Tuesday, 26 January 2021

“ 72ನೇ ಗಣರಾಜ್ಯೋತ್ಸವ ದಿನಾಚರಣೆ ”


“ 72ನೇ ಗಣರಾಜ್ಯೋತ್ಸವ ದಿನಾಚರಣೆ

ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ವಿದ್ಯಾಪೀಠ (ರಿ) ಚಿತ್ರದುರ್ಗ, ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಶಿಕ್ಷಣ ಮಹಾವಿದ್ಯಾಲಯ, ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಡಿ.ಪಿ.ಇಡಿ ಕಾಲೇಜು, ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ನರ್ಸಿಂಗ್ ಕಾಲೇಜು, ಇವರುಗಳ ಸಂಯುಕ್ತಾಶ್ರಯದಲ್ಲಿ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನೆರವೇರಿತು.


ಮಾನವ ಸಮಾನತೆಯ ದಾರಿದೀಪ ನಮ್ಮ ಸಂವಿಧಾನ- ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜಿಯವರು,

ಮಾನವನ ಬದುಕು ಕೆಡಲು ಅತಿಯಾದ ಆಸೆಯೇ ಕಾರಣಅತಿಯಾದ ಆಸೆಗೆ ಮೂಲ ಆರಂಭಿಕ ಶಿಕ್ಷಣದಲ್ಲಿನ ಗುಣಮಟ್ಟದ ಕೊರತೆ ಹಾಗಾಗಿ ಆರಂಭಿಕ ಶಿಕ್ಷಣವನ್ನು ಗುಣಮಟ್ಟದ ಶಿಕ್ಷಣವನ್ನಾಗಿ ಪರಿವರ್ತಿಸಬೇಕು. ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಅಂದರೆ ಮುಂದಿನ ಭಾವಿ ಶಿಕ್ಷಕರ ಪಾತ್ರ ಮಹತ್ವದ್ದು, ಇವರು ಮಕ್ಕಳ ಮನಸ್ಸನ್ನು ಸಧೃಢಗೊಳಿಸುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ ಹಾಗೂ ವ್ಯಕ್ತಿ ಯಶಸ್ಸು ಸಾಧಿಸಲು ಆರೋಗ್ಯ ಮುಖ್ಯ ಹಾಗಾಗಿ ಉತ್ತಮ ಆರೋಗ್ಯ ಕಾಪಾಡುವಲ್ಲಿ ಸಮಾಜದ ರೋಗಗಳನ್ನು ದೂರಮಾಡುವಲ್ಲಿ ವೈದ್ಯಕೀಯ, ನರ್ಸಿಂಗ್ ಸಿಬ್ಬಂದಿ ಪಾತ್ರ ಮುಖ್ಯ. ನಾವೆಲ್ಲರೂ ಒಂದಾಗಿ ಪವಿತ್ರ ಸಮಾಜ ನಿರ್ಮಾಣ ಮಾಡೋಣ, ಗಾಂಧೀಜಿಯವರ ತ್ಯಾಗದ ಬದುಕು ನಮಗೆ ಪ್ರೇರಣೆಯಾಗಲಿ, ಹೆಣ್ಣಿನ ಪರಿಶ್ರಮ ಸಮಾಜಕ್ಕೆ ಮಾದರಿಯಾಗಲಿ. ಭಾರತ ಸಂವಿಧಾನ ನಮಗೆ ಸಮಾನತೆಯ ದಾರಿ ತೋರಿದೆ ಅದರಂತೆ ನಾವೇಲ್ಲರೂ ಮಾರ್ಗದಲ್ಲಿ ಸಾಗೋಣ ಎಂದು ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜಿಯವರು, ಪೀಠಾಧ್ಯಕ್ಷರು ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ವಿದ್ಯಾಪೀಠ,  ಇವರು “ 72ನೇ ಗಣರಾಜ್ಯೋತ್ಸವದಲ್ಲಿದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದಂತಹ ಶ್ರೀಮತಿ ದೀಪಾ, ಸಿವಿಲ್ ನ್ಯಾಯಾಧೀಶರು ಅರಸೀಕೆರೆ ಇವರು ಧ್ವಜಾರೋಹಣ ಕಾರ್ಯಕ್ರಮ ನಡೆಸಿಕೊಟ್ಟು ಮಾತನಾಡಿದರು. ಗಣರಾಜ್ಯ ದಿನ ದೇಶದ ಪ್ರತಿಯೊಬ್ಬ ಪ್ರಜೆಗೆ ಸಮಾನವಾದ ಹಕ್ಕು ಮತ್ತು ಕರ್ತವ್ಯಗಳು ದೊರೆತ ದಿನ. ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರನ್ನು ಹಾಗೂ ಅವರ ದೇಶಪ್ರೇಮವನ್ನು ನಾವೇಲ್ಲರು ಬೆಳೆಸಿಕೊಳ್ಳಬೇಕು. ರಾಷ್ಟ್ರೀಯ ದಿನಾಚರಣೆಗಳ ಮೂಲಕ ಪ್ರತಿಯೊಬ್ಬರಲ್ಲಿಯೂ ರಾಷ್ಟ್ರ ಪ್ರೇಮವನ್ನು ಜಾಗೃತಗೊಳಿಸಬೇಕು, ಆಗ ಮಾತ್ರ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ತ್ಯಾಗಿಗಳ, ಬಲಿದಾನಿಗಳ ಸೇವೆಗೆ ನಿಜವಾದ ಅರ್ಥ ಬರುತ್ತದೆ. ಉತ್ತಮ ಮಾನವ ಸಂನ್ಮೂಲದಿಂದ ಆಧುನಿಕ ರಾಷ್ಟ್ರ ನಿರ್ಮಾಣ ಸಾಧ್ಯ ಅದರಲ್ಲಿ ಯುವಕರ ಪಾತ್ರ ಮಹತ್ವದ್ದು ಎಂದು ಯುವಕರಿಗೆ ದೇಶಭಕ್ತಿಯನ್ನು ಬೆಳೆಸಿಕೊಳ್ಳಲು ಕರೆನೀಡಿದರು. ಹಾಗೆಯೇ ಮತ್ತೊಬ್ಬ ಅತಿಥಿಯಾದ ಶ್ರೀಯುತ ಕುಮಾರ ಗೌಡ, ವಕೀಲರು ಇವರು ಮಾತನಾಡಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಾಗೂ ಸಂವಿಧಾನ ರಚನಾ ಕಾರ್ಯದಲ್ಲಿ ಭಾಗವಹಿಸಿದವರ ಸೇವೆ ನಮಗೆ ಮಾರ್ಗದರ್ಶನವಾಗಿದೆ. ಸಂವಿಧಾನ ರಚಸಿದ ಡಾ. ಬಿ.ಆರ್. ಅಂಬೇಡ್ಕರ್ರವರನ್ನು ಸ್ಮರಿಸಿಕೊಳ್ಳಬೇಕಾಗಿದೆ. ಜನತೆಗೆ ಸ್ವಾತಂತ್ರ್ಯ ಹೋರಾಟದ ಕಿಚ್ಚುಹಚ್ಚಿದ ಮಹಾತ್ಮ ಗಾಂಧೀಜಿ, ಭಗತ್ಸಿಂಗ್, ಸುಭಾಷ್ಚಂದ್ರ ಬೋಸ್, ರಾಣಿಚೆನ್ನಮ್ಮ, ಬಾಲಗಂಗಾಧರ ತಿಲಕ್. ಇತ್ಯಾದಿ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ನೆನಪಿಸಿ ಭವಿಷ್ಯದ ಪ್ರಜೆಗಳಿಗೆ ಉತ್ತಮ ವ್ಯಕ್ತಿಗಳಾಗುವಂತೆ ಸಂದೇಶ ನೀಡಿದರು

ಎಸ್.ಎಸ್.ಕೆ.ಎಸ್. ಬಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಿರೀಶ್ ಮಾತನಾಡಿ, ‘ಗಣರಾಜ್ಯೋತ್ಸವ ದಿನ ಆಧುನಿಕ ಭಾರತದ ಉದಯಿಸಿದ ದಿನವಾಗಿದೆ’, ಕೋಟ್ಯಾನುಕೋಟಿ ಜನತೆಯ ಕತ್ತಲ ಬದುಕಿಗೆ ಬೆಳಕನ್ನು ಮೂಡಿಸಿದ ದಿನ. ಭಾರತವನ್ನು ರಾಜಪ್ರಭುತ್ವ ಮತ್ತು ಗುಲಾಮಗಿರಿಯಿಂದ ಮುಕ್ತಿಗೊಳಿಸಿ, ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾದ ಸುದಿನವಾಗಿದೆ. ಯಾವುದೇ ಧರ್ಮ, ಜಾತಿ, ಭಾಷೆ, ಲಿಂಗ ಬೇಧಭಾವವಿಲ್ಲದೆ ಮಾನವ ಸಮಾನತೆಯನ್ನು ಎತ್ತಿಹಿಡಿದ ಸಂವಿಧಾನ ಜಾರಿಯಾದ ದಿನವಾಗಿದೆ. ಭಾರತೀಯರಾದ ನಮ್ಮೇಲ್ಲರಿಗೂ ದೇಶಮೊದಲು ಅದರಂತೆಭಾರತೀಯತೆ ಎನ್ನುವುದು ನಮ್ಮ ಧರ್ಮವಾಗಿದೆ, ಸಂವಿಧಾನವು ನಮ್ಮ ಧರ್ಮಗ್ರಂಥವಾಗಿದೆಇದರ ಅನುಸರಣೆ ಪ್ರತಿಯೊಬ್ಬರ ನಿತ್ಯ ಜೀವನದ ಆಚರಣೆಯಾಗಬೇಕು. ಉತ್ತಮ ಮಾನವ ಸಂಪನ್ಮೂಲ ನಿರ್ಮಾಣಕ್ಕೆ ರಾಷ್ಟ್ರೀಯ ಹಬ್ಬಗಳು ನಮ್ಮ ಮನೆಯ ಹಬ್ಬಗಳಂತೆ ಅತ್ಯಂತ ಸಂಭ್ರಮದಿಂದ ಆಚರಿಸುವಂತಾಗಬೇಕು, ಅಂತಹ ದೇಶಾಭಿಮಾನ ಇಂದಿನ ಯುವಶಕ್ತಿಯಾದ ನಾವೇಲ್ಲರೂ ಬೆಳೆಸಿಕೊಳ್ಳಬೇಕು ಎಂದು ಕರೆನೀಡಿದರು. ಶ್ರೀಯುತ ನಿರಂಜನ ಮೂರ್ತಿ ಸಿ.ಎಲ್. ಡಿ.ಪಿ.ಇಡಿ ಕಾಲೇಜು ಪ್ರಾಂಶುಪಾಲರು ಅಧ್ಯಕ್ಷತೆವಹಿಸಿದ್ದರು, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಶ್ರೀಮತಿ ವಿಶಾಲ ಎಸ್. ರವರು ಉಪಸ್ಥಿತರಿದ್ದರು. ಬಿ.ಇಡಿ. ಉಪನ್ಯಾಸಕರಾದ ಶ್ರೀಮತಿ ನೇತ್ರಾವತಿ, ವಿಜಯ್ ಕುಮಾರ್, ಪ್ರಶಾಂತ್, ಭುವನೇಶ್ವರಿ, ನರ್ಸಿಂಗ್ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂಧಿವರ್ಗ, ಬಿ.ಇಡಿ. ನರ್ಸಿಂಗ್, ಪ್ಯಾರಮೆಡಿಕಲ್ ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಾರ್ಯಕ್ರಮವನ್ನು ಬಿ.ಇಡಿ. ಪ್ರಶಿಕ್ಷಣಾರ್ಥಿಯಾದ ಮೋಹನ್ ನಿರೂಪಿಸಿದರು, ಗಿರೀಶ್ ಪ್ರಾರ್ಥಿಸಿದರು, ವನಜಾಕ್ಷಿ ಸ್ವಾಗತಿಸಿದರು, ಕಾವ್ಯ ವಂದಿಸಿದರು.

 

No comments:

Post a Comment

ಬಿ.ಇಡಿ. ಪದವಿ ಫಲಿತಾಂಶ ಪ್ರಕಟಣೆ 2024

  ಫಲಿತಾಂಶ ಪ್ರಕಟಣೆ 2024 ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಪದವಿ ಜನವರಿ 2024 ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗ...