Monday, 13 April 2020

Farewell party of B.Ed students -2017-18


S.S.K.S. COLLEGE OF EDUCATION, CHITRADURGA  

 Farewell party of B.Ed students -2017-18

15-12-2018

         “¢éwÃAiÀÄ ªÀµÀðzÀ ©.Er. ¥Àæ²PÀëuÁyðUÀ½UÉ ¸ÀªÀiÁgÉÆÃ¥À ¸ÀªÀiÁgÀA¨sÀ ºÁUÀÆ ¥ÀæweÁÕ«¢ü” PÁAiÀÄðPÀæªÀÄ 







²æà ¸ÀzÀÄÎgÀÄ ²ªÀ°AUÁ£ÀAzÀ ¸Áé«ÄfAiÀĪÀgÀÄ, ²æà ¸ÀzÀÄÎgÀÄ PÀ©ÃgÁ£ÀAzÀ D±ÀæªÀÄ avÀæzÀÄUÀð.


qÁ. C£ÀAvÀgÁªÀiï, rãÀgÀÄ, ²PÀët CzsÀåAiÀÄ£À «¨sÁUÀ zÁªÀtUÉgÉ «±Àé«zÁå®AiÀÄ 

                   ²æà ¤gÀAd£ÀªÀÄÆwð ¥ÁæA±ÀÄ¥Á®gÀÄ, J¸ï.J¸ï.PÉ.J¸ï. r.¦.Er. PÁ¯ÉÃeï


²æêÀÄw C¤vÀ, ¥ÁæA±ÀÄ¥Á®gÀÄ, J¸ï.J¸ï.PÉ.J¸ï. £À¹ðAUï PÁ¯ÉÃeï. 



ಉತ್ತಮ ಸಮಾಜದ ನಿರ್ಮಾತೃ ಶಿಕ್ಷಕ ” -ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜಿಯವರು


ಸಮಾಜದಲ್ಲಿ ಶಿಕ್ಷಕ ನಿಜವಾದ ಮಾತೃ ಸ್ಥಾನದಲ್ಲಿದ್ದಾನೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ವಿಷಯ ಜ್ಞಾನದೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸುವ ಕಾರ್ಯದಲ್ಲಿ ತೊಡಗಿದ್ದಾನೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನೆ ಅನುಕರಣೆ ಮಾಡುವುದು ಸಹಜವಾದುದು, ಹಾಗಾಗಿ ಶಿಕ್ಷಕರು ಉತ್ತಮ ರೂಢಿಗಳನ್ನು ಮಕ್ಕಳಿಗೆ ರೂಢಿಸವುದು ಅಗತ್ಯವಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿಗೆ ಶಿಕ್ಷಕನೆ ಪ್ರಮುಖ ಪಾತ್ರವಹಿಸುವವನಾಗಿದ್ದು, ಶಿಕ್ಷಕ ನಿಜವಾದ ದೇಶ ನಿರ್ಮಾತೃವಾಗಿದ್ದಾನೆ. ವಿದ್ಯಾರ್ಥಿಗಳನ್ನು ಉತ್ತಮ ಜ್ಞಾನವಂತರನ್ನಾಗಿ ಮಾಡುವುದರೊಂದಿಗೆ ಉತ್ತಮ ನಾಗರೀಕ ಗುಣಗಳನ್ನು ಬೆಳೆಸಬೇಕು ಎಂದು ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜಿಯವರು ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಬಿ. ಇಡಿ. ಕಾಲೇಜನಲ್ಲಿ ಏರ್ಪಡಿಸಿದ್ದದ್ವಿತೀಯ ವರ್ಷದ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಸಮಾರೋಪ ಸಮಾರಂಭ ಹಾಗೂ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ  ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಶಿಕ್ಷಕನ ಕೆಲಸ ಪ್ರತಿ ಮಗುವಿಗೂ ಜೀವನದ ಬೆಳಕನ್ನು ಬೆಳಗಿಸುವ ಕಾರ್ಯ. ತಾನು ಕಲಿತ ಜ್ಞಾನವನ್ನು ಮಕ್ಕಳಿಗೆ ಕಲಿಸುವ ಮೂಲಕ ಜ್ಞಾನಜ್ಯೋತಿಯನ್ನು ಬೆಳಗಿಸುವಂತಾಗಬೇಕು. ಪ್ರತಿ ವಿದ್ಯಾರ್ಥಿಯ ಕಲಿಕೆ ಸಮಸ್ಯೆಯನ್ನು ಪರಿಹರಿಸಿ ಜೀವನಕ್ಕೆ ಅಗತ್ಯವಾದ ಜ್ಞಾನ ಮತ್ತು ಕೌಶಲಗಳೊಂದಿಗೆ ಮೌಲ್ಯಗಳನ್ನು ಕಲಿಸಬೇಕು. ಶಿಕ್ಷಕ ತರಬೇತಿ ಪೂರ್ಣಗೊಳಿಸಿ ಹೊರಹೋಗುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಉತ್ತಮ ಶಿಕ್ಷಕರಾಗಿ ಎಂದು ಸ್ವಾಮಿಜಿಯವರು ಹಾರೈಸಿದರು.
ಮುಖ್ಯ ಅತಿಥಿಕಾಗಿದ್ದ ಡಾ. ಅನಂತರಾಮ್, ಡೀನರು, ಶಿಕ್ಷಣ ಅಧ್ಯಯನ ವಿಭಾಗ ದಾವಣಗೆರೆ ವಿಶ್ವವಿದ್ಯಾಲಯ ಇವರು ಮಾತನಾಡಿ, ಶಿಕ್ಷಕನ ಕೆಲಸ ಕಲಿಕೆಯನ್ನು ವರ್ಗಾಹಿಸುವುದಲ್ಲ ಬದಲಾಗಿ ವಿದ್ಯಾರ್ಥಿಗಳಲ್ಲಿ ಜ್ಞಾನ ಅನ್ವೇಷಣೆಯ ಕೌಶಲ ಬೆಳೆಸುವುದು. ಶಿಕ್ಷಕನ ಬೋಧನೆ ಯಾಂತ್ರಿಕ ಬೋಧನೆಯಾಗಬಾರದು. ಕಲಿಕೆ ಜೀವಂತ ಅನುಭವಗಳನ್ನು ನೀಡಬೇಕೆಂದರೆ ಶಿಕ್ಷಕಕು ಪ್ರತಿನಿತ್ಯದ ತರಗತಿಗೆ ಪೂರ್ಣಸಿದ್ದತೆಯೊಂದಿಗೆ ಪಾಠ ಬೋಧನೆಯಲ್ಲಿ ತೊಡಗಬೇಕು. ಶಿಕ್ಷಕ ಕೇವಲ ಪಠ್ಯಪೂರ್ಣಗೊಳಿಸಲು ಮಾತ್ರ ಒತ್ತು ಕೊಡಬಾರದು. ವಿದ್ಯಾರ್ಥಿ ಏನನ್ನು ಕಲಿತಿದ್ದಾನೆ, ಎಷ್ಟು ಕಲಿತಿದ್ದಾನೆ ಎಂಬ ಮನವರಿಕೆಯೊಂದಿಗೆ ಎಲ್ಲ ವಿದ್ಯಾರ್ಥಿಗಳ ಕಡೆ ಗಮನಹರಿಸಬೇಕು. ಶಿಕ್ಷಕರಿಗೆ ವೃತ್ತಿ ಬದ್ಧತೆ ಬಹಳ ಮುಖ್ಯವಾದುದು, ಎಲ್ಲಿ ವೃತ್ತಿಬದ್ದತೆ ಪೂರ್ಣಪ್ರಮಾಣದಲ್ಲಿರುತ್ತದೊ ಅಲ್ಲಿ ವಿದ್ಯಾರ್ಥಿಗಳ ಯಶಸ್ಸು ದೊರೆಯುತ್ತದೆ. ವಿದ್ಯಾಥಿಗಳನ್ನು ಹೆಚ್ಚು ಗೊಂದಲಗಳಿಗೆ ಸಿಲುಕಿಸದೆ, ಕಲಿಕೆಗೆ ಸದಾ ಪ್ರೇರಣೆಯ ಚಟುವಟಿಗಳನ್ನು ಅಳವಡಿಸಬೇಕು. ವಿದ್ಯಾರ್ಥಿಗಳನ್ನು ಅಂಕ ಗಳಿಕೆಗೆ ಸಿದ್ಧ ಮಾಡುವುದನ್ನು ಬಿಟ್ಟು ದೇಶಕ್ಕೆ ಉತ್ತಮ ಪ್ರಜೆಯನ್ನಾಗಿ ಮಾಡುವ ಕಾರ್ಯ ಮಾಡಬೇಕಿದೆ. ಶಿಕ್ಷಕರು ಸಮಾಜದ ಸುತ್ತಮುತ್ತಲ ಪರಿಸರದ ವಾಸ್ತವತೆಯ ಜ್ಞಾನವನ್ನು ನೀಡಬೇಕು. ಶಿಕ್ಷಕರು ಜೀವನ ಕೌಶಲ್ಯವನ್ನು ಹಾಗೂ ಗೌರವದ ಮೌಲ್ಯಗಳನ್ನು ಕಲಿಸಬೇಕಾಗಿದೆ. ಇಂತಹ ಜ್ಞಾನ, ಮೌಲ್ಯಗಳನ್ನು ರೂಢಿಸಿಕೊಳ್ಳುವಂತೆ ಪ್ರಶಿಕ್ಷಣಾರ್ಥಿಗಳಿಗೆ ಕರೆನೀಡಿದರು.

ಮತ್ತೊರ್ವ ಮುಖ್ಯ ಅತಿಥಿಗಳಾದ ಶ್ರೀ ನಿರಂಜನಮೂರ್ತಿ ಪ್ರಾಂಶುಪಾಲರು, ಎಸ್.ಎಸ್.ಕೆ.ಎಸ್. ಡಿ.ಪಿ.ಇಡಿ. ಕಾಲೇಜಿನ ಇವರು ಮಾತನಾಡಿ ಶಿಕ್ಷಕರು ಸದಾ ಅಧ್ಯಯನದಲ್ಲಿ ತೊಡಿದಾಗ ಉತ್ತಮ ಬೋಧನೆಗೆ ಸಹಕಾರಿಯಾಗುವುದು. ಮಕ್ಕಳಿಗೆ  ಕೇವಲ ಪರೀಕ್ಷಾ ದೃಷ್ಟಿಯಿಂದ ಬೋಧಿಸುವುದು ಬಿಡಬೇಕು, ಮಕ್ಕು ಜ್ಞಾನವನ್ನು ಚಿಂತಿಸುವ, ಆಲೋಚಿಸುವ ಹಾಗೂ ಜೀವನದ ಸನ್ನಿವೇಶಕ್ಕೆ ಅಳವಡಿಸಿಕೊಳ್ಳುವಂತಹ ಶಿಕ್ಷಣ ನೀಡಬೇಕು ಎಂದು ತಿಳಿಸಿದರು. ಶಿಕ್ಷಕರು ಸ್ವಾರ್ಥರಹಿತ, ಸ್ವಜನ ಪಕ್ಷಪಾತ ಇಂತಹ ಗುಣಗಳಿಂದ ಮುಕ್ತರಾಗಿ ವಿದ್ಯಾರ್ಥಿಗಳಿಗೆ ಆದರ್ಶವಾದ ಅನುಕರನೀಯ ವ್ಯಕ್ತಿತ ಗುಣವಳನ್ನು ರೂಢಿಸಿಕೊಳ್ಳಬೇಕೆಂದುಎಸ್.ಎಸ್.ಕೆ.ಎಸ್ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅನಿತರವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದಡಾ. ಗಿರೀಶ್ ಟಿ ವಹಿಸಿ ತರಬೇತಿಯ ಅವಧಿಯಲ್ಲಿ ಕಲಿತ ಜ್ಞಾನ ಮತ್ತು ಬೋಧನಾ ಕೌಶಲಗಳನ್ನು ತರಗತಿಯಲ್ಲಿ ಅಳವಡಿಸಿಕೊಂಡು ಉತ್ತಮವಾಗಿ ಬೋಧಿಸುವಂತೆ ತಿಳಿಸಿದರು. ಉಪನ್ಯಾಸಕರಾದ ಶ್ರೀಮತಿ ರೂಪ ಪ್ರಾಸ್ತವಿಕವಾಗಿ ಮಾತನಾಡಿ, ಶಿಕ್ಷಕ ವೃತ್ತಿಯ ಮಹತ್ವ ಮತ್ತು ಶಿಕ್ಷಕರಾಗಿ ನಮ್ಮಗಳ ಪಾತ್ರವೆನಂಬುದನ್ನು ತಿಳಿಸಿ ಅತಿಥಿಗಳನ್ನು ಸ್ವಾಗತಿಸಿದರು, ಉಪನ್ಯಾಸಕರಾದ ಶ್ರೀಮತಿ ನೇತ್ರಾವತಿ, ಶ್ರೀ ವಿಜಯ್ ಕುಮಾರ್, ಶ್ರೀಮತಿ ಉಷಾ, ಶ್ರೀಪ್ರಶಾಂತ್, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರುಶಿಕ್ಷಕ ತರಬೇತಿ ಪೂರ್ಣಗೊಳಿಸಿ ಹೊರಹೋಗುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಪ್ರಥಮ ವರ್ಷದ ಬಿ.ಇಡಿ.ಪ್ರಶಿಕ್ಷಣಾರ್ಥಿಗಳು ಸ್ನೇಹದ ಸಂಕೇತವಾಗಿ ನೆನಪಿನಕಾಣಿಕೆ ಕೊಟ್ಟು ಬೀಳ್ಕೊಟ್ಟರು.



¢éwÃAiÀÄ ªÀµÀðzÀ ¥Àæ²PÀëuÁyðUÀ½UÉ ¥ÀæxÀªÀÄ ªÀµÀðzÀ ©.Er. ¥Àæ²PÀëuÁyðUÀ½AzÀ ¸ÉßúÀzÀ ¸ÀAPÉÃvÀªÁV £É£À¦£ÀPÁtÂPÉ «vÀgÀuÉ 


“ರಾಷ್ಟ್ರೀಯ ಶಿಕ್ಷಣ ದಿನಾಚರಣೆ”

ಭಾರತದ ಸ್ವತಂತ್ರ್ಯ ಹೋರಾಟಗಾರ, ಸ್ವತಂತ್ರ್ಯ ಭಾರತದ ಪ್ರಥಮ ಶಿಕ್ಷಣ ಸಚಿವರಾದ ‘ಮೌಲಾನಾ ಅಬುಲ್ ಕಲಾಂ ಆಜಾದ್’ ರವರ ಜನ್ಮ ದಿನವನ್ನು “ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ” ಆಚರಿಸಲಾಗುತ್ತಿದೆ  ಎಂದು ‘ಎಸ್.ಎಸ್.ಕೆ.ಎಸ್.  ಶಿಕ್ಷಣ ಮಹಾವಿದ್ಯಾಲಯದ’ ಪ್ರಾಂಶುಪಾಲರಾದ ‘ಡಾ. ಗಿರೀಶ್ ಟಿ’ ತಿಳಿಸಿದರು, ಚಿತ್ರದುರ್ಗ ನಗರದ ಶ್ರೀ ಸದ್ಗುರು ಕಬೀರಾನಂದ ಬಿ. ಇಡಿ. ಕಾಲೇಜನಲ್ಲಿ ಏರ್ಪಡಿಸಿದ್ದ “ರಾಷ್ಟ್ರೀಯ ಶಿಕ್ಷಣ ದಿನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 
ಅಬುಲ್ ಕಲಾಂ ಆಜಾದ್ ರವರು ಮಹಾತ್ಮ ಗಾಂಧೀಜಿಯವರ ಆತ್ಮೀಯ ಒಡನಾಡಿಯಾಗಿ ಭಾರತ ಸ್ವತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡವರು. ಅತ್ಯುತ್ತಮ ಬರಹಗಾರರಾದ ಕಲಾಂರವರು ತನ್ನ ಲೇಖನಗಳ ಮೂಲಕ ಬ್ರಿಟಿಷರ ಆಡಳಿತದ ವಿರುದ್ಧ ಹಾಗೂ ಭಾರತೀಯರಲ್ಲಿ ಹೋರಾಟ ಸಂಘಟನೆದ ಮನೋಭಾವನೆಯ ವಿಚಾರಗಳನ್ನು ಬರೆಯುತ್ತಿದ್ದರು. ಸ್ವತಂತ್ರ್ಯ ಹೋರಾಟದಲ್ಲಿ ಹಲವುಬಾರಿ ಸೆರೆಮನೆ ವಾಸವನ್ನು ಸಹ ಅನುಭವಿಸಿದರು. ಕಲಾಂರು ಭಾರತೀಯ ಕಾಂಗ್ರೇಸ್‍ನ ಅಧ್ಯಕ್ಷರಾಗಿಯೂ ಸಹ ಕಾರ್ಯ ನಿರ್ವಹಿಸಿದರು. ಜೀವನಪೂರ್ಣ ಹಿಂದೂ-ಮುಸ್ಲಿಂರ ಐಕ್ಯತೆಗಾಗಿ ಶ್ರಮಿಸಿದ ಅಪ್ಪಟ ಭಾರತೀಯ. ದೇಶ ವಿಭಜನೆಯನ್ನು ವಿರೋಧಿಸಿ, ಅಖಂಡ ಭಾರತ ರಚನೆಗೆ ಒತ್ತು ನೀಡಿದವರು. ಸ್ವತಂತ್ರ್ಯ ಭಾರತದ ಸಚಿವ ಸಂಪುಟದಲ್ಲಿ ಇವರು ಪ್ರಥಮ ಶಿಕ್ಷಣ ಸಚಿವರಾಗಿ, ಶಿಕ್ಷಣದಲ್ಲಿ ಅಮೂಲಾಗ್ರ ಕಾರ್ಯಗಳನ್ನು ಮಾಡಿದವರು. ಭಾರತದ ಶಿಕ್ಷಣಕ್ಕೆ ಭದ್ರ ತಳಹದಿಯನ್ನು ರೂಪಿಸಿದವರು. ಶಿಕ್ಷಣ ವ್ಯವಸ್ಥೆ ಹಾಗೂ ಉನ್ನತ ಶಿಕ್ಷಣದ ರೂಪುರೇಷೆಯ ನಾಯಕತ್ವವಹಿಸಿ ಯಶಸ್ವಿಗೊಳಿಸಿದವರು. ಹಾಗಾಗಿ ಇವರ ಶೈಕ್ಷಣಿಕ ಸೇವೆಯ ಸವಿನೆನಪಿಗಾಗಿ ಇವರ ಜನ್ಮ ದಿನವನ್ನು “ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ” ಆಚರಿಸಲಾಗುತ್ತಿದೆ, ಕಲಾಂರಂತಹ ನಾಯಕರ ಗುಣಗಳು ಇಂದಿನ ಸಚಿವರಿಗೆ, ನಾಯಕರುಗಳಿಗೆ ಹಾಗೂ ಶೈಕ್ಷಣಿಕ ಚಿಂತಕರುಗಳಿಗೆ ಆದರ್ಶವಾಗಬೇಕಿದೆ. ಅಬುಲ್ ಕಲಾಂ ಆಜಾದ್‍ರಂತಹ ನಾಯಕರ ವಿಚಾರಗಳನ್ನು ಎಲ್ಲಿಯೂ ಓದಲು ಅವಕಾಶವಿಲ್ಲದ ಪರಿಣಾಮವಾಗಿ ಅವರ ಬಗ್ಗೆ ತಿಳಿಯುವಲ್ಲಿ ಅವಕಾಶವಂಚಿತರಾಗುತ್ತಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿರುವವರು ಶಾಲಾಕಾಲೇಜುಗಳಲ್ಲಿ ಇಂತಹ ಹಲವು ವ್ಯಕ್ತಿಗಳ ಚಿಂತನೆಗಳನ್ನು ತಿಳಿಸುವಂತಹ ಕಾರ್ಯಗಳಾಗಬೇಕೆಂದು ಕರೆನೀಡಿದರು. 
ಉಪನ್ಯಾಸಕರಾದ ಶ್ರೀಮತಿ ನೇತ್ರಾವತಿ ಮತ್ತು ಶ್ರೀಮತಿ ರೂಪ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಿ.ಇಡಿ. ಪ್ರಶಿಕ್ಷಣಾರ್ಥಿಯಾದ ರಂಗಸ್ವಾಮಿ ನಿರೂಪಿಸಿದರು, ಚಂದ್ರಮ್ಮ ಪ್ರಾರ್ಥಸಿದರು, ದಿಲೀಪ್ ಸ್ವಾಗತಿಸಿದರು, ದಿವ್ಯ ವಂದಿಸಿದರು. 




No comments:

Post a Comment

ಬಿ.ಇಡಿ. ಪದವಿ ಫಲಿತಾಂಶ ಪ್ರಕಟಣೆ 2024

  ಫಲಿತಾಂಶ ಪ್ರಕಟಣೆ 2024 ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಪದವಿ ಜನವರಿ 2024 ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗ...