"ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಬಿ. ಇಡಿ. ಕಾಲೇಜ್ ಚಿತ್ರದುರ್ಗ
"64ನೇ ಕನ್ನಡ ರಾಜೋತ್ಸವ ಕಾರ್ಯಕ್ರಮ"
ದಿನಾಂಕ:02:11:2019
“ಕನ್ನಡ ರಾಜೋತ್ಸವ”
ಸಮಾಜ, ಸಮುದಾಯದ ಜನತೆಯಲ್ಲಿ ಐಕ್ಯತೆಯನ್ನು ಮೂಡಿಸುವುದು ಭಾಷೆ. ಪರಸ್ಪರ ಸಂಬಂಧಗಳನ್ನು ಬೆಳೆಸುವುದು ನಮ್ಮ ನಾಡಿನ ಭಾಷೆ. ಭಾಷೆಯಲ್ಲಿ ಸಾಹಿತ್ಯವಿದೆ, ಕಲೆ, ಸಂಸ್ಕೃತಿ, ಮೌಲ್ಯ, ಜಿವನ ನೀತಿ, ಮಾದುರ್ಯತೆ, ಪ್ರೀತಿ ಎಲ್ಲವು ಸಹ ಇದೆ. ನಮ್ಮ ನಾಡಿನ ನಾಡ ಭಾಷೆ ಸಂಪರ್ಕ ಭಾಷೆ ಅಷ್ಟೇ ಅಲ್ಲದೇ ನಮ್ಮಗಳ ಜೀವನದಲ್ಲಿ ಬೆರೆತು ಹೋಗಿದೆ. ನಾವು ದಿನ ನಿತ್ಯ ಅದನ್ನು ಬಳಸುವ ಪರಿಪಾಠದಿಂದ ಭಾಷೆಯ ಬೆಳವಣಿಗೆಯಾಗುತ್ತದೆ ಎಂದು ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜಿಯವರು ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಬಿ. ಇಡಿ. ಕಾಲೇಜನಲ್ಲಿ ಏರ್ಪಡಿಸಿದ್ದ 64ನೇ ಕನ್ನಡ ರಾಜೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರಾದವರಿಗೆ ಭಾಷೆಯ ಶಬ್ದ ಭಂಡಾರದ ಸಂಗ್ರಹ ಹೆಚ್ಚ ಆದಂತೆ ಭಾಷೆಯ ಬಳಕೆ ಉತ್ತಮವಾಗುತ್ತದೆ. ಭಾಷೆ ಪ್ರಾವೀಣ್ಯತೆ ಶಿಕ್ಷಕರ ರೂಪ ಲಾವಣ್ಯವನ್ನು ಹೆಚ್ಚಿಸುತ್ತದೆ. ಶಿಕ್ಷಕರಾಗುವವರಿಗೆ ವಿಷಯಜ್ಞಾನದೊಂದಿಗೆ ಶಬ್ದಗಳನ್ನು ಸೃಜನಾತ್ಮವಾಗಿ ಬಳಸವುದು ಅಗತ್ಯವಾಗಿದೆ. ಕನ್ನಡ ಭಾಷೆಯಲ್ಲಿ ಒಂದ ಪದಕ್ಕೆ ವಿವಿಧ ಅರ್ಥಗಳಿವೆ, ಅವುಗಳನ್ನು ಗ್ರಹಿಸಬೇಕು. ಕನ್ನಡ ಭಾಷೆಯ ಪದಗಳು ಸಮಾಜ, ಸಂಸ್ಕೃತಿ, ಪ್ರಕೃತಿಯೊಂದಿಗೆ ಸಂಬಂಧಿಸುವ ಭಾಷೆಯಾಗಿದೆ, ಇದನ್ನು ಸಂದರ್ಭಕ್ಕನುಗುಣವಾಗಿ ಬಳಸುವ ಮೂಲಕ ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆಯಲು ಸಾಧ್ಯವಾಗುವುದು. ಹಾಗಾಗಿ ಶಿಕ್ಷಕರು ಮಕ್ಕಳಿಗೆ ಭಾಷೆ ಬಳಕೆ ಕೌಶಲ್ಯವನ್ನು ಹೆಚ್ಚು ಮಾಡಿದರೆ ವಿಷಯ ಜ್ಞಾನ ಹೆಚ್ಚುವುದು ಹಾಗೂ ಅವುಗಳ ಅರ್ಥ ಮೌಲ್ಯಗಳನ್ನು ಕಲಿಸಲು ಸಾಧ್ಯ, ಇದರಿಂದಾಗಿ ನಮ್ಮ ಭಾಷೆ ಬೆಳವಣಿಗೆ ಸಾಧ್ಯ. ಮಕ್ಕಳು ಶಿಕ್ಷಕರನ್ನು ಅನುಸರಿಸಿ ಕಲಿಯುವುದರಿಂದ ಶಿಕ್ಷಕರು ಮಕ್ಕಳಿಗೆ ಆದರ್ಶವಾದ ವ್ಯಕ್ತಿತ್ವವನ್ನು ರೂಡಿಸಿಕೊಳ್ಳಬೇಕು. ಅದಕ್ಕಾಗಿ ಶಿಕ್ಷಕನಾದವನು ನಿತ್ಯ ಅಭ್ಯಾಸಶೀಲನಾಗಬೇಕು, ನಿರಂರತ ಅಭ್ಯಾಸದಿಂದ ಭಾಷೆಯ ಪ್ರಾವೀಣ್ಯತೆ ಹೆಚ್ಚವುದು, ಆಗ ನಮ್ಮ ಭಾಷೆ ಅಪ್ಯಾಯ ಮಾನವಾದ ಭಾಷೆಯಾಗುತ್ತದೆ.
ಮುಖ್ಯ ಅತಿಥಿಗಳಾ ಮಾತನಾಡಿದ ಶ್ರೀ ನಿರಂಜನಮೂರ್ತಿಯವರು, ಭಾಷೆ ಒಂದು ನಿರ್ದಿಷ್ಟ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಭಿನ್ನತೆಯನ್ನು ಪಡೆಯುತ್ತದೆ, ಕನ್ನಡ ಸಾಹಿತ್ಯದ ಕತೆ, ಕಾದಾಂಬರಿ, ಕವಿತೆ ಓದುವುದು ಭಾಷೆಯಲ್ಲಿ ಆಸಕ್ತಿಯನ್ನು ಉಂಟು ಮಾಡುತ್ತದೆ. ಭಾಷೆ ಒಂದು ನಾಡಿನ ಒಗ್ಗೂಡಿಸುವಲ್ಲಿ ಮಹತ್ವವನ್ನು ಪಡೆದುಕೊಂಡಿದೆ ಎಂದು ತಿಳಿಸಿದರು. ಆಂಗ್ಲ ವ್ಯಾಮೋಹ ಕಡಿಮೆ ಮಾಡಿಕೊಂಡು ನಮ್ಮ ಕನ್ನಡ ಮಾತೃ ಭಾಷೆಯ ಶಿಕ್ಷಣಕ್ಕೆ ಒತ್ತು ಕೊಡಬೇಕೆಂದು ತಿಳಿಸಿದರು.
ಉಪನ್ಯಾಸಕಿಯಾದ
ಶ್ರೀಮತಿ ರೂಪ ಮಾತನಾಡಿ, ಪ್ರಸ್ತುತ ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಅದರ ಸ್ಥಾನಮಾನ ಕುಂಟಿತವಾಗುತ್ತಿದೆ, ಇಂದಿನ ಯುವ ಪೀಳಿಗೆ ಪರಭಾಷೆಗೆ ವ್ಯಾಮೋಹಿತರಾಗದೆ ಕನ್ನಡ ಭಾಷೆಯನ್ನು ಉಳಿಸುವ ಬೆಳೆಸುವ ಸಂಘಟಿತ ಪ್ರಯತ್ನಗಳಲ್ಲಿ ತೊಡಗಬೇಕೆಂದು ತಿಳಿಸಿದರು.
ಪ್ರಾಂಶುಪಾಲರಾದ ಡಾ. ಗಿರೀಶ್ ಟಿ. ಮಾತನಾಡಿ, ಕನ್ನಡವೆಂಬುದು ಕೇವಲ ಸಂಪರ್ಕ ಭಾಷೆಯಲ್ಲ, ಅದು ನಮ್ಮ ಜೀವದಾತೆ, ಜನ್ಮದಾತೆ. ನಮ್ಮ ಬದುಕನ್ನು, ಭವಿಷ್ಯನ್ನು ನಿರ್ಮಿಸುವುದು ಕನ್ನಡ ಭಾಷೆ. ನಿತ್ಯ ನಾವುಗಳು ಬಳಸುವ ಪದಾರ್ಥಗಳ ಹೆಸರುಗಳು ಸಹ ಆಂಗ್ಲಮಹವಾಗಿವೆ. ಉದಾರೀಕರಣ ಹಾಗೂ ಜಾಗತೀಕತಣದ ಭರಾಟೆಯಲ್ಲಿ ಒಂದು ಪ್ರಾಂತ್ಯದ ಜನರ ಜೀವನಾಡಿಯಾದ ಭಾಷೆಯನ್ನು ಕೆಳಮಟ್ಟದಲ್ಲಿ ನೋಡುವಂತಹ ಕೀಳು ಭಾವನೆ ರೂಢಿಗತವಾಗುತ್ತಿದೆ, ಇದು ಮೊದಲು ದೂರವಾಗಬೇಕು. ಪರಭಾಷೆಯ ವ್ಯಾಮೋಹದಿಂದ ಕನ್ನಡ ಮಾಧ್ಯಮದ ಶಾಲೆಗಳ ಸ್ಥಿತಿ ಅಸ್ಥಿರವಾಗುತ್ತಿದೆ. ಅದಕ್ಕಾಗಿ ನಾವುಗಳು ಮೊದಲು ನಮ್ಮ ಪರಿಸರದಲ್ಲಿ ನಮ್ಮ óಭಾಷೆಯನ್ನು ನಿತ್ಯ ಬಳಸುವ ಪರಿಪಾಠ ಬೆಳೆಸಿಕೊಳ್ಳಬೇಕು, ಭಾಷೆಯನ್ನು ಸೃಜನಾತಕವಾಗಿ ಪ್ರಯೋಗಿಸುವ ಚಟುವಟಿಕೆಯನ್ನು ಇಂದಿನ ಜನತೆಗೆ ರೂಢಿತಗಮಾಡಬೇಕಾಗಿದೆ. ನಮ್ಮ ಮನಸ್ಸಿನ ರಸಭಾವಗಳನ್ನು ವ್ಯಕ್ತ ಪಡಿಸುವದು ನಮ್ಮ ಮಾತೃಭಾಷೆಯಿಮದ ಸಾಧ್ಯ, ಅದು ಎಷು ಕಾರ್ಯರೂಕ್ಕೆ ಒಳಪಡುವುದೋ ಅಷ್ಟು ಭಾಷಾ ಪರಿಣಿತ ಬೆಳೆಯಲು ಸಾಧ್ಯ, ಹಾಗಾಗಿ ಸೀಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ತಮ್ಮ ಪ್ರತಿಭೆಗಳನ್ನು ಬೆಳೆಸಿಕೊಳ್ಳಬೇಕು. ಇಂತಹ ಪ್ರಯತ್ನದಿಂದ ನಮ್ಮ ನಾಡು, ನುಡಿ, ಸಂಸ್ಕøತಿ, ಕಲೆಗಳನ್ನು ಉಳಿಸಲು ಸಾಧ್ಯವಾಗುವುದುತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ನೇತ್ರಾವತಿ, ಶ್ರೀ ವಿಜಯ್ ಕುಮಾರ್, ಶ್ರೀಪ್ರಶಾಂತ್, ಕು. ಭುವನೆಶ್ವರಿ ಕಾರ್ಯಕ್ರಮವನ್ನ ಕುರಿತು ಮಾತನಾಡಿದರು, ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಗಳು ರಮೇಶ್ ಮತ್ತು ಮೋಹನ್ ನಿರೂಪಿಸಿದರು, ಈಶ್ವರಪ್ಪ ನಾಡಗೀತೆ & ರೈತಗೀತೆ ಹಾಡಿದರು,ಕಾವ್ಯ ವಂದಿಸಿದರು.
ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ವಿಶೇಷವಾಗಿ ಕನ್ನಡ ಪದ್ಯಗಳಿಗೆ ಕೋಲಾಟ ನೃತ್ಯ ನಡೆಸಿಕೊಟ್ಟರು.
ಜನ ಹಿತ ಸಭಾ” (ರಿ) ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆ ಹಾಗೂ “ಜನ ಹಿತ ಸೇವಾ ಪ್ರಶಸ್ತಿ ಪ್ರದಾನ”
ನಗರದ ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ “ಜನ ಹಿತ ಸಭಾ” (ರಿ)
ಜನ ಹಿತ ಸಭಾ” (ರಿ) ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆ ಹಾಗೂ “ಜನ ಹಿತ ಸೇವಾ ಪ್ರಶಸ್ತಿ ಪ್ರದಾನ”
ನಗರದ ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ “ಜನ ಹಿತ ಸಭಾ” (ರಿ) ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆ ಹಾಗೂ “ಜನ ಹಿತ ಸೇವಾ ಪ್ರಶಸ್ತಿ ಪ್ರದಾನ” ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಜನ ಹಿತ ಸಭಾ ಸಂಸ್ಥೆಯು ಜನರಿಂದ ಜನರಿಗಾಗಿ ಜನ ಸೇವೆ ಮಾಡಲು ಸ್ಥಾಪಿಸಿದ ಸಂಸ್ಥೆಯಾಗಿದೆ. ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಜನತೆಯ ಶ್ರೇಯೋಭಿವೃದ್ಧಿಗಾಗಿ, ಲಿಂಗ ತಾರತಮ್ಯ, ಗ್ರಾಮೀಣ ಅಭಿವೃದ್ಧಿಯಂತಹ ಧ್ಯೇಯೊದ್ದೇಶಗಳನ್ನು ಹೊಂದಿದೆ. ಈಗಾಗಲೇ ಸಂಸ್ಥೆಯ ವತಿಯಿಂದ ವಿವಿಧ ಜಿಲ್ಲೆಗಳಲ್ಲಿ ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ, ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ರಾಷ್ಟ್ರೀಯ ಹಬ್ಬಗಳ ಆಚರಣೆ ಮತ್ತು ಮಹತ್ವ ಹಾಗೂ ಮಹಿಳಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಇದೇ ರೀತಿಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ‘ಜನರ ಹಿತವೇ ನಮ್ಮ ಹಿತ’ ವಾಗಿದೆ ಎಂದು ಜನ ಹಿತ ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀಮತಿ ರತ್ನ ಎಂ ರವರು ಸಂಸ್ಥೆಯ ಕಾರ್ಯಕ್ರಮಗಳನ್ನು ತಿಳಿಸಿದರು.
ಡಾ. ಜಗನ್ನಾಥ ಕೆ. ಡಾಂಗೆ, ಸಹ ಪ್ರಾಧ್ಯಾಪಕರು ಕುವೆಂಪು ವಿಶ್ವವಿದ್ಯಾಲಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಸಮಾಜದಿಂದ ಎಲ್ಲವನ್ನು ಪಡೆದ ನಾವುಗಳು ಮುಂದಿನ ಪೀಳಿಗೆಗಾಗಿ ಪಡೆದ ಒಂದಿಷ್ಟು ಸೌಲಭ್ಯಗಳನ್ನು ಪುನಃ ಸಮಾಜಕ್ಕೆ ನೀಡುವ ಜವಬ್ದಾರಿ ಪ್ರತಿ ಪ್ರಜೆಯ ಕರ್ತವ್ಯವಾಗಿದೆ. ಯುವ ಜನತೆಗೆ ಆಸಕ್ತಿ, ಅಭಿರುಚಿಗಳನ್ನು ಬೆಳೆಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸುವುದು ಪ್ರಸ್ತುತ ಸಮಾಜಕ್ಕೆ ಅಗತ್ಯವಾಗಿದೆ. ವಿದ್ಯಾವಂತರೆಲ್ಲ ತಮ್ಮ ತಮ್ಮ ಹಳಿಗಳಿಗೆ ಪುನಃ ತೆರಳಿ ಅಲ್ಲಿಯ ಸಾರ್ವಜನಿಕ ಕ್ಷೇತ್ರವನ್ನು ಅಬಿವೃದ್ಧಿಮಾಡುವಲ್ಲಿ ನಿರತರಾಗಕಬೇಕು. ಸಮಾಜಕ್ಕೆ ಅಂಟಿಕೊಂಡಿರುವ ಮೌಢ್ಯಗಳಿಂದ ಮುಕ್ತವಾಗಿ, ವೈಚಾರಿಕ ಹಾಗೂ ವೈಜ್ಞಾನಿಕ ಅರಿವು ಮೂಢಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು. ಸಂಸ್ಥೆವತಿಯಿಂದ ಪ್ರತಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಸಮಸ್ಯೆಗಳ ನಿರ್ಮೂಲನೆಗೆ ಸಮ್ಮೇಳನ ಹಾಗೂ ಕಾರ್ಯಕ್ರಮ ಆಯೋಜಿಸುವ ಗುರಿ ಹೊಂದಿರುವುದನ್ನು ತಿಳಿಸಿ, ಇಂತಹ ಕಾರ್ಯಕ್ಕಾಗಿ ಸಮಾಜದ ಎಲ್ಲ ಸಮುದಾಯಗಳು ಕೈಜೋಡೊಸಬೇಕಾಗಿ ಕರೆನೀಡಿದರು. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಜನ ಹಿತ ಸಭೆಯಂತಹ ಸ್ವಯಂ ಸೇವಾ ಸಂಸ್ಥೆಗಳು ಮಾಡುವಂತಹ ಉತ್ತಮ ಕಾರ್ಯಗಳು ಇತರರಿಗೂ ಸೇವೆ ಮಾಡುವವರಿಗೆ ಪ್ರೇರಣೆ ನೀಡುತ್ತವೆ ಎಂದು ಡಿ.ಪಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ನಿರಂಜನ ಮೂರ್ತಿಯವರು ತಿಳಿಸಿದರು.
ಜನ ಹಿತ ಸಭಾ ದ ವತಿಯಿಂದ, ಜನ ಹಿತ ಸೇವಾ ಪ್ರಶಸ್ತಿ ಪ್ರದಾನ : ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ರುದ್ರೇಶ್ (ಕ್ರೀಡೆ), ದೇಶ ರಕ್ಷಣೆ ಸೇವೆ ಸಲಿಸಿದ ಶ್ರೀಯುತ ಎಮ್. ಜಿ. ಪ್ರಕಾಶ್, ಹಾಗೂ ಶ್ರೀಯುತ ಶಾಂತಕುಮಾರ್, ಶ್ರೀಯುತ ಸುಬ್ರಮಣ್ಯ (ಮಾಜಿ ಸೈನಿಕರು ಹಾಗೂ ದೇಶೀಯ ಉತ್ಪನ್ನ ತಯಾರಿಕೆ), ಶ್ರೀಯುತ ಮುರುಗನ್ (ಪಕ್ಷಿಪ್ರೇಮಿ), ಶ್ರೀಯುತ ಪ್ರಶಾಂತ್ ಎಲ್. (ಪರಿಸರ ಸ್ವಚ್ಛತೆ-ಮಾರ್ಗ ಸಂಸ್ಥೆ), ಶ್ರೀಮತಿ ಸುಮತಿ (ಸಾವಯವ ಕೃಷಿ) ಹಾಗೂ ಮಹಮದ್ ಲಥೀಫ್ ಉಲ್ಹಾ (ಕರಾಟೆ). ಇವರೆಲ್ಲರನ್ನು ಸಂಸ್ಥೆವತಿಯಿಂದ ಸನ್ಮಾನಿಸಲಾಯಿತು.
ಜನ ಹಿತ ಸಭೆಯ ಚಿತ್ರದುರ್ಗ ಜಿಲ್ಲಾ ಸಂಚಾಲಕರಾದ ಡಾ. ಗಿರೀಶ್ ಟಿ ರವರು ಪ್ರಾಸ್ತವಿಕವಾಗಿ ಮಾತನಾಡಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು, ಬಿ.ಡಿ.ಪ್ರಶಿಕ್ಷಣಾರ್ಥಿಯಾದ ಈಶ್ವರಪ್ಪ ಸ್ವಾಗತಿಸಿದರು, ಎಸ್.ಎಸ್.ಕೆ.ಎಸ್. ಬಿ.ಇಡಿ. ಕಾಲೇಜಿನ ಉಪನ್ಯಾಸಕಿಯಾದ ಶ್ರೀಮತಿ ರೂಪ ಕಾರ್ಯಕ್ರಮವನ್ನು ನಿರೂಪಿಸಿದರು. ಜನ ಹಿತ ಸಂಸ್ಥೆಯ ದಾವಣಗೆರೆ ಜಿಲ್ಲಾ ಸಂಚಾಲಕರಾದ ಡಾ. ನಾಗರಾಜ್ ರವರು ಎಲ್ಲರನ್ನು ವಂದಿಸಿದರು, ಶಿವಮೊಗ್ಗ ಸಂಚಾಲಕರಾದ ಶ್ರೀ ಸೋಮಶೇಖರ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅನಿತ ಹಾಗೂ ಸಂಸ್ಥೆಯ ಉಪನ್ಯಾಕರು ವಿದ್ಯಾರ್ಥಿಗಳು, ಹಾಗೂ ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು ಹಾಜರಿದ್ದರು.
“ ಮಾಜಿ ಸೈನಿಕರಾದ ಶ್ರೀ ಪ್ರಕಾಶ್ ರವರಿಂದ ಸ್ವಾತಂತ್ರ್ಯೋತ್ಸವ ದಿನದ ಧ್ವಜಾರೋಹಣ ”
ದೇಶದ ಜನತೆ ಶಾಂತಿ ಮತ್ತು ಸ್ವಾವಲಂಬನೆಯಿಂದ ಜೀವನ ನಡೆಸಬೇಕೆಂದರೆ ಪ್ರತಿಪ್ರಜೆಯಲ್ಲಿ ದೇಶಭಕ್ತಿ, ದೇಶಪ್ರೇಮ ಅಗತ್ಯವಾದುದು. ಸ್ವಾತಂತ್ರ್ಯ ಪಡಿಯಲು ಹೋರಾಡಿದ ಸಾವಿರಾರು ಹೋರಾಟಗಾರರ ಹೋರಾಟ, ಬಲಿದಾನಗಳಿಂದ ನಾವೇಲ್ಲರೂ ಸ್ವತಂತ್ರದಿಂದ ಬದುಕುವಂತಾಗಿದೆ. ನಮ್ಮ ಇಂದಿನ ಸ್ವತಂತ್ರದ ಬದುಕಿಗೆ ಕಾರಣಕರ್ತರಾದ ಅಸಂಖ್ಯಾತ ದೇಶಪ್ರೇಮಿಗಳನ್ನು ಸ್ಮರಿಸುವ ಸುದಿನವಾಗಿದೆ ಎಂದು ಮಾಜಿ ಸೈನಿಕರಾದ ಶ್ರೀ ಪ್ರಕಾಶ್ ರವರು ಶ್ರೀ ಸದ್ಗುರು ಕಬೀರಾನಂದಸ್ವಾಮಿ ಬಿ.ಇಡಿ. ಮತ್ತು ನರ್ಸಿಂಗ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಭವಿಷ್ಯದ ಸಮಾಜಕ್ಕೆ ಈ ದಿನದ ಮಹತ್ವವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ತಿಳಿಸುವ ಪ್ರಯತ್ನವನ್ನು ನಾವು ಮಾಡಬೇಕು. ದೇಶಾಭಿಮಾನ ನಮ್ಮ ಸಮಾಜದ, ಸಂಸ್ಕøತಿಯ ಒಂದು ಭಾಗವಾಗಬೇಕು. ಶಿಕ್ಷಣದ ಪ್ರಾರಂಭದ ಅವಧಿಯಲ್ಲಿಯೇ ದೇಶಪ್ರೇಮದ ಪರಿಚಯ ಹಾಗೂ ಪರಿಪಾಠವನ್ನು ರೂಢಿಸಬೇಕು. ಸಮಾಜದ ಹಲವು ಸಮಸ್ಯೆಗಳಿಗೆ ನಮ್ಮಲ್ಲಿರುವ ಹಣ, ಆಸ್ತಿಯ ವ್ಯಾಮೋಹವೇ ಕಾರಣವಾಗಿದೆ, ಇಂತಹ ಸಮಸ್ಯೆಗೆ ನಮ್ಮಿಂದ ಸಾಧ್ಯವಾಗುವ ಪರಿಹಾರವನ್ನು ನಾವೇ ಕಂಡುಕೊಳ್ಳಬೇಕು. ವಿದ್ಯಾರ್ಥಿಗಳು ದಿನನಿತ್ಯ ಓದುವುದನ್ನು ರೂಢಿಸಿಕೊಳ್ಳಬೇಕು, ನೈಜ ಇತಿಹಾಸವನ್ನು ತಿಳಿಯಬೇಕು. ದೇಶೀಯ ವಸ್ತುಗಳು ಹಾಗೂ ಉತ್ಪನ್ನಗಳನ್ನು ಬಳಸುವುದನ್ನು ರೂಢಿಸಿಕೊಳ್ಳಬೇಕು ಹಾಗೂ ಇತರರಿಗೂ ತಿಳಿಸಬೇಕು. ಇಂತಹ ಪ್ರಯತ್ನಗಳಿಂದ ದೇಶವನ್ನು ಆಧುನಿಕ ಗುಲಾಮಗಿರಿಯಿಂದ ಹೊರತರಬೇಕು. ಅಮೂಲ್ಯವಾದ ಮಾನವ ಜೀವನವನ್ನು ಸಂತೋಷದಿಂದ ನೆಮ್ಮದಿಯಿಂದ ಸನ್ಮಾರ್ಗದಲ್ಲಿ ನಡೆಸುವಂತೆ ಕರೆನೀಡಿದರು ಹಾಗೂ ಸೈನಿಕ ಸೇವೆಯ ಅನಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಡಿ.ಪಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ನಿರಂಜನಮೂರ್ತಿಯವರು ಮಾತನಾಡಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟನೆಗಳನ್ನು ತಿಳಿಸಿ, ಪ್ರಸ್ತುತ ಸಮಾಜದಲ್ಲಿ ನಾವೆಲ್ಲರೂ ಸ್ವತಂತ್ರರು, ನಮಗೆ ಸಿಕ್ಕಿರುವ ಈ ಅಮೂಲ್ಯವಾದ ಸ್ವಾತಂತ್ರ್ಯವನ್ನು ನಾವುಗಳು ನಮ್ಮ ಉತ್ತಮ ಜೀವನವನ್ನು ಕಟ್ಟಿಕೊಂಡರೆ ಸಾರ್ಥವಾಗುತ್ತದೆ. ಎಲ್ಲ ಬೇಧಭಾವಗಳನ್ನು ಮರೆತು ನಾವೇಲ್ಲರೂ ಭಾರತೀಯರೆಂಬ ಏಕತೆಯ ಭಾವನೆ ನಮ್ಮಲ್ಲಿ ಇಂದು ಮೂಡುವಂತಾಗಿದೆ. ಸ್ವಾವಲಂಬನೆ, ಶಿಸ್ತು, ಸರಳತೆಯ ಜೀವನವನ್ನು ರೂಢಿಸಿಕೊಳ್ಳಬೇಕು. ಮಹಾತ್ಮಗಾಂಧೀಜಿಯವರ ಸರಳತೆ, ಅಹಿಂಸಾ ತತ್ವದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಬಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ರವರು ಮಾತನಾಡುತ್ತಾ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ನಾವೇಲ್ಲರೂ ಭಾರತೀಯರೆಂಬ ದೇಶಾಭಿಮಾನ ಬೆಳೆಯುವಂತಹ ದೃಢನಿರ್ಧಾರವನ್ನು ಕೈಗೊಂಡ ಸರ್ಕಾರಕ್ಕೆ ಹಾಗೂ ದೇಶದ ಪ್ರಧಾನಮಂತ್ರಿಯಾದ ಸನ್ಮಾನ್ಯ ನರೇಂದ್ರಮೋದಿಯವರಿಗೆ ಕೃತಜ್ಞತೆಗಳನ್ನು ತಿಳಿಸಿದರು. ಸ್ವತಂತ್ರ ಹೋರಾಟದ ಧೃವತಾರೆಗಳಾದ ಮಹಾತ್ಮಗಾಂಧೀ, ಭಗತ್‍ಸಿಂಗ್, ಸುಭಾಷ್ ಚಂದ್ರಬೋಸ್‍ರ ದೇಶಾಭಿಮಾನದ ಹೋರಾಟವನ್ನು ನೆನಪಿಸಿದರು. ದೇಶಾಭಿಮಾನವು ಮಾನವ ಮಾನವರ ಮಧ್ಯೆ ಉತ್ತಮ ಭಾಂದವ್ಯ, ಸಹಬಾಳ್ವೆ ಸಹಕಾರ ಹಾಗೂ ಭ್ರಾತೃತ್ವದ ಭಾವನೆಯನ್ನು ಬೆಳೆಸಬೇಕು. ಅಂಧ ದೇಶಾಭಿಮಾನದಿಂದ ಯುವ ಜನತೆ ಸಮಸ್ಯೆಗಳಲ್ಲಿ ಸಿಲುಕುತ್ತಿದ್ದಾರೆ. ದೇಶಾಭಿಮಾನ ಎನ್ನುವುದು ಭೌತಿಕವಾಗಿ ಕಾಣವುದಲ್ಲ, ಅದನ್ನು ಭಾವನಾತ್ಮಕತೆಗೆ ಸೀಮಿತಗೊಳಿಸದೆ, ದೇಶಾಭಿಮಾನವು ನಮ್ಮ ದಿನನಿತ್ಯದ ಬದುಕಿನಲ್ಲಿ ನಾವೇ ರೂಢಿಸಿಕೊಳ್ಳುವುದಾಗಿದೆ ಎಂದು ತಿಳಿಸಿದರು. ಉಪನ್ಯಾಸಕರಾದ ಹಾಗೂ ಮಾಜಿ ಸೈನಿಕರಾದ ಶ್ರೀ ಪ್ರಕಾಶ್‍ರವರ ಪತ್ನಿ ಶ್ರೀಮತಿ ರೂಪರವರು ಮಾತನಾಡಿ ರಾಷ್ಟ್ರೀಯ ಹಬ್ಬಗಳು ನಮ್ಮ ಮನೆಯ ಹಬ್ಬಗಳಂತೆ ಅತ್ಯಂತ ಸಂಭ್ರಮದಿಂದ ಆಚರಿಸುವಂತಾಗಬೇಕು, ಅಂತಹ ದೇಶಾಭಿಮಾನ ಇಂದಿನ ಯುವಶಕ್ತಿಗೆ ಬೆಳೆಸಿಕೊಳ್ಳುವಂತೆ ಕರೆನೀಡಿದರು. ಶ್ರೀಮತಿ ನೇತ್ರಾವತಿಯವರು ಸ್ವತಂತ್ರ ಹೋರಾಟಗಾರರ ಹೋರಾಟದ ಘಟನೆಗಳನ್ನು ತಿಳಿಸಿದರು. ಬಿ.ಇಡಿ. ಉಪನ್ಯಾಸಕರಾದ ವಿಜಯ್ ಕುಮಾರ್, ಪ್ರಶಾಂತ್ ಹಾಗೂ ಪ್ಯಾರಮೇಡಿಕಲ್ ಕಾಲೇಜಿ ಪ್ರಾಂಶುಪಾಲರಾದ ಶ್ರೀ ರಾಘವೇಂದ್ರರವರು, ಐಶ್ವರ್ಯ ಮತ್ತು ಬಿ.ಇಡಿ. ಹಾಗೂ ನರ್ಸಿಂಗ್, ಪ್ಯಾರಮೇಡಿಕಲ್ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ನಡೆಸಿಕೊಟ್ಟರು.