Thursday, 11 November 2021

ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ - ರಾಷ್ಟ್ರೀಯ ಶಿಕ್ಷಣ ದಿನಾಚರಣೆ

 ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಚಿತ್ರದುರ್ಗ. 


ದಿನಾಂಕ: 11-11-2021

“ರಾಷ್ಟ್ರೀಯ ಶಿಕ್ಷಣ ದಿನಾಚರಣೆ”

ಭಾರತದ ಸ್ವತಂತ್ರ್ಯ ಹೋರಾಟಗಾರರೂ ಸ್ವತಂತ್ರ್ಯ ಭಾರತದ ಪ್ರಥಮ ಶಿಕ್ಷಣ ಸಚಿವರಾದ ‘ಮೌಲಾನಾಅಬುಲ್ ಕಲಾಂ ಆಜಾದ್’ ರವರ ಜನ್ಮ ದಿನವಾದ ನವೆಂಬರ್ 11 ರಂದು “ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ” ಆಚರಿಸಲಾಗುತ್ತಿದೆ ಎಂದು ‘ಎಸ್.ಎಸ್.ಕೆ.ಎಸ್.  ಶಿಕ್ಷಣ ಮಹಾವಿದ್ಯಾಲಯದ’ ಪ್ರಾಂಶುಪಾಲರಾದ ‘ಡಾ. ಗಿರೀಶ್ ಟಿ’ ಯವರು ತಿಳಿಸಿದರು, ಚಿತ್ರದುರ್ಗ ನಗರದ ಶ್ರೀ ಸದ್ಗುರು ಕಬೀರಾನಂದ ಬಿ.ಇಡಿ. ಕಾಲೇಜನಲ್ಲಿ ಏರ್ಪಡಿಸಿದ್ದ “ರಾಷ್ಟ್ರೀಯ ಶಿಕ್ಷಣ ದಿನ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 


        ಭಾರತ ಸ್ವತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರ ಆತ್ಮೀಯ ಒಡನಾಡಿಯಾಗಿದ್ದವರು ‘ಅಬುಲ್ ಕಲಾಂ ಆಜಾದ್‍ರವರು’. ಅತ್ಯುತ್ತಮ ಬರಹಗಾರರಾದ ಕಲಾಂರವರು ತನ್ನ ಲೇಖನಗಳ ಮೂಲಕ ಬ್ರಿಟಿಷರ ಆಡಳಿತದ ವಿರುದ್ಧ ಹಾಗೂ ಭಾರತೀಯರಲ್ಲಿ ಹೋರಾಟ ಸಂಘಟನೆಯ ಮನೋಭಾವನೆಯ ವಿಚಾರಗಳನ್ನು ಬರೆಯುತ್ತಿದ್ದರು. ಸ್ವತಂತ್ರ್ಯ ಹೋರಾಟದಲ್ಲಿ ಹಲವುಬಾರಿ ಸೆರೆಮನೆ ವಾಸವನ್ನು ಸಹ ಅನುಭವಿಸಿದರು. ಕಲಾಂರು ಭಾರತೀಯ ಕಾಂಗ್ರೇಸ್‍ನ ಅಧ್ಯಕ್ಷರಾಗಿಯೂ ಸಹ ಕಾರ್ಯ ನಿರ್ವಹಿಸಿದರು. ಇವರು ತನ್ನ ಜೀವನಪೂರ್ಣ ಹಿಂದೂ-ಮುಸ್ಲಿಂರ ಐಕ್ಯತೆಗಾಗಿ, ಐಕ್ಯತೆಯ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಅಪ್ಪಟ ಭಾರತೀಯ. ಭಾರತದೇಶ ವಿಭಜನೆಯನ್ನು ವಿರೋಧಿಸಿ, ಅಖಂಡ ಭಾರತ ರಚನೆಗೆ ಒತ್ತು ನೀಡಿದವರು.ಜ್ಯಾತ್ಯಾತೀತ ನಿಲುವಿಗೆ ಕಟಿಬದ್ಧತೆ ಹೊಂದಿದವರು. ಸ್ವತಂತ್ರ್ಯ ಭಾರತದ ಸಚಿವ ಸಂಪುಟದಲ್ಲಿ ಇವರು ಪ್ರಥಮ ಶಿಕ್ಷಣ ಸಚಿವರಾಗಿ, ಶಿಕ್ಷಣದಲ್ಲಿ ಅಮೂಲಾಗ್ರ ಕಾರ್ಯಗಳನ್ನು ಮಾಡಿದವರು. ಭಾರತದ ಶಿಕ್ಷಣಕ್ಕೆ ಭದ್ರ ತಳಹದಿಯನ್ನು ರೂಪಿಸಿದ ಶಿಕ್ಷಣದ ರೂವಾರಿ. ಶಿಕ್ಷಣ ವ್ಯವಸ್ಥೆ ಹಾಗೂ ಉನ್ನತ ಶಿಕ್ಷಣದ ರೂಪುರೇಷೆಯ ನಾಯಕತ್ವವಹಿಸಿ ಯಶಸ್ವಿಗೊಳಿಸಿದವರು. ಹಾಗಾಗಿ ಇವರ ಶೈಕ್ಷಣಿಕ ಸೇವೆಯ ಸವಿನೆನಪಿಗಾಗಿ ಇವರ ಜನ್ಮ ದಿನವನ್ನು “ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ” ಆಚರಿಸಲಾಗುತ್ತಿದೆ, ಕಲಾಂರಂತಹ ನಾಯಕರ ಗುಣಗಳು ಇಂದಿನ ಸಚಿವರಿಗೆ, ನಾಯಕರುಗಳಿಗೆ ಹಾಗೂ ಶೈಕ್ಷಣಿಕ ಚಿಂತಕರುಗಳಿಗೆ ಆದರ್ಶವಾಗಬೇಕಿದೆ.   ಅಬುಲ್‍ ಕಲಾಂ ಆಜಾದ್‍ರಂತಹ ನಾಯಕರ ವಿಚಾರಗಳನ್ನು ಎಲ್ಲಿಯೂ ಓದಲು ಅವಕಾಶವಿಲ್ಲದ ಪರಿಣಾಮವಾಗಿ ಅವರ ಬಗ್ಗೆ ತಿಳಿಯುವಲ್ಲಿ ಅವಕಾಶವಂಚಿತರಾಗುತ್ತಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿರುವವರು ಶಾಲಾ ಕಾಲೇಜುಗಳಲ್ಲಿ ಇಂತಹ ಹಲವು ವ್ಯಕ್ತಿಗಳ ಚಿಂತನೆಗಳನ್ನು ತಿಳಿಸುವಂತಹ ಕಾರ್ಯಗಳಾಗಬೇಕೆಂದು ಕರೆನೀಡಿದರು.

ಶ್ರೀ ಪ್ರಶಾಂತ್‍ರವರು ಅಬುಲ್‍ ಕಲಾಂರವರ ಶೈಕ್ಷಣಿಕ ಸುಧಾರಣೆಗಳನ್ನು ನಾವು ಶಿಕ್ಷಣ ಕ್ಷೇತ್ರದಲ್ಲಿರುವವರು ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು. ಅವರ ಶೈಕ್ಷಣಿಕ ಚಿಂತನೆ, ಆಡಳಿತವು ಇಂದು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ನಾಯಕರು ಹಾಗು ಅಧಿಕಾರಿಗಳು ಅನುಸರಿಸುವುದರಿಂದ ಶಿಕ್ಷಣದ ಪ್ರಗತಿ ಸಾಧಿಸಬಹುದಾಗಿದೆ. ಶ್ರೀಮತಿ ನೇತ್ರಾವತಿಯವರು ಮಾತನಾಡಿ ಅಬುಲ್ ಕಲಾಂ ಆಜಾದ್‍ರವರ ನಾಯಕತ್ವ ಗುಣಗಳು, ಶಿಕ್ಷಕರಿಗೆ, ಪ್ರಶಿಕ್ಷಣಾರ್ಥಿಗಳಿಗೆ ಆದರ್ಶವಾಗಿವೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಬಿ.ಇಡಿ. ಪ್ರಶಿಕ್ಷಣಾರ್ಥಿಯಾದ ಅನುದೀಪ್ ನಿರೂಪಿಸಿದರು, ಲೋಕೇಶ್ ಪ್ರಾರ್ಥಸಿದರು, ಶಿವಪುತ್ರ ಸ್ವಾಗತಿಸಿದರು, ಅರ್ಫೀನ್‍ತಾಜ್ ವಂದಿಸಿದರು. ಆಚರಣೆ ಕುರಿತು ಪ್ರಶಿಕ್ಷಣಾರ್ಥಿಗಳು ಭಾಷಣ ಮಾಡಿದರು.


Wednesday, 8 September 2021

"ಶಿಕ್ಷಕರ ದಿನಾಚರಣೆ, ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭ"


 "ಶಿಕ್ಷಕರ ದಿನಾಚರಣೆ, ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭ"



ದೇಶದ ಭವಿಷ್ಯವಾದ ಮಕ್ಕಳ ಭವಿಷ್ಯವನ್ನು ರೂಪಿಸುವವನೆ ನಿಜವಾದ ಶಿಕ್ಷಕ, ಹಾಗಾಗಿ ಶಿಕ್ಷಕ ದೇಶದ ನಿರ್ಮಾತೃ. ದೇಶಕ್ಕೆ ಉತ್ತಮ ನಾಗರೀಕರ ನಿರ್ಮಾಣದಲ್ಲಿ ತಾಯಿ ಮತ್ತು ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾದುದು.  ಭಾರತ ದೇಶದ ಶಿಕ್ಷಕ ವೃತ್ತಿಯನ್ನು ಹೆಚ್ಚು ಪರಿಣಾಮಕಾರಿಗೊಳಿಸಲು ಶ್ರಮಿಸಿದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರವರು. ಇವರ ಆದರ್ಶದಂತೆ ಇಂದಿನ ಕಲಾಘಟ್ಟದ ಶಿಕ್ಷಕರು ಮಕ್ಕಳಲ್ಲಿ ಸಚ್ಚಾರಿತ್ರ, ಸಜ್ಜನಿಕೆಯ ಹಾಗೂ ಸುಜ್ಞಾನಗಳ ಜೀವನ ಮೌಲ್ಯಗಳನ್ನು ತುಂಬಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವುದು ಶಿಕ್ಷಕರ ಜವಬ್ದಾರಿಯಾಗಿದೆ ಎಂದು ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜಿಯವರು, ಪೀಠಾಧ್ಯಕ್ಷರು ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ವಿದ್ಯಾಪೀಠ, ಇವರು ಎಸ್.ಎಸ್.ಕೆ.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ " ಶಿಕ್ಷಕರ ದಿನಾಚರಣೆ, ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭದ" ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು. ದೇಶದ ಶಿಕ್ಷಣದ ಗುಣಮಟ್ಟ ಶಿಕ್ಷಕರನ್ನು ಅವಲಬಿಸಿದೆ, ಇಡೀ ಶಿಕ್ಷಣ ವ್ಯವಸ್ಥೆಯ ರೂವಾರಿಯೆ ಶಿಕ್ಷಕ. ಮಕ್ಕಳಲ್ಲಿರುವ ಸುಪ್ತ ಪ್ರಜ್ಞೆಯನ್ನು ಹೊರಹೊಮ್ಮುವಂತೆ ಮಾಡಿ, ಸಮಾಜಮುಖಿ ಚಿಂತನೆಯತ್ತ ನಡೆಸುವವರೇ ಶಿಕ್ಷಕರು. ಇಡೀ ಮಾನವ ಸಂಕುಲವನ್ನು ಬೆಳಕಿನಡೆಗೆ ಕೊಂಡ್ಯೊಯುವ ವೃತ್ತಿಯಲ್ಲಿ ನಿರತರಾದ ಶಿಕ್ಷಕರಿಗೊಂದು ದಿನಾಚಾರಣೆಯ ಮೂಲಕ ಗೌರವ, ಪ್ರೇರಣೆ ಹಾಗೂ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷಕರಾಗಿ ತಮ್ಮ ಸೇವೆ, ಕಠಿಣ ಪರಿಶ್ರಮ, ಕ್ರಿಯಾಶೀಲತೆಯಿಂದ ರಾಷ್ಟ್ರದ ಅತ್ಯುನ್ನತ ಸ್ಥಾನವಾದ ರಾಷ್ಟ್ರಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮ ದಿನದಂದು ಶಿಕ್ಷಕ ವೃತ್ತಿಯಲ್ಲಿರುವವರಿಗೆಲ್ಲರಿಗೂ ಗೌರವದ ಆಚರಣೆಯನ್ನು ಪ್ರತಿ ವರ್ಷ ಆಚರಿಸುತ್ತಿದ್ದೇವೆ. ಇಂತಹ ಸಾಧಕ ಶಿಕ್ಷಕರ ಆದರ್ಶಗಳನ್ನು ಪ್ರಶಿಕ್ಷಣಾರ್ಥಿಗಳು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. 

ವಿದ್ಯಾರ್ಥಿ ಸಂಘ

ಕಾರ್ಯಕ್ರಮದ ಅತಿಥಿಗಳಾದ ಶ್ರೀಯುತ ನಿರಂಜನ ಮೂರ್ತಿಸಿ.ಎಲ್.ಡಿ.ಪಿ.ಇಡಿ ಕಾಲೇಜು ಪ್ರಾಂಶುಪಾಲರು ಮಾತನಾಡಿ, ಭಾರತೀಯ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾರ್ಗದಾತರಲ್ಲಿ ಶಿಕ್ಷಕರ ಪರಂಪರೆ ಅಮೂಲಾಗ್ರವಾದ ಪಾತ್ರ ನಿರ್ವಹಿಸಿದೆ. ಶಿಕ್ಷಕರಾಗಿ ಕೇವಲ ಶಾಲೆಯ ಪಾಠಕ್ಕೆ ಸೀಮಿತವಾಗದೆ, ಜನತೆಯಲ್ಲಿದ ಅಂಧಕಾರವನ್ನು ಹೊಡೆದೊಡಿಸಲು ಅನೇಕರು ಶ್ರಮಿಸಿದ್ದಾರೆ. ಅಂತಹ ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರಶಿಕ್ಷಣಾರ್ಥಿಗಳು ಉತ್ತಮ ಮಾರ್ಗದಲ್ಲಿ ನಡೆಯುವಂತಾಗಬೇಕು. ಬೋಧನೆಯ ಜೊತೆಗೆ ಮಕ್ಕಳಲ್ಲಿ ಸಾಮಾಜಿಕ ಕಳಕಳಿಯನ್ನು, ಸಾಮಾಜಿಕ ಜವಬ್ದಾರಿಯನ್ನು ಬೆಳೆಸಬೇಕು. ಕುಟುಂಬ, ಸಮಾಜದ ಸಾಮಾಜಿಕ ಹಾಗೂ ರಾಷ್ಟ್ರೀಯ ಮೌಲ್ಯಗಳ ಪಾಲನೆಯ ಅರಿವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಕರೆನೀಡಿದರು, ಮತ್ತೊರ್ವ ಅತಿಥಿಗಳಾದ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಶ್ರೀಮತಿ ವಿಶಾಲಎಸ್. ರವರು ಮಾತನಾಡಿ ಶಿಕ್ಷಕರ ದಿನದ ಶುಭಾಶಯ ಕೋರಿ ಪ್ರಶಿಕ್ಷಣಾರ್ಥಿಗಳಿಗೆ ಶುಭ ಹಾರೈಸಿದರು. ಬಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ಮಾತನಾಡಿ, ವಿದ್ಯಾರ್ಥಿ ಸಂಘದ ಕಾರ್ಯ ಚಟುವಟಿಕೆ ತಿಳಿಸಿ, ಸಮಾಜ ಕಟ್ಟುವಲ್ಲಿ ಶಿಕ್ಷಕ ಪಾತ್ರವನ್ನು ತಿಳಿಸಿದರು, ಶ್ರೀಯುತ ಪ್ರಶಾಂತ್ ಕುಮಾರ್, ವಿದ್ಯಾರ್ಥಿ ಸಂಘದ ಪದಧಾಕಾರಿಗಳನ್ನು ಪರಿಚಯಿಸಿದರು, ಉಪನ್ಯಾಸಕರಾದ ಶ್ರೀಮತಿ ನೇತ್ರಾವತಿ, ವಿವಿಧ ಸ್ಪರ್ಧೆಗಳಲ್ಲಿ ಜಯಶೀಲರಾದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ಕಾರ್ಯಕ್ರಮ ನಡೆಸಿಕೊಟ್ಟರು, ಭುವನೇಶ್ವರಿ  ಶಿಕ್ಷಕರ ದಿನಾಚರಣೆಯ ಶುಭಾಶಯ ತಿಳಿಸಿದರು,  ಉಪನ್ಯಾಸಕರಾದ ನಂದೀಶ್ ಕೆ,  ಹಾಗೂ ಬೋಧಕೇತರ ಸಿಬ್ಬಂಧಿವರ್ಗ, ಮತ್ತು ನರ್ಸಿಂಗ್, ಪ್ಯಾರಮೆಡಿಕಲ್ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಾರ್ಯಕ್ರಮವನ್ನು ದ್ವಿತೀಯ ಬಿ.ಇಡಿ.ಪ್ರಶಿಕ್ಷಣಾರ್ಥಿಯಾದ ಮಲಿಹಾ ತಮ್ಕಿನ್ ನಿರೂಪಿಸಿದರು, ಪೂಜಾ ಸ್ವಾಗತಿಸಿದರು, ಮಹಾಲಕ್ಷಿ ವಂದಿಸಿದರು.

ಪ್ರಥಮ ವರ್ಷದಪ್ರಶಿಕ್ಷಣಾರ್ಥಿಗಳು


ECO CLUB ಉದ್ಘಾಟನೆ





ಪತ್ರಿಕಾ ವರದಿಗಳು

ನಳಂದ ಪತ್ರಿಕೆ



ಪ್ರಜಾವಾಣಿ


ಜನಸಾಗರ ಪತ್ರಿಕೆ



Tuesday, 17 August 2021

75ನೇ ಸ್ವಾತಂತ್ರ್ಯ ದಿನಾಚರಣೆ- ಶ್ರೀ ಸದ್ಗುರು ಕಬೀರಾನಂದಸ್ವಾಮಿ ಬಿ.ಇಡಿ. ಕಾಲೇಜ್, ಚಿತ್ರದುರ್ಗ.

 


ಶ್ರೀ ಸದ್ಗುರು ಕಬೀರಾನಂದಸ್ವಾಮಿ ಬಿ.ಇಡಿ. ಕಾಲೇಜ್, ಚಿತ್ರದುರ್ಗ.

75ನೇ ಸ್ವಾತಂತ್ರ್ಯ ದಿನಾಚರಣೆ

 

ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದಪ್ರೊ. ರಂಗಸ್ವಾಮಿರವರಿಂದ ಸ್ವಾತಂತ್ರ್ಯೋತ್ಸವ ದಿನದ ಧ್ವಜಾರೋಹಣ

 


ಭಾರತಾಂಭೆಯು ಬ್ರಿಟೀಷರ ಗುಲಾಮಗಿರಿಯಿಂದ ಮುಕ್ರಿ ಹೊಂದಿಲು ತ್ಯಾಗಬಲಿದಾನ ಮಾಡಿದ ಸಾವಿರಾರು ದೇಶ ಯೋಧರನ್ನು ಸ್ಮರಿಸುತ್ತಾ, ತಾವು ಭಾಗವಹಿಸಿದ ಕ್ವಿಟ್ ಇಂಡಿಯಾ ಚಳುವಳಿಯ ಘಟನಾವಳಿಗಳನ್ನು ತಿಳಿಸಿದರು. ನಾವು ಇಂದು ಅನುಭವಿಸುತ್ತಿರುವ ಎಲ್ಲ ಹಕ್ಕು ಮತ್ತು ಸೌಲಭ್ಯಗಳ ಹಿಂದಿನ ಪರಿಶ್ರಮವನ್ನು ಪ್ರತಿ ಮಗುವಿಗೂ ತಿಳಿಯುವಂತೆ ಮಾಡಬೇಕು.  ಇದರಿಂದಾಗಿ ಪ್ರಜಾಪ್ರಭುತ್ವದ ರಕ್ಞಣೆ, ಶಾಂತಿ ಮತ್ತು ಸ್ವಾವಲಂಬನೆಯಿಂದ ಜೀವನ ಮಾರ್ಗವನ್ನು ರೂಢಿಸಲು ಸಾಧ್ಯವಾಗುತ್ತದೆ. ಸ್ವತಂತ್ರ ಹೋರಾಟದ ನೈಜ ಸನ್ನಿವೇಶಗಳನ್ನು ಹೇಳುವ ಮೂಲಕ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಬೆಳೆಸಿಕೊಳ್ಳಿ ಎಂದುಪ್ರೊ. ರಂಗಸ್ವಾಮಿರವರು ಶ್ರೀ ಸದ್ಗುರು ಕಬೀರಾನಂದಸ್ವಾಮಿ ಬಿ.ಇಡಿ. ಮತ್ತು ನರ್ಸಿಂಗ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 75ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಭರತ ಖಂಡದ ಸ್ವಾತಂತ್ರ್ಯ ದಿನವೇ ದೇಶದ ಜನತೆಗೆ ಅತ್ಯಂತ ಸುದಿನವಾಗಿದೆ. ದೇಶದ ಜನತೆಯೇ ದೇಶದ ಆಸ್ತಿ, ಅದರಲ್ಲಿಯೂ ಯುವ ಜನತೆ ದೇಶವನ್ನು ಮುನ್ನೆಡೆಸುವ ಶಕ್ತಿಯಾಗಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ಸ್ವತಂತ್ರ ಹೋರಾಟಗಾರರ ಜೀವನ ಚರಿತ್ರೆ ಓದುವುದನ್ನು ರೂಢಿಸಿಕೊಳ್ಳಬೇಕು. ಇತಿಹಾಸದ ಜ್ಞಾನದ ಮೂಲಕ ಉತ್ತಮ ವ್ಯಕ್ತಿ, ನಾಯಕರನ್ನು ನಿರ್ಮಾನ ಮಾಡಲು ಸಾಧ್ಯವಾಗುತ್ತದೆ. ಜನತೆಗೆ ಉತ್ತಮ ಜ್ಞಾನ, ಸಾಮಥ್ರ್ಯ, ವೈಜ್ಞಾನಿಕ, ವೈಚಾರಿಕ ಹಾಗೂ ಪ್ರಗತಿಶೀಲ ಚಿಂತನೆಗಳನ್ನು ಬೆಳೆಸಬೇಕು. ಉತ್ತಮ ಪ್ರಜೆಗಳ ನಿರ್ಮಾಣಕ್ಕಾಗಿ ಸಮಾಜಕ್ಕೆ ದಿನದ ಮಹತ್ವವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ತಿಳಿಸುವ ಪ್ರಯತ್ನವನ್ನು ನಾವು ಮಾಡಬೇಕು. ದೇಶಾಭಿಮಾನ ನಮ್ಮ ಸಮಾಜದ, ಸಂಸ್ಕøತಿಯನ್ನು ರೂಢಿಸುವವುದು ಶಿಕ್ಷಣದ ಪ್ರಾರಂಭದ ಅವಧಿಯಲ್ಲಿಯೇ ಪ್ರಾರಂಭವಾಗಬೇಕು ಎಂದು ಶಿಕ್ಷಣದ ಪಾತ್ರವನ್ನು ತಿಳಿಸಿದರು.  ಸಂದರ್ಭದಲ್ಲಿಪ್ರೊ. ರಂಗಸ್ವಾಮಿರವರು ರಚಿಸಿದ ಭಾರತಾಂಭೆ ಆದಿಶಕ್ತಿ- ರಾಷ್ಟ್ರಗೀತೆಗಳು ಕವನ ಸಂಕಲನ ವನ್ನು ಬಿಡುಗಡೆಗೊಳಿಸಲಾಯಿತು.



ಗಾಂಧೀಜಿಯವರ ಸರಳ ಜಿವನ ಮತ್ತು ತ್ಯಾಗದ ಬದುಕು ಎಂದೆಂದಿಗೂ ದೇಶದ ಜನತೆಗೆ ಆದರ್ಶವಾಗಿದ್ದಾರೆ. ಅವರು ಭಾರತ ದೇಶದ ಸ್ವತಂತ್ರ ಹೋರಾಟಗಾರರಲ್ಲಿ ತಮ್ಮ ಜೀವನಾದರ್ಶಗಳ ಮೂಲಕವೇ ಅಪಾರ ಹೋರಟಗಾರರು ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು. ಬ್ರಿಟೀಷರ ವಿರುದ್ಧ ಯಾವುದೇ ಶಸ್ತ್ರಾಸ್ತ್ರ ಬಳಸದೇ ನಿಶಸ್ತ್ರ ನೀತಿಯಿಂದ- ಅಹಿಂಸಾ ಮಾರ್ಗದಿಂದ ದೇಶ ಸ್ವತಂತ್ರಗೊಳ್ಳುವಲ್ಲಿ ಮಹತ್ವಪೂರ್ಣವಾದ ಪಾತ್ರನಿರ್ವಹಿಸಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಸ್ವತಂತ್ರ ಭಾರತಕ್ಕೆ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಸಂವಿಧಾನ ರಚನೆಗಾಗಿ ಶ್ರಮಿಸಿದ್ದಾರೆ. ಇಂತಹ ಸಾವಿರಾರು ಹೋರಾಟಗಾರರ ಸಾಧನೆ ಇಂದಿನ ಯುವ ಪೀಳಿಗೆ ಮಾದರಿಯಾಗಿ ಅನುಸರಿಸಬೇಕಾಗಿದೆ ಎಂದು ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ವಿದ್ಯಾಪೀಠ ಪೀಠಾಧ್ಯಕ್ಷರಾ "ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜಿಯವರು,"  “ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ  ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.  ದೇಶಾಭಿಮಾನವು ಮಾನವರಲ್ಲಿ ನಮ್ಮಲ್ಲಿ ಉತ್ತಮ ಭಾಂದವ್ಯ, ಸಹಬಾಳ್ವೆ ಸಹಕಾರ ಹಾಗೂ ಭ್ರಾತೃತ್ವದ ಭಾವನೆಯನ್ನು ಬೆಳೆಸಬೇಕು. ದೇಶಾಭಿಮಾನ ಎನ್ನುವುದು ಭೌತಿಕವಾಗಿ ಕಾಣವುದಲ್ಲ, ಅದನ್ನು ನಮ್ಮ ದಿನನಿತ್ಯದ ಬದುಕಿನಲ್ಲಿ ನಾವೇ ರೂಢಿಸಿಕೊಳ್ಳುವುದಾಗಿದೆ, ಸುಭದ್ರ ದೇಶ ನಿರ್ಮಾಣ ಉತ್ತಮ ಪ್ರಜೆಗಳ ನಿರ್ಮಾಣದಿಂದ ಸಾಧ್ಯವಾಗುತ್ತದೆ, ಹಾಗಾಗಿ ಎಲ್ಲರು ಉತ್ತಮರಾಗಿ ಬಾಳುವ ದಾರಿಯನ್ನು ಅನುಸರಿಸುವಂತೆ ಕರೆ ನೀಡಿದರು. ಸಂದರ್ಭದಲ್ಲಿಪ್ರೊ. ರಂಗಸ್ವಾಮಿಯವರಸೇವೆ ಮತ್ತು ಸಾಧನೆಯನ್ನು ಮೆಚ್ಚಿಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜಿಯವರು”  ಅಭಿನಂದಿಸಿ ಗೌರವಿಸಲಾಯಿತು.



ಡಿ.ಪಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ನಿರಂಜನಮೂರ್ತಿಯವರು ಮಾತನಾಡಿ ಭಾರತ ಸ್ವಾತಂತ್ರ್ಯ ಹೋರಾಟ ಮತ್ತು ಚಳುವಳಿಗಳ ಪ್ರಮುಖ ಘಟನೆಗಳನ್ನು ತಿಳಿಸಿ, ಬಹುಧರ್ಮಿಯ, ಬಹುಸಂಸ್ಕøತಿ ಹೊಂದಿರುವ  ಸಮಾಜದಲ್ಲಿ ನಾವೆಲ್ಲರೂ ಸ್ವತಂತ್ರರು, ನಮಗೆ ಸಿಕ್ಕಿರುವ ಅಮೂಲ್ಯವಾದ ಸ್ವಾತಂತ್ರ್ಯವನ್ನು ನಾವುಗಳು ನಮ್ಮ ಉತ್ತಮ ಜೀವನವನ್ನು ಕಟ್ಟಿಕೊಂಡರೆ ಸಾರ್ಥವಾಗುತ್ತದೆ. ಎಲ್ಲ ಬೇಧಭಾವಗಳನ್ನು ಮರೆತು ನಾವೇಲ್ಲರೂ ಭಾರತೀಯರೆಂಬ ಏಕತೆಯ ಭಾವನೆ ನಮ್ಮಲ್ಲಿ ಇಂದು ಮೂಡುವಂತಾಗಿದೆ. ಸ್ವಾವಲಂಬನೆ, ಶಿಸ್ತು, ಸರಳತೆಯ ಜೀವನವನ್ನು ರೂಢಿಸಿಕೊಳ್ಳಬೇಕು. ಮಹಾತ್ಮಗಾಂಧೀಜಿಯವರ ಸರಳತೆ, ಅಹಿಂಸಾ ತತ್ವದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ  ಬಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ರವರು ಮಾತನಾಡುತ್ತಾ ಸ್ವತಂತ್ರ ನಂತರ ದೇಶದ ಕಾನೂನು ತಮ್ಮೇಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ, ದೇಶದ ಐಕ್ಯತೆಗೆ ನಾವೇಲ್ಲರೂ ಶ್ರಮಿಸಬೇಕಿದೆ. ಸ್ವತಂತ್ರ ಹೋರಾಟ ಮತ್ತು ಹೋರಾಟಗಾರರ ಜೀವನಾದರ್ಶಗಳನ್ನು ಮನೆಮನೆಗೆ ತಲುಪಿಸುವಂತ ಪ್ರಯತ್ನವನ್ನು ಯುವಪೀಳಿಗೆ ಮಾಡಬೇಕಿದೆ. ಸ್ವತಂತ್ರ ಹೋರಾಟದ ಧೃವತಾರೆಗಳಾದ ಮಹಾತ್ಮಗಾಂಧೀ, ಭಗತ್ಸಿಂಗ್, ಡಾ. ಬಿ.ಆರ್. ಅಂಬೇಡ್ಕರ್, ಸುಭಾಷ್ ಚಂದ್ರಬೋಸ್ ದೇಶಾಭಿಮಾನದ ಹೋರಾಟವನ್ನು ಪ್ರಶಿಕ್ಷಣಾಥಿಗಳು ಭಾಷಣದ ಮೂಲಕ ನೆನಪಿಸಿದರು. ಕಾರ್ಯಕ್ರಮದಲ್ಲಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಶ್ರೀಮತಿ ವಿಶಾಲ ಎಸ್ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್. ಪ್ರಶಾಂತ್,  ಉಪಸ್ಥಿತರಿದ್ದರು ಹಾಗೂ ಬಿ.ಇಡಿ. ನರ್ಸಿಂಗ್ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂಧಿವರ್ಗ ಮತ್ತು  ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಬಿ.ಇಡಿ. ಪ್ರಶಿಕ್ಷಣಾರ್ಥಿಯಾದ ಮಾಲೀಹ ತಮ್ಕಿನ್ ನಿರೂಪಿಸಿದರು, ಜಗದೀಶ್ ಪ್ರಾರ್ಥಿಸಿದರು, ದಿವ್ಯ ಸ್ವಾಗತಿಸಿದರು, ಅನುದೀಪ್ ವಂದಿಸಿದರು.                                        


ಬಿ.ಇಡಿ. ಪದವಿ ಫಲಿತಾಂಶ ಪ್ರಕಟಣೆ 2024

  ಫಲಿತಾಂಶ ಪ್ರಕಟಣೆ 2024 ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಪದವಿ ಜನವರಿ 2024 ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗ...