Monday, 13 April 2020


ಜನ ಹಿತ ಸಭಾ” (ರಿ) ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆ ಹಾಗೂ “ಜನ ಹಿತ ಸೇವಾ ಪ್ರಶಸ್ತಿ ಪ್ರದಾನ”

ನಗರದ ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ “ಜನ ಹಿತ ಸಭಾ” (ರಿ) 





ಜನ ಹಿತ ಸಭಾ” (ರಿ) ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆ ಹಾಗೂ “ಜನ ಹಿತ ಸೇವಾ ಪ್ರಶಸ್ತಿ ಪ್ರದಾನ”
ನಗರದ ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ “ಜನ ಹಿತ ಸಭಾ” (ರಿ) ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆ ಹಾಗೂ “ಜನ ಹಿತ ಸೇವಾ ಪ್ರಶಸ್ತಿ ಪ್ರದಾನ” ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಜನ ಹಿತ ಸಭಾ ಸಂಸ್ಥೆಯು ಜನರಿಂದ ಜನರಿಗಾಗಿ ಜನ ಸೇವೆ ಮಾಡಲು ಸ್ಥಾಪಿಸಿದ ಸಂಸ್ಥೆಯಾಗಿದೆ. ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಜನತೆಯ ಶ್ರೇಯೋಭಿವೃದ್ಧಿಗಾಗಿ, ಲಿಂಗ ತಾರತಮ್ಯ, ಗ್ರಾಮೀಣ ಅಭಿವೃದ್ಧಿಯಂತಹ ಧ್ಯೇಯೊದ್ದೇಶಗಳನ್ನು ಹೊಂದಿದೆ. ಈಗಾಗಲೇ ಸಂಸ್ಥೆಯ ವತಿಯಿಂದ ವಿವಿಧ ಜಿಲ್ಲೆಗಳಲ್ಲಿ ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ, ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ರಾಷ್ಟ್ರೀಯ ಹಬ್ಬಗಳ ಆಚರಣೆ ಮತ್ತು ಮಹತ್ವ ಹಾಗೂ ಮಹಿಳಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಇದೇ ರೀತಿಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ‘ಜನರ ಹಿತವೇ ನಮ್ಮ ಹಿತ’ ವಾಗಿದೆ ಎಂದು ಜನ ಹಿತ ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀಮತಿ ರತ್ನ ಎಂ ರವರು ಸಂಸ್ಥೆಯ ಕಾರ್ಯಕ್ರಮಗಳನ್ನು ತಿಳಿಸಿದರು.  
ಡಾ. ಜಗನ್ನಾಥ ಕೆ. ಡಾಂಗೆ,  ಸಹ ಪ್ರಾಧ್ಯಾಪಕರು ಕುವೆಂಪು ವಿಶ್ವವಿದ್ಯಾಲಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಸಮಾಜದಿಂದ ಎಲ್ಲವನ್ನು ಪಡೆದ ನಾವುಗಳು ಮುಂದಿನ ಪೀಳಿಗೆಗಾಗಿ ಪಡೆದ ಒಂದಿಷ್ಟು ಸೌಲಭ್ಯಗಳನ್ನು ಪುನಃ ಸಮಾಜಕ್ಕೆ ನೀಡುವ ಜವಬ್ದಾರಿ ಪ್ರತಿ ಪ್ರಜೆಯ ಕರ್ತವ್ಯವಾಗಿದೆ. ಯುವ ಜನತೆಗೆ ಆಸಕ್ತಿ, ಅಭಿರುಚಿಗಳನ್ನು ಬೆಳೆಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸುವುದು ಪ್ರಸ್ತುತ ಸಮಾಜಕ್ಕೆ ಅಗತ್ಯವಾಗಿದೆ. ವಿದ್ಯಾವಂತರೆಲ್ಲ ತಮ್ಮ ತಮ್ಮ ಹಳಿಗಳಿಗೆ ಪುನಃ ತೆರಳಿ ಅಲ್ಲಿಯ ಸಾರ್ವಜನಿಕ ಕ್ಷೇತ್ರವನ್ನು ಅಬಿವೃದ್ಧಿಮಾಡುವಲ್ಲಿ ನಿರತರಾಗಕಬೇಕು. ಸಮಾಜಕ್ಕೆ ಅಂಟಿಕೊಂಡಿರುವ ಮೌಢ್ಯಗಳಿಂದ ಮುಕ್ತವಾಗಿ, ವೈಚಾರಿಕ ಹಾಗೂ ವೈಜ್ಞಾನಿಕ ಅರಿವು ಮೂಢಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು. ಸಂಸ್ಥೆವತಿಯಿಂದ ಪ್ರತಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಸಮಸ್ಯೆಗಳ ನಿರ್ಮೂಲನೆಗೆ ಸಮ್ಮೇಳನ ಹಾಗೂ ಕಾರ್ಯಕ್ರಮ ಆಯೋಜಿಸುವ ಗುರಿ ಹೊಂದಿರುವುದನ್ನು ತಿಳಿಸಿ, ಇಂತಹ ಕಾರ್ಯಕ್ಕಾಗಿ ಸಮಾಜದ ಎಲ್ಲ ಸಮುದಾಯಗಳು ಕೈಜೋಡೊಸಬೇಕಾಗಿ ಕರೆನೀಡಿದರು. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಜನ ಹಿತ ಸಭೆಯಂತಹ ಸ್ವಯಂ ಸೇವಾ ಸಂಸ್ಥೆಗಳು ಮಾಡುವಂತಹ ಉತ್ತಮ ಕಾರ್ಯಗಳು ಇತರರಿಗೂ ಸೇವೆ ಮಾಡುವವರಿಗೆ ಪ್ರೇರಣೆ ನೀಡುತ್ತವೆ ಎಂದು ಡಿ.ಪಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ನಿರಂಜನ ಮೂರ್ತಿಯವರು ತಿಳಿಸಿದರು. 
ಜನ ಹಿತ ಸಭಾ ದ ವತಿಯಿಂದ, ಜನ ಹಿತ ಸೇವಾ ಪ್ರಶಸ್ತಿ ಪ್ರದಾನ : ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ರುದ್ರೇಶ್ (ಕ್ರೀಡೆ), ದೇಶ ರಕ್ಷಣೆ ಸೇವೆ ಸಲಿಸಿದ ಶ್ರೀಯುತ ಎಮ್. ಜಿ. ಪ್ರಕಾಶ್, ಹಾಗೂ ಶ್ರೀಯುತ ಶಾಂತಕುಮಾರ್, ಶ್ರೀಯುತ ಸುಬ್ರಮಣ್ಯ (ಮಾಜಿ ಸೈನಿಕರು  ಹಾಗೂ ದೇಶೀಯ ಉತ್ಪನ್ನ ತಯಾರಿಕೆ), ಶ್ರೀಯುತ ಮುರುಗನ್ (ಪಕ್ಷಿಪ್ರೇಮಿ), ಶ್ರೀಯುತ ಪ್ರಶಾಂತ್ ಎಲ್. (ಪರಿಸರ ಸ್ವಚ್ಛತೆ-ಮಾರ್ಗ ಸಂಸ್ಥೆ),  ಶ್ರೀಮತಿ ಸುಮತಿ (ಸಾವಯವ ಕೃಷಿ) ಹಾಗೂ ಮಹಮದ್ ಲಥೀಫ್ ಉಲ್ಹಾ (ಕರಾಟೆ). ಇವರೆಲ್ಲರನ್ನು ಸಂಸ್ಥೆವತಿಯಿಂದ ಸನ್ಮಾನಿಸಲಾಯಿತು. 


ಜನ ಹಿತ ಸಭೆಯ ಚಿತ್ರದುರ್ಗ ಜಿಲ್ಲಾ ಸಂಚಾಲಕರಾದ ಡಾ. ಗಿರೀಶ್ ಟಿ ರವರು ಪ್ರಾಸ್ತವಿಕವಾಗಿ ಮಾತನಾಡಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು, ಬಿ.ಡಿ.ಪ್ರಶಿಕ್ಷಣಾರ್ಥಿಯಾದ ಈಶ್ವರಪ್ಪ ಸ್ವಾಗತಿಸಿದರು, ಎಸ್.ಎಸ್.ಕೆ.ಎಸ್. ಬಿ.ಇಡಿ. ಕಾಲೇಜಿನ ಉಪನ್ಯಾಸಕಿಯಾದ ಶ್ರೀಮತಿ ರೂಪ ಕಾರ್ಯಕ್ರಮವನ್ನು ನಿರೂಪಿಸಿದರು. ಜನ ಹಿತ ಸಂಸ್ಥೆಯ ದಾವಣಗೆರೆ ಜಿಲ್ಲಾ ಸಂಚಾಲಕರಾದ ಡಾ. ನಾಗರಾಜ್ ರವರು ಎಲ್ಲರನ್ನು ವಂದಿಸಿದರು, ಶಿವಮೊಗ್ಗ ಸಂಚಾಲಕರಾದ ಶ್ರೀ ಸೋಮಶೇಖರ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅನಿತ ಹಾಗೂ ಸಂಸ್ಥೆಯ ಉಪನ್ಯಾಕರು ವಿದ್ಯಾರ್ಥಿಗಳು, ಹಾಗೂ ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು ಹಾಜರಿದ್ದರು.

No comments:

Post a Comment

ಬಿ.ಇಡಿ. ಪದವಿ ಫಲಿತಾಂಶ ಪ್ರಕಟಣೆ 2024

  ಫಲಿತಾಂಶ ಪ್ರಕಟಣೆ 2024 ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಪದವಿ ಜನವರಿ 2024 ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗ...