ಪ್ರತಿಭಾ ಪ್ರದರ್ಶನ
“ಮಾರ್ಗ- ನೇಚರ್ ಸರ್ವೀಸ್ ಸಂಸ್ಥೆ ಮತ್ತು ‘ಎಸ್. ಎಸ್. ಕೆ. ಎಸ್. ಬಿ.ಇಡಿ. ಶಿಕ್ಷಣ ಕಾಲೇಜಿನ ಸಂಯುಕ್ತಾಶ್ರಯದಲ್ಲಿ
“ಪ್ಲಾಸ್ಟಿಕ್ ಮುಕ್ತ ಆಡುಮಲ್ಲೇಶ್ವರ”-
ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜೀಯವರಿಂದ ಚಾಲನೆ
ಮನುಷ್ಯನಿಗೆ ಸೌಂದರ್ಯ ನೀಡುವುದು ಪ್ರಕೃತಿ, ಆ ಪ್ರಕೃತಿಯ ಸೌಂದರ್ಯವನ್ನು ಸಂರಕ್ಷಿಸುವುದು ಪ್ರಕೃತಿಯಲ್ಲಿ ಬದುಕುತ್ತಿರುವ ಹಾಗೂ ಅದರ ಉಪಯೋಗ ಪಡೆಯುತ್ತಿರುವ ನಾವು ಪ್ರಕೃತಿಯ ಸೌಂದರ್ಯ ಕಾಪಾಡಬೇಕಿದೆ. ಮನುಷ್ಯ ಹೇಗೆ ತಾನು ಆರೋಗ್ಯವಾಗಿರಲು ದೇಹ ಸ್ವಚ್ಛಗೊಳಿಸಿಕೊಳ್ಳುವನೊ ಅದೇ ರೀತಿ ಇಡೀ ಮನುಕುಲಕ್ಕೆ ಜೀವನಾಡಿಯಾಗಿರುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಶ್ರೀ ಸದ್ಗುರು ಕಬೀರಾನಂದ ಆಶ್ರಮದ ಸ್ವಾಮಿಜೀಯವರಾದ ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜೀಯವರು “ಮಾರ್ಗ- ನೇಚರ್ ಸರ್ವೀಸ್ ಸಂಸ್ಥೆ” ಆಡುಮಲ್ಲೆಶ್ವರದಲ್ಲಿ ಏರ್ಪಡಿಸಿದ್ದ “ಪ್ಲಾಸ್ಟಿಕ್ ಮುಕ್ತ ಆಡುಮಲ್ಲೇಶ್ವರ” ಸ್ವಚ್ಛಾತಾ ಕಾರ್ಯಕ್ಕೆ ಬೋಧಿ ವೃಕ್ಷದ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಗರದ ಸುಂದರ ಸ್ಥಳವಾದ ಅಡವಿ ಮಲ್ಲೇಶ್ವರ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಂಡರೆ ನಮ್ಮೇಲ್ಲರಿಗೂ ಒಳ್ಳೆಯ ಗಾಳಿಯನ್ನು ನೀಡುತ್ತದೆ. ವಿರಾಮ ವೇಳೆಯಲ್ಲಿ ನಿಸರ್ಗದ ಸವಿಯನ್ನು ಸವಿಯಲು ಉತ್ತಮ ಸ್ಥಳವಾಗಿದೆ. ಇದನ್ನು ಉಳಿಸಿ ಸಂರಕ್ಷಿಸಿಕೊಳ್ಳುವಂತಹದ್ದು ಎಲ್ಲರ ಕರ್ತವ್ಯವೆಂದು ಭಾವಿಸಿಬೇಕು. ಮನುಷ್ಯನಿಗೆ ಅಂಟಿಕೊಳ್ಳುವ ರೋಗಗಳಿಗೆ ಯೀಗ ವ್ಯಾಯಾಮ ಹಾಗೂ ವಾಯವಿಹಾರ ದಿಂದಲೆ ಪರಿಹರಿಸಿಕೊಳ್ಳ ಬಹುದೆಂದು ತಿಳಿಸಿ, ಆಡು ಮಲ್ಲೇಶ್ವರದಲ್ಲಿ ಅವರ ವಾಯುವಿಹಾರದ ಅನುಭವಗಳನ್ನು ಹಂಚಿಕೊಂಡರು. ಈ ಕಾರ್ಯಕ್ರಮ ಏರ್ಪಡಿಸಿದ್ದ ಸಂಸ್ಥೆಗೆ, ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳು, ಸ್ವಯಂಸೇವಕರ ಈ ಕಾರ್ಯಕ್ಕೆ ಶುಭಕೋರಿದರು.
“ಮಾರ್ಗ- ನೇಚರ್ ಸರ್ವೀಸ್ ಸಂಸ್ಥೆ”ಯ ಸಂಸ್ಥಾಪಕರಾದ ಪ್ರಶಾಂತ್ ಕುಮಾರ್ ಮತ್ತು ಉದಯ್ ರವರು ಸಂಸ್ಥೆಯ ಉದ್ದೇಶಗಳನ್ನು ತಿಳಿಸಿದರು. ಆಡು ಮಲ್ಲೇಶ್ವರವನ್ನು ಎಲ್ಲರ ಸಹಕಾರದೊಂದಿಗೆ ಹಂತಹಂತವಾಗಿ “ ಪ್ಲಾಸ್ಟಿಕ್‍ಮುಕ್ತ ಆಡು ಮಲ್ಲೇಶ್ವರ “ ಮಾಡಲಾಗುವುದು ಎಂದು ಪ್ರಾಸ್ತಾವಿಕವಾಗಿ ಮಾತನಾಡಿ, ಅಥಿತಿಗಳನ್ನು ಸ್ವಾಗತಿದರು.
ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ‘ಎಸ್. ಎಸ್. ಕೆ. ಎಸ್. ಬಿ.ಇಡಿ. ಶಿಕ್ಷಣ ಕಾಲೇಜಿನ ಪ್ರಾಂಶುಪಾಲರಾದ ‘ಡಾ. ಗಿರೀಶ್ ಟಿ’ ರವರು ಮಾತನಾಡಿ, ನಾವು ದಿನನಿತ್ಯದ ಜೀವನದಲ್ಲಿ ಪ್ಲಾಸ್ಟಿಕ್‍ನ್ನು ಬಳಸುತ್ತಿದ್ದೇವೆ, ಅದು ಸರಿಯಾಗಿ ವಿಲೇವಾರಿಯಾಗದೆ ಭೂಮಿಯನ್ನು ಸೇರಿ ಪರಿಸರ ಕಲುಶಿತವಾಗುತ್ತಿದೆ ಹಾಗಾಗಿ ಪರಿಸರವನ್ನು ಸಂರಕ್ಷಣೆ ಮಾಡುವುದು ನಮ್ಮಗಳ ಜವಾಬ್ದಾರಿಯಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವ ಕಾರ್ಯಗಳಲ್ಲಿ ನಾವು ತೊಡಗಿಕೊಳ್ಳಬೇಕು ಹಾಗೂ ನಮ್ಮ ಸುತ್ತಮುತ್ತಲ ಸಮುದಾಯಕ್ಕೂ ಸಹ ಈ ಅರಿವನ್ನು ಮೂಡಿಸಬೇಕು ಎಂದು ತಿಳಿಸಿದರು. ವಲಯ ಆರಣ್ಯಾಧಿಕಾರಿಗಳಾದ ಶ್ರೀ ವಸಂತ್ ಕಮಾರ್ ರವರು ಮಾತನಾಡಿ “ಮಾರ್ಗ-ನೇಚರ್ ಸರ್ವೀಸ್ ಸಂಸ್ಥೆ” ಕೈಗೊಂಡಿರುವ “ಪ್ಲಾಸ್ಟಿಕ್ ಮುಕ್ತ ಆಡುಮಲ್ಲೇಶ್ವರ” ಸ್ವಚ್ಛಾತಾ ಕಾರ್ಯಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಿ ಸಂಸ್ಥೆಯು ಕೈಗೊಳ್ಳುವ ಈ ರೀತಿಯ ಎಲ್ಲಾ ಕಾರ್ಯಕ್ರಗಳಿಗೆ ಸಹಕಾರವನ್ನು ನೀಡುವ ಬರವಸೆಯನ್ನು ನೀಡಿ ಭಾಗವಹಿಸಿದ ಸಂಸ್ಥೆಯ ಸ್ವಯಂಸೇವಕರಿಗೆ ಧನ್ಯವಾದಗಳನ್ನು ತಿಳಿಸಿದರು.
ಮತ್ತೊಬ್ಬ ಮುಖ್ಯ ಅಥಿತಿಗಳಾದ ಬಿ.ಟಿ.ಆರ್. ಎಂಟರ್ ಪ್ರೈಸಸ್‍ನ ಮಾಲೀಕರಾದ ಬಸವರಾಜ್ ಯಾದವ್ ಮಾತನಾಡಿ, ದಿನನಿತ್ಯ ಬಳಸುವ ಪ್ಲಾಸ್ಟಿಕ್ ಭೂಮಿಯನ್ನು ಸೇರಿ ಭೂಮಿ ಫಲವತ್ತತ್ತೆ ಕಳೆದುಕೊಳ್ಳುತ್ತಿದೆ. ಹಾಗಾಗಿ ಪ್ಲಾಸ್ಟಿಕ್ ಬಳಸುವುದನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ‘ಎಸ್. ಎಸ್. ಕೆ. ಎಸ್. ಬಿ.ಇಡಿ. ಶಿಕ್ಷಣ ಕಾಲೇಜಿನ ಪ್ರಶಿಕ್ಷಣಾರ್ಥಿಗಳು, ಇತರೆ ಕಾಲೀಜಿನ ವಿದ್ಯಾರ್ಥಿಗಳು, ಹಾಗೂ ಬುದ್ಧ ನಗದರ ಯುವಕರು ಅನಿಲ್, ಹರೀಶ್, ಪ್ರಕಾಶ್, ಅಭಿ, ಶಿವು ಮತ್ತಿತರರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
No comments:
Post a Comment