðzÀ ¥Àæ²PÀëuÁyðUÀ½UÉ ¥ÀæxÀªÀÄ ªÀµÀðzÀ ©.Er. ¥Àæ²PÀëuÁyðUÀ½AzÀ ¸ÉßúÀzÀ ¸ÀAPÉÃvÀªÁV £É£À¦£ÀPÁtÂPÉ «vÀgÀuÉ 


“ರಾಷ್ಟ್ರೀಯ ಶಿಕ್ಷಣ ದಿನಾಚರಣೆ”

ಭಾರತದ ಸ್ವತಂತ್ರ್ಯ ಹೋರಾಟಗಾರ, ಸ್ವತಂತ್ರ್ಯ ಭಾರತದ ಪ್ರಥಮ ಶಿಕ್ಷಣ ಸಚಿವರಾದ ‘ಮೌಲಾನಾ ಅಬುಲ್ ಕಲಾಂ ಆಜಾದ್’ ರವರ ಜನ್ಮ ದಿನವನ್ನು “ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ” ಆಚರಿಸಲಾಗುತ್ತಿದೆ  ಎಂದು ‘ಎಸ್.ಎಸ್.ಕೆ.ಎಸ್.  ಶಿಕ್ಷಣ ಮಹಾವಿದ್ಯಾಲಯದ’ ಪ್ರಾಂಶುಪಾಲರಾದ ‘ಡಾ. ಗಿರೀಶ್ ಟಿ’ ತಿಳಿಸಿದರು, ಚಿತ್ರದುರ್ಗ ನಗರದ ಶ್ರೀ ಸದ್ಗುರು ಕಬೀರಾನಂದ ಬಿ. ಇಡಿ. ಕಾಲೇಜನಲ್ಲಿ ಏರ್ಪಡಿಸಿದ್ದ “ರಾಷ್ಟ್ರೀಯ ಶಿಕ್ಷಣ ದಿನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 
ಅಬುಲ್ ಕಲಾಂ ಆಜಾದ್ ರವರು ಮಹಾತ್ಮ ಗಾಂಧೀಜಿಯವರ ಆತ್ಮೀಯ ಒಡನಾಡಿಯಾಗಿ ಭಾರತ ಸ್ವತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡವರು. ಅತ್ಯುತ್ತಮ ಬರಹಗಾರರಾದ ಕಲಾಂರವರು ತನ್ನ ಲೇಖನಗಳ ಮೂಲಕ ಬ್ರಿಟಿಷರ ಆಡಳಿತದ ವಿರುದ್ಧ ಹಾಗೂ ಭಾರತೀಯರಲ್ಲಿ ಹೋರಾಟ ಸಂಘಟನೆದ ಮನೋಭಾವನೆಯ ವಿಚಾರಗಳನ್ನು ಬರೆಯುತ್ತಿದ್ದರು. ಸ್ವತಂತ್ರ್ಯ ಹೋರಾಟದಲ್ಲಿ ಹಲವುಬಾರಿ ಸೆರೆಮನೆ ವಾಸವನ್ನು ಸಹ ಅನುಭವಿಸಿದರು. ಕಲಾಂರು ಭಾರತೀಯ ಕಾಂಗ್ರೇಸ್‍ನ ಅಧ್ಯಕ್ಷರಾಗಿಯೂ ಸಹ ಕಾರ್ಯ ನಿರ್ವಹಿಸಿದರು. ಜೀವನಪೂರ್ಣ ಹಿಂದೂ-ಮುಸ್ಲಿಂರ ಐಕ್ಯತೆಗಾಗಿ ಶ್ರಮಿಸಿದ ಅಪ್ಪಟ ಭಾರತೀಯ. ದೇಶ ವಿಭಜನೆಯನ್ನು ವಿರೋಧಿಸಿ, ಅಖಂಡ ಭಾರತ ರಚನೆಗೆ ಒತ್ತು ನೀಡಿದವರು. ಸ್ವತಂತ್ರ್ಯ ಭಾರತದ ಸಚಿವ ಸಂಪುಟದಲ್ಲಿ ಇವರು ಪ್ರಥಮ ಶಿಕ್ಷಣ ಸಚಿವರಾಗಿ, ಶಿಕ್ಷಣದಲ್ಲಿ ಅಮೂಲಾಗ್ರ ಕಾರ್ಯಗಳನ್ನು ಮಾಡಿದವರು. ಭಾರತದ ಶಿಕ್ಷಣಕ್ಕೆ ಭದ್ರ ತಳಹದಿಯನ್ನು ರೂಪಿಸಿದವರು. ಶಿಕ್ಷಣ ವ್ಯವಸ್ಥೆ ಹಾಗೂ ಉನ್ನತ ಶಿಕ್ಷಣದ ರೂಪುರೇಷೆಯ ನಾಯಕತ್ವವಹಿಸಿ ಯಶಸ್ವಿಗೊಳಿಸಿದವರು. ಹಾಗಾಗಿ ಇವರ ಶೈಕ್ಷಣಿಕ ಸೇವೆಯ ಸವಿನೆನಪಿಗಾಗಿ ಇವರ ಜನ್ಮ ದಿನವನ್ನು “ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ” ಆಚರಿಸಲಾಗುತ್ತಿದೆ, ಕಲಾಂರಂತಹ ನಾಯಕರ ಗುಣಗಳು ಇಂದಿನ ಸಚಿವರಿಗೆ, ನಾಯಕರುಗಳಿಗೆ ಹಾಗೂ ಶೈಕ್ಷಣಿಕ ಚಿಂತಕರುಗಳಿಗೆ ಆದರ್ಶವಾಗಬೇಕಿದೆ. ಅಬುಲ್ ಕಲಾಂ ಆಜಾದ್‍ರಂತಹ ನಾಯಕರ ವಿಚಾರಗಳನ್ನು ಎಲ್ಲಿಯೂ ಓದಲು ಅವಕಾಶವಿಲ್ಲದ ಪರಿಣಾಮವಾಗಿ ಅವರ ಬಗ್ಗೆ ತಿಳಿಯುವಲ್ಲಿ ಅವಕಾಶವಂಚಿತರಾಗುತ್ತಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿರುವವರು ಶಾಲಾಕಾಲೇಜುಗಳಲ್ಲಿ ಇಂತಹ ಹಲವು ವ್ಯಕ್ತಿಗಳ ಚಿಂತನೆಗಳನ್ನು ತಿಳಿಸುವಂತಹ ಕಾರ್ಯಗಳಾಗಬೇಕೆಂದು ಕರೆನೀಡಿದರು. 
ಉಪನ್ಯಾಸಕರಾದ ಶ್ರೀಮತಿ ನೇತ್ರಾವತಿ ಮತ್ತು ಶ್ರೀಮತಿ ರೂಪ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಿ.ಇಡಿ. ಪ್ರಶಿಕ್ಷಣಾರ್ಥಿಯಾದ ರಂಗಸ್ವಾಮಿ ನಿರೂಪಿಸಿದರು, ಚಂದ್ರಮ್ಮ ಪ್ರಾರ್ಥಸಿದರು, ದಿಲೀಪ್ ಸ್ವಾಗತಿಸಿದರು, ದಿವ್ಯ ವಂದಿಸಿದರು. 




ಬಿ.ಇಡಿ. ಪದವಿ ಫಲಿತಾಂಶ ಪ್ರಕಟಣೆ 2024

  ಫಲಿತಾಂಶ ಪ್ರಕಟಣೆ 2024 ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಪದವಿ ಜನವರಿ 2024 ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗ...