ಶ್ರೀ ಸದ್ಗುರು ಕಬೀರಾನಂದಸ್ವಾಮಿ ಬಿ.ಇಡಿ. ಕಾಲೇಜ್, ಚಿತ್ರದುರ್ಗ.
75ನೇ ಸ್ವಾತಂತ್ರ್ಯ ದಿನಾಚರಣೆ
“ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ “ಪ್ರೊ. ರಂಗಸ್ವಾಮಿ” ರವರಿಂದ ಸ್ವಾತಂತ್ರ್ಯೋತ್ಸವ ದಿನದ ಧ್ವಜಾರೋಹಣ ”
ಭಾರತಾಂಭೆಯು ಬ್ರಿಟೀಷರ ಗುಲಾಮಗಿರಿಯಿಂದ ಮುಕ್ರಿ ಹೊಂದಿಲು ತ್ಯಾಗಬಲಿದಾನ ಮಾಡಿದ ಸಾವಿರಾರು ದೇಶ ಯೋಧರನ್ನು ಸ್ಮರಿಸುತ್ತಾ, ತಾವು ಭಾಗವಹಿಸಿದ ಕ್ವಿಟ್ ಇಂಡಿಯಾ ಚಳುವಳಿಯ ಘಟನಾವಳಿಗಳನ್ನು ತಿಳಿಸಿದರು. ನಾವು ಇಂದು ಅನುಭವಿಸುತ್ತಿರುವ ಎಲ್ಲ ಹಕ್ಕು ಮತ್ತು ಸೌಲಭ್ಯಗಳ ಹಿಂದಿನ ಪರಿಶ್ರಮವನ್ನು ಪ್ರತಿ ಮಗುವಿಗೂ ತಿಳಿಯುವಂತೆ ಮಾಡಬೇಕು. ಇದರಿಂದಾಗಿ ಪ್ರಜಾಪ್ರಭುತ್ವದ ರಕ್ಞಣೆ, ಶಾಂತಿ ಮತ್ತು ಸ್ವಾವಲಂಬನೆಯಿಂದ ಜೀವನ ಮಾರ್ಗವನ್ನು ರೂಢಿಸಲು ಸಾಧ್ಯವಾಗುತ್ತದೆ. ಸ್ವತಂತ್ರ ಹೋರಾಟದ ನೈಜ ಸನ್ನಿವೇಶಗಳನ್ನು ಹೇಳುವ ಮೂಲಕ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಬೆಳೆಸಿಕೊಳ್ಳಿ ಎಂದು “ಪ್ರೊ. ರಂಗಸ್ವಾಮಿ” ರವರು ಶ್ರೀ ಸದ್ಗುರು ಕಬೀರಾನಂದಸ್ವಾಮಿ ಬಿ.ಇಡಿ. ಮತ್ತು ನರ್ಸಿಂಗ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 75ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭರತ ಖಂಡದ ಸ್ವಾತಂತ್ರ್ಯ ದಿನವೇ ದೇಶದ ಜನತೆಗೆ ಅತ್ಯಂತ ಸುದಿನವಾಗಿದೆ. ದೇಶದ ಜನತೆಯೇ ದೇಶದ ಆಸ್ತಿ, ಅದರಲ್ಲಿಯೂ ಯುವ ಜನತೆ ದೇಶವನ್ನು ಮುನ್ನೆಡೆಸುವ ಶಕ್ತಿಯಾಗಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ಸ್ವತಂತ್ರ ಹೋರಾಟಗಾರರ ಜೀವನ ಚರಿತ್ರೆ ಓದುವುದನ್ನು ರೂಢಿಸಿಕೊಳ್ಳಬೇಕು. ಇತಿಹಾಸದ ಜ್ಞಾನದ ಮೂಲಕ ಉತ್ತಮ ವ್ಯಕ್ತಿ, ನಾಯಕರನ್ನು ನಿರ್ಮಾನ ಮಾಡಲು ಸಾಧ್ಯವಾಗುತ್ತದೆ. ಜನತೆಗೆ ಉತ್ತಮ ಜ್ಞಾನ, ಸಾಮಥ್ರ್ಯ, ವೈಜ್ಞಾನಿಕ, ವೈಚಾರಿಕ ಹಾಗೂ ಪ್ರಗತಿಶೀಲ ಚಿಂತನೆಗಳನ್ನು ಬೆಳೆಸಬೇಕು. ಉತ್ತಮ ಪ್ರಜೆಗಳ ನಿರ್ಮಾಣಕ್ಕಾಗಿ ಸಮಾಜಕ್ಕೆ ಈ ದಿನದ ಮಹತ್ವವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ತಿಳಿಸುವ ಪ್ರಯತ್ನವನ್ನು ನಾವು ಮಾಡಬೇಕು. ದೇಶಾಭಿಮಾನ ನಮ್ಮ ಸಮಾಜದ, ಸಂಸ್ಕøತಿಯನ್ನು ರೂಢಿಸುವವುದು ಶಿಕ್ಷಣದ ಪ್ರಾರಂಭದ ಅವಧಿಯಲ್ಲಿಯೇ ಪ್ರಾರಂಭವಾಗಬೇಕು ಎಂದು ಶಿಕ್ಷಣದ ಪಾತ್ರವನ್ನು ತಿಳಿಸಿದರು. ಈ ಸಂದರ್ಭದಲ್ಲಿ “ಪ್ರೊ. ರಂಗಸ್ವಾಮಿ” ರವರು ರಚಿಸಿದ “ಭಾರತಾಂಭೆ ಆದಿಶಕ್ತಿ- ರಾಷ್ಟ್ರಗೀತೆಗಳು” ಕವನ ಸಂಕಲನ ವನ್ನು ಬಿಡುಗಡೆಗೊಳಿಸಲಾಯಿತು.
ಗಾಂಧೀಜಿಯವರ ಸರಳ ಜಿವನ ಮತ್ತು ತ್ಯಾಗದ ಬದುಕು ಎಂದೆಂದಿಗೂ ದೇಶದ ಜನತೆಗೆ ಆದರ್ಶವಾಗಿದ್ದಾರೆ. ಅವರು ಭಾರತ ದೇಶದ ಸ್ವತಂತ್ರ ಹೋರಾಟಗಾರರಲ್ಲಿ ತಮ್ಮ ಜೀವನಾದರ್ಶಗಳ ಮೂಲಕವೇ ಅಪಾರ ಹೋರಟಗಾರರು ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು. ಬ್ರಿಟೀಷರ ವಿರುದ್ಧ ಯಾವುದೇ ಶಸ್ತ್ರಾಸ್ತ್ರ ಬಳಸದೇ ನಿಶಸ್ತ್ರ ನೀತಿಯಿಂದ- ಅಹಿಂಸಾ ಮಾರ್ಗದಿಂದ ದೇಶ ಸ್ವತಂತ್ರಗೊಳ್ಳುವಲ್ಲಿ ಮಹತ್ವಪೂರ್ಣವಾದ ಪಾತ್ರನಿರ್ವಹಿಸಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಸ್ವತಂತ್ರ ಭಾರತಕ್ಕೆ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಸಂವಿಧಾನ ರಚನೆಗಾಗಿ ಶ್ರಮಿಸಿದ್ದಾರೆ. ಇಂತಹ ಸಾವಿರಾರು ಹೋರಾಟಗಾರರ ಸಾಧನೆ ಇಂದಿನ ಯುವ ಪೀಳಿಗೆ ಮಾದರಿಯಾಗಿ ಅನುಸರಿಸಬೇಕಾಗಿದೆ ಎಂದು ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ವಿದ್ಯಾಪೀಠದ ಪೀಠಾಧ್ಯಕ್ಷರಾದ "ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜಿಯವರು," “ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು. ದೇಶಾಭಿಮಾನವು ಮಾನವರಲ್ಲಿ ನಮ್ಮಲ್ಲಿ ಉತ್ತಮ ಭಾಂದವ್ಯ, ಸಹಬಾಳ್ವೆ ಸಹಕಾರ ಹಾಗೂ ಭ್ರಾತೃತ್ವದ ಭಾವನೆಯನ್ನು ಬೆಳೆಸಬೇಕು. ದೇಶಾಭಿಮಾನ ಎನ್ನುವುದು ಭೌತಿಕವಾಗಿ ಕಾಣವುದಲ್ಲ, ಅದನ್ನು ನಮ್ಮ ದಿನನಿತ್ಯದ ಬದುಕಿನಲ್ಲಿ ನಾವೇ ರೂಢಿಸಿಕೊಳ್ಳುವುದಾಗಿದೆ, ಸುಭದ್ರ ದೇಶ ನಿರ್ಮಾಣ ಉತ್ತಮ ಪ್ರಜೆಗಳ ನಿರ್ಮಾಣದಿಂದ ಸಾಧ್ಯವಾಗುತ್ತದೆ, ಹಾಗಾಗಿ ಎಲ್ಲರು ಉತ್ತಮರಾಗಿ ಬಾಳುವ ದಾರಿಯನ್ನು ಅನುಸರಿಸುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ “ಪ್ರೊ. ರಂಗಸ್ವಾಮಿಯವರ” ಸೇವೆ ಮತ್ತು ಸಾಧನೆಯನ್ನು ಮೆಚ್ಚಿ “ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜಿಯವರು” ಅಭಿನಂದಿಸಿ ಗೌರವಿಸಲಾಯಿತು.
ಡಿ.ಪಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ನಿರಂಜನಮೂರ್ತಿಯವರು ಮಾತನಾಡಿ ಭಾರತ ಸ್ವಾತಂತ್ರ್ಯ ಹೋರಾಟ ಮತ್ತು ಚಳುವಳಿಗಳ ಪ್ರಮುಖ ಘಟನೆಗಳನ್ನು ತಿಳಿಸಿ, ಬಹುಧರ್ಮಿಯ, ಬಹುಸಂಸ್ಕøತಿ ಹೊಂದಿರುವ ಸಮಾಜದಲ್ಲಿ ನಾವೆಲ್ಲರೂ ಸ್ವತಂತ್ರರು, ನಮಗೆ ಸಿಕ್ಕಿರುವ ಈ ಅಮೂಲ್ಯವಾದ ಸ್ವಾತಂತ್ರ್ಯವನ್ನು ನಾವುಗಳು ನಮ್ಮ ಉತ್ತಮ ಜೀವನವನ್ನು ಕಟ್ಟಿಕೊಂಡರೆ ಸಾರ್ಥವಾಗುತ್ತದೆ. ಎಲ್ಲ ಬೇಧಭಾವಗಳನ್ನು ಮರೆತು ನಾವೇಲ್ಲರೂ ಭಾರತೀಯರೆಂಬ ಏಕತೆಯ ಭಾವನೆ ನಮ್ಮಲ್ಲಿ ಇಂದು ಮೂಡುವಂತಾಗಿದೆ. ಸ್ವಾವಲಂಬನೆ, ಶಿಸ್ತು, ಸರಳತೆಯ ಜೀವನವನ್ನು ರೂಢಿಸಿಕೊಳ್ಳಬೇಕು. ಮಹಾತ್ಮಗಾಂಧೀಜಿಯವರ ಸರಳತೆ, ಅಹಿಂಸಾ ತತ್ವದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ರವರು ಮಾತನಾಡುತ್ತಾ ಸ್ವತಂತ್ರ ನಂತರ ದೇಶದ ಕಾನೂನು ತಮ್ಮೇಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ, ದೇಶದ ಐಕ್ಯತೆಗೆ ನಾವೇಲ್ಲರೂ ಶ್ರಮಿಸಬೇಕಿದೆ. ಸ್ವತಂತ್ರ ಹೋರಾಟ ಮತ್ತು ಹೋರಾಟಗಾರರ ಜೀವನಾದರ್ಶಗಳನ್ನು ಮನೆಮನೆಗೆ ತಲುಪಿಸುವಂತ ಪ್ರಯತ್ನವನ್ನು ಯುವಪೀಳಿಗೆ ಮಾಡಬೇಕಿದೆ. ಸ್ವತಂತ್ರ ಹೋರಾಟದ ಧೃವತಾರೆಗಳಾದ ಮಹಾತ್ಮಗಾಂಧೀ, ಭಗತ್ಸಿಂಗ್, ಡಾ. ಬಿ.ಆರ್. ಅಂಬೇಡ್ಕರ್, ಸುಭಾಷ್ ಚಂದ್ರಬೋಸ್ರ ದೇಶಾಭಿಮಾನದ ಹೋರಾಟವನ್ನು ಪ್ರಶಿಕ್ಷಣಾಥಿಗಳು ಭಾಷಣದ ಮೂಲಕ ನೆನಪಿಸಿದರು. ಕಾರ್ಯಕ್ರಮದಲ್ಲಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಶ್ರೀಮತಿ ವಿಶಾಲ ಎಸ್. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್. ಪ್ರಶಾಂತ್, ಉಪಸ್ಥಿತರಿದ್ದರು ಹಾಗೂ ಬಿ.ಇಡಿ. ನರ್ಸಿಂಗ್ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂಧಿವರ್ಗ ಮತ್ತು ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಬಿ.ಇಡಿ. ಪ್ರಶಿಕ್ಷಣಾರ್ಥಿಯಾದ ಮಾಲೀಹ ತಮ್ಕಿನ್ ನಿರೂಪಿಸಿದರು, ಜಗದೀಶ್ ಪ್ರಾರ್ಥಿಸಿದರು, ದಿವ್ಯ ಸ್ವಾಗತಿಸಿದರು, ಅನುದೀಪ್ ವಂದಿಸಿದರು.
No comments:
Post a Comment