Tuesday, 2 October 2018




Citizenship Training Camp for B.Ed students on 30-11-2018 to 02-12-2018



“¥ËgÀvÀé vÀgÀ¨ÉÃw ²©gÀ”



News Paper Reports 



ಪೌರತ್ವ ತರಬೇತಿ ಶಿಬಿರ
ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಗುಣಾತ್ಮಕ ಶಿಕ್ಷಣ ಅತೀ ಅಗತ್ಯವಾದುದು. ಶಿಕ್ಷಣದ ಉದ್ದೇಶ ಉತ್ತಮ ನಾಗರೀಕರ ನಿರ್ಮಾಣದೊಂದಿಗೆ ಉತ್ತಮ ಸಮಾಜ ಕಟ್ಟುವುದಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವ ಅವಧಿಯಲ್ಲಿಯೆ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವುದು ಶಿಕ್ಷಕರ ಕರ್ತವ್ಯವಾಗಿದೆ. ಹಾಗಾಗಿ ಶಿಕ್ಷಕರಿಗೆ, ಶಿಕ್ಷಕ ತರಬೇತಿ ಪಡೆಯುತ್ತಿರುವವರಿಗೆ ಆಂತರಿಕ ಸ್ವಚ್ಚತೆಯೊಂದಿಗೆ ಬಾಹ್ಯ ಪರಿಸರದ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವ ಶಿಕ್ಷಣ ಮತ್ತು ತರಬೇತಿ ಅಗತ್ಯವಾಗಿದೆ ಎಂದು ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜಿಯವರು ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಬಿ. ಇಡಿ. ಕಾಲೇಜನಲ್ಲಿ ಏರ್ಪಡಿಸಿದ್ದ ಪೌರತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರಾಗುವವರಿಗೆ ವಿಷಯಜ್ಞಾನದೊಂದಿಗೆ ಸಮಾಜದ, ಸುತ್ತಮುತ್ತಲ ಪರಿಸರದ ವಾಸ್ತವತೆಯ ಜ್ಞಾನವನ್ನು ನೀಡಬೇಕು. ಶಿಕ್ಷಕರು ಮಕ್ಕಳಿಗೆ ಜ್ಞಾನದೊಂದಿಗೆ ಜೀವನ ಕೌಶಲ್ಯವನ್ನು ಹಾಗೂ ಮೌಲ್ಯಗಳನ್ನು ಕಲಿಸಬೇಕಾಗಿರುವುದರಿಂದ ಸಮಾಜವನ್ನು ಅರ್ಥಮಾಡಿಕೊಳ್ಳುವ ಸಮಾಜದೊಂದಿಗೆ ಬೆರೆತು ಜೀವಿಸುವ ರೂಢಿಯನ್ನು ಬೆಳೆಸಬೇಕುಮಕ್ಕಳು ಶಿಕ್ಷಕರನ್ನು ಅನುಸರಿಸಿ ಕಲಿಯುವುದರಿಂದ ಶಿಕ್ಷಕರು ಮಕ್ಕಳಿಗೆ ಆದರ್ಶವಾದ ವ್ಯಕ್ತಿತ್ವವನ್ನು ರೂಡಿಸಿಕೊಳ್ಳಬೇಕು. ಶಿಕ್ಷಕರಾಗುವಂತವರಿಗೆ ಜೀವನ ಮೌಲ್ಯವನ್ನು ಬೆಳೆಸುವ ಇಂತಹಪೌರತ್ವ ತರಬೇತಿ ಶಿಬಿರಗಳು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯವಾಗಿದೆ. ಶಿಬಿರಾರ್ಥಿಗಳಿಗೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಕರೆನೀಡಿದರು.
ಪೌರತ್ವ ತರಬೇತಿ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾದ ಡಾ. ವಿ ಬಸವರಾಜು, ಪ್ರಾಧ್ಯಾಪಕರು ಮಹರಾಜ ಮದಕರಿ ನಾಯಕ ಪ್ರಥಮದರ್ಜೆ ಕಾಲೇಜು ಇವರು ಶಿಬಿರಾರ್ಥಿಗಳಿಗೆ ಯೋಗ ಮತ್ತು ಧ್ಯಾನದ ಮಹತ್ವವನ್ನು ತಿಳಿಸಿದರು. ಮನಸ್ಸಿನ ಪರಿಶುದ್ಧತೆಗೆ, ಉತ್ತಮ ವ್ಯಕ್ತಿತ್ವ ವೃದ್ಧಿಗೆ ಹಾಗೂ ಜೀವನದ ಸಾರ್ಥಕತೆಗೆ  ಯೋಗ ಮತ್ತು ಧ್ಯಾನವನ್ನು ರೂಢಿಸಿಕೊಳ್ಳುವಂತೆ ತಿಳಿಸಿದರು. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಉತ್ತಮ ಸೌರ್ಹಾರ್ಧ ಕಲಿಕೆಯ ಪರಿಸರವನ್ನು ಒದಗಿಸುವುದು. ಬಹುತ್ವ ಸಂಸ್ಕøತಿಯ ದೇಶವಾದ ಭಾರತಕ್ಕೆ ಎಲ್ಲ ಧರ್ಮವನ್ನು, ಸಂಸ್ಕøತಿಯನ್ನು, ಸಮುದಾಯವನ್ನು ಗೌರವಿಸುವ ಮನಸ್ಸುಗಳ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
 ‘ಎಸ್.ಎಸ್.ಕೆ.ಎಸ್ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಗಿರೀಶ್ ಟಿ ಅಧ್ಯಕ್ಷತೆವಹಿಸಿದ್ದರು, ಡಿ ಪಿ ಇಡಿ. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನಿರಂಜನಮೂರ್ತಿಯವರು ಹಾಗೂ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅನಿತರವರು ಅತಿಥಿಗಳಾಗಿ ಭಾಗವಹಿಸಿದ್ದರು. ಉಪನ್ಯಾಸಕರಾದ ಶ್ರೀಮತಿ ರೂಪ ಶಿಬಿರದ ಪ್ರಾಸ್ತವಿಕತೆಯನ್ನು ತಿಳಿಸಿದರು, ಶಿಬಿರಾಧಿಕಾರಿಯಾದ ಶ್ರೀ ವಿಜಯ್ ಕುಮಾರ್, ಉಪನ್ಯಾಸಕರಾದ ಶ್ರೀಮತಿ ನೇತ್ರಾವತಿ, ಶ್ರೀಮತಿ ಉಷಾ, ಶ್ರೀಪ್ರಶಾಂತ್, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು

                


Birthday Celebration of Mahatma Gandhi & Lal Bahadur Shastri 
on October 2, 2018.



 



 




ಕಾರ್ಯಕ್ರಮದ ವರದಿ:

ಭಾರತ ಸ್ವಾತಂತ್ರ್ಯದ ನೇತಾರರಾದ ಗಾಂಧೀಜಿಯವರು, ಅಹಿಂಸಾ ಮಾರ್ಗದ ಮೂಲಕವೆ ಶತೃಗಳನ್ನು ಹಿಮ್ಮೆಟ್ಟಿಸಿದ ಮಹಾನ್ ನಾಯಕ. ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಸಕಲ ಸೌಲತ್ತುಗಳನ್ನು ತ್ಯಜಿಸಿ ಸಾಮಾನ್ಯ ಮನುಷ್ಯರಂತೆ ಜನರೊಂದಿಗೆ ಬದುಕಿದ ಆದರ್ಶ ವ್ಯಕ್ತಿ. ಸಿರಿವಂತಿಕೆಯ ಸೂಟುಬೂಟಿನ ಉಡುಗೆ ತೊಡುಗೆಯನ್ನು ತ್ಯಜಿಸಿ ಅಲ್ಪ ಉಡುಪನ್ನು ಧರಿಸಿ, ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚಿಸಿದವರು. ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಿದ ಗಾಂಧೀಜಿ. ಭಾರತೀಯ ಪ್ರಜೆಗಳಿಗೆ ಸ್ವಾವಲಂಭಿ ಜೀವನ-ಸ್ವದೇಶಿ ಜೀವನ ಶೈಲಿಗೆ ಕರೆ ನೀಡಿದರು. ತಾನು ಸರಳ ಜೀವನವನ್ನು ಅಳವಡಿಸಿಕೊಂಡು ಸಮಾಜಕ್ಕೆ ಅತ್ಯಂತ ಸರಳ ಜೀವನದ ಮಾರ್ಗವನ್ನು ತೋರಿಸಿದ ಆದರ್ಶ ವ್ಯಕ್ತಿತ್ವದವರು. ಹಾಗಾಗಿ ಗಾಂಧೀಜಿಯವರನ್ನು ಕೇವಲ ವ್ಯಕ್ತಿಯಾಗಿ ಆರಾಧಿಸದೆ ವ್ಯಕ್ತಿತ್ವದ ಆರಾಧನೆಯಾಗಬೇಕು. ಇದರಿಂದಾಗಿ ಯುವ ಸಮುದಾಯ ರಾಷ್ಟ್ರೀಯ ನಾಯಕರ ನೈಜವಾದ ಮೌಲ್ಯಗಳನ್ನು ತಿಳಿಯಲು ಸಾಧ್ಯ ಎಂದು ‘ಎಸ್.ಎಸ್.ಕೆ.ಎಸ್.  ಶಿಕ್ಷಣ ಮಹಾವಿದ್ಯಾಲಯದ ‘ಪ್ರಾಂಶುಪಾಲರಾದ ‘ಡಾ. ಗಿರೀಶ್ ಟಿ’ ರವರು ಶ್ರೀ ಸದ್ಗುರು ಕಬೀರಾನಂದ ಬಿ.ಇಡಿ. ಕಾಲೇಜು ಹಾಗೂ ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ನರ್ಸಿಂಗ್ ಕಾಲೇಜಿನ  ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ “ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿ” ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ದೇಶವನ್ನಾಳಿದ ಪ್ರಧಾನಿಯಲ್ಲಿ ಪ್ರಮುಖರಾದ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ತನ್ನ ಆಡಳಿತ ಮೂಲಕವೆ ಶತೃ ರಾಷ್ಟ್ರಗಳಿಗೆ ಚಾಟಿ ಬೀಸಿದ ದಕ್ಷ ಆಡಳಿತಗಾರ. ಇವರಿಗೆ ದೇಶದ ಸೈನಿಕ ಮತ್ತು ರೈತರೆಂದರೆ ಅಪಾರವಾದ ಗೌರವ ಮತ್ತು ಪ್ರೀತಿ, ಆದುದರಿಂದಲೇ “ಜೈಜವಾನ್-ಜೈಕೀಸಾನ್” ಎಂಬ ಘೋಷಣೆ ಮೊಳಗಿಸಿದರು. ತನ್ನ ಆಡಳಿತದುದ್ದಕ್ಕೂ ಎಲ್ಲಿಯೂ ಯಾವುದೇ ಕಳಂಕವಿಲ್ಲದೆ ಪ್ರಾಮಾಣಿಕ, ದಕ್ಷ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿದ ಶಾಸ್ತ್ರೀಜಿಯವರ ಆದರ್ಶ ನಾಯಕತ್ವ ಪ್ರಸ್ತುತ ನಾಯಕರು ಅನುಸರಿಸುವಂತಾಗಬೇಕು. ಪೊಳ್ಳು ಬರವಸೆಗಳನ್ನು ನೀಡುವ ಪ್ರೌವೃತ್ತಿಯ ಬಿಟ್ಟು ಇಂತಹ ಮಹಾನ್ ನಾಯಕರ ವ್ಯಕ್ತಿತ್ವ ಗುಣವನ್ನು ಅಳವಡಿಸಿಕೊಳ್ಳಬೇಕು.

ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತವಾಗದೆ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಮಾರ್ಗಗಳನ್ನು ತೋರಿಸಿಕೊಟ್ಟಿದ್ದಾರೆ. ಸ್ತ್ರೀ ಶಿಕ್ಷಣ, ಮೂಲ ಶಿಕ್ಷಣ, ಮಾತೃಭಾಷಾ ಶಿಕ್ಷಣಕ್ಕೆ ಒತ್ತು, ಅಸ್ಪೃಶ್ಯತೆಯ ನಿವಾರಣೆ, ಸ್ವರಾಜ್ಯ ಚಿಂತನೆ ಹೀಗೆ ಹಲವು ಪರಿಹಾರಗಳನ್ನು ನಮ್ಮ ಮುಂದಿಟ್ಟಿದ್ದಾರೆ. ವಿದೇಶಗಳಿಗೆ ಅವಲಂಭಿಯಾಗದೆ ಸ್ವದೇಶಿ ಉತ್ಪಾದನೆಯನ್ನು ಗಾಂಧೀಜಿಯವರು ಒತ್ತು ನೀಡಿದ್ದರು. ಗಾಂಧೀಜಿಯವರೊಂದಿಗೆ ಸ್ವಾತಂತ್ರ್ಯ ಹೋರಾಟಗಾರರು ಕಟ್ಟಬಯಸಿದ ದೇಶಕ್ಕೆ ಭಾರತ ಸಂವಿಧಾನ ಬಹುದೊಡ್ಡ  ಅಡಿಪಾಯವಾಗಿದೆ. ಆಳುವ ಸರ್ಕಾರಗಳು ಸಂವಿಧಾನಾತ್ಮಕವಾಗಿ ಪ್ರತಿ ಜನತೆಗೆ ದೊರಕಬೇಕಾದ ಸಮಾನ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟರೆ ದೇಶಕ್ಕಾಗಿ ಶ್ರಮಿಸಿದ ನಾಯಕರಿಗೆ ನೀಡುವ ಗೌರವವಾಗುತ್ತದೆ. ಪ್ರಸ್ತುತ ಗಾಂಧೀಜಿಯವರ ವ್ಯಕ್ತಿ ಆರಾಧನೆಗೆ ಮಾತ್ರ ಒತ್ತು ಕೊಡಲಾಗುತ್ತಿದೆ. ನಿಜವಾದ ಗಾಂಧೀ ನಮ್ಮಿಂದ ಮಾಯವಾಗುತ್ತಿದ್ದಾರೆ, ಹಾಗಾಗಿ ಗಾಂಧೀಜಿಯವರ ನೈಜ ಚಿಂತನೆಗಳನ್ನು ಇಂದಿನ ಯುವ ಪೀಳಿಗೆಯಲ್ಲಿ ಬೆಳೆಸುವಂತಹ ಅಗತ್ಯತೆ ಎದ್ದು ಕಾಣುತ್ತಿದೆ ಎಂದು ಡಾ. ಗಿರೀಶ್ ರವರು ಅಭಿಪ್ರಾಯಪಟ್ಟರು.  

ಉಪನ್ಯಾಕಿಯಾದ ಶ್ರೀಮತಿ ರೂಪರವರು ಮಾತನಾಡಿ ಗಾಂಧೀಜಿಯವರ ಆದರ್ಶ ತತ್ವಗಳಾದ ಸತ್ಯ, ಅಹಿಂಸೆ, ಶಾಂತಿ ಪಾಲನೆಯಲ್ಲಿ ಪ್ರಸ್ತುತ ನಮ್ಮಗಳ ಪಾತ್ರವನ್ನು ನಾವು ನಿರ್ವಹಿಸಬೇಕು, ಅದು ದೇಶದ ಪ್ರಜೆಗಳಾದ ನಮ್ಮೇಲ್ಲರ ಕರ್ತವ್ಯವೆಂದು ಭಾವಿಸಿಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ದೃಢನಿರ್ಧಾರದಿಂದ ಸಾಧನೆ ದಾರಿಯನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು. ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅನಿತರವರು ಮಾತನಾಡಿ ಸರಳತೆಯ ಜೀವನ ಶೈಲಿ ನಮ್ಮನ್ನ ಎತ್ತರಕ್ಕೆ ಬೆಳೆಸುವ ದಾರಿಯಾಗಿದೆ, ಹಾಗಾಗಿ ವಿದ್ಯಾರ್ಥಿಗಳು ಸರಳತೆಯನ್ನು ರೂಢಿಸಿಕೊಳ್ಳಲು ಕರೆನೀಡಿದರು. ಕಾರ್ಯಕ್ರಮವನ್ನು ಬಿ.ಇಡಿ. ಪ್ರಶಿಕ್ಷಣಾರ್ಥಿಯಾದ ಅಶ್ವಿನಿ ನಿರೂಪಿಸಿದರು, ಗುರುಸ್ವಾಮಿ ಪ್ರಾರ್ಥಿಸಿದರು, ನಾಗೇಂದ್ರ ಸ್ವಾಗತಿಸಿದರು, ಕಾವ್ಯ ವಂದಿಸಿದರು. ನರ್ಸಿಂಗ್ ಮತ್ತು ಬಿ.ಇಡಿ.ಕಾಲೇಜಿನ ವಿದ್ಯಾರ್ಥಿಗಳು,ಉಪನ್ಯಾಸಕರು ಹಾಗೂ ಸಿಬ್ಬಂದ್ಧಿ ವರ್ಗದವರು ಉಪಸ್ಥಿತರಿದ್ದರು. 



No comments:

Post a Comment

ಬಿ.ಇಡಿ. ಪದವಿ ಫಲಿತಾಂಶ ಪ್ರಕಟಣೆ 2024

  ಫಲಿತಾಂಶ ಪ್ರಕಟಣೆ 2024 ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಪದವಿ ಜನವರಿ 2024 ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗ...