"ಶಿಕ್ಷಕರ ದಿನಾಚರಣೆ, ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭ"
ದೇಶದ ಭವಿಷ್ಯವಾದ ಮಕ್ಕಳ ಭವಿಷ್ಯವನ್ನು ರೂಪಿಸುವವನೆ ನಿಜವಾದ ಶಿಕ್ಷಕ, ಹಾಗಾಗಿ ಶಿಕ್ಷಕ ದೇಶದ ನಿರ್ಮಾತೃ. ದೇಶಕ್ಕೆ ಉತ್ತಮ ನಾಗರೀಕರ ನಿರ್ಮಾಣದಲ್ಲಿ ತಾಯಿ ಮತ್ತು ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾದುದು. ಭಾರತ ದೇಶದ ಶಿಕ್ಷಕ ವೃತ್ತಿಯನ್ನು ಹೆಚ್ಚು ಪರಿಣಾಮಕಾರಿಗೊಳಿಸಲು ಶ್ರಮಿಸಿದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರವರು. ಇವರ ಆದರ್ಶದಂತೆ ಇಂದಿನ ಕಲಾಘಟ್ಟದ ಶಿಕ್ಷಕರು ಮಕ್ಕಳಲ್ಲಿ ಸಚ್ಚಾರಿತ್ರ, ಸಜ್ಜನಿಕೆಯ ಹಾಗೂ ಸುಜ್ಞಾನಗಳ ಜೀವನ ಮೌಲ್ಯಗಳನ್ನು ತುಂಬಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವುದು ಶಿಕ್ಷಕರ ಜವಬ್ದಾರಿಯಾಗಿದೆ ಎಂದು ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮಿಜಿಯವರು, ಪೀಠಾಧ್ಯಕ್ಷರು ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ವಿದ್ಯಾಪೀಠ, ಇವರು ಎಸ್.ಎಸ್.ಕೆ.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ " ಶಿಕ್ಷಕರ ದಿನಾಚರಣೆ, ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭದ" ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು. ದೇಶದ ಶಿಕ್ಷಣದ ಗುಣಮಟ್ಟ ಶಿಕ್ಷಕರನ್ನು ಅವಲಬಿಸಿದೆ, ಇಡೀ ಶಿಕ್ಷಣ ವ್ಯವಸ್ಥೆಯ ರೂವಾರಿಯೆ ಶಿಕ್ಷಕ. ಮಕ್ಕಳಲ್ಲಿರುವ ಸುಪ್ತ ಪ್ರಜ್ಞೆಯನ್ನು ಹೊರಹೊಮ್ಮುವಂತೆ ಮಾಡಿ, ಸಮಾಜಮುಖಿ ಚಿಂತನೆಯತ್ತ ನಡೆಸುವವರೇ ಶಿಕ್ಷಕರು. ಇಡೀ ಮಾನವ ಸಂಕುಲವನ್ನು ಬೆಳಕಿನಡೆಗೆ ಕೊಂಡ್ಯೊಯುವ ವೃತ್ತಿಯಲ್ಲಿ ನಿರತರಾದ ಶಿಕ್ಷಕರಿಗೊಂದು ದಿನಾಚಾರಣೆಯ ಮೂಲಕ ಗೌರವ, ಪ್ರೇರಣೆ ಹಾಗೂ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷಕರಾಗಿ ತಮ್ಮ ಸೇವೆ, ಕಠಿಣ ಪರಿಶ್ರಮ, ಕ್ರಿಯಾಶೀಲತೆಯಿಂದ ರಾಷ್ಟ್ರದ ಅತ್ಯುನ್ನತ ಸ್ಥಾನವಾದ ರಾಷ್ಟ್ರಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮ ದಿನದಂದು ಶಿಕ್ಷಕ ವೃತ್ತಿಯಲ್ಲಿರುವವರಿಗೆಲ್ಲರಿಗೂ ಗೌರವದ ಆಚರಣೆಯನ್ನು ಪ್ರತಿ ವರ್ಷ ಆಚರಿಸುತ್ತಿದ್ದೇವೆ. ಇಂತಹ ಸಾಧಕ ಶಿಕ್ಷಕರ ಆದರ್ಶಗಳನ್ನು ಪ್ರಶಿಕ್ಷಣಾರ್ಥಿಗಳು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ವಿದ್ಯಾರ್ಥಿ ಸಂಘ
ಕಾರ್ಯಕ್ರಮದ ಅತಿಥಿಗಳಾದ ಶ್ರೀಯುತ ನಿರಂಜನ ಮೂರ್ತಿಸಿ.ಎಲ್.ಡಿ.ಪಿ.ಇಡಿ ಕಾಲೇಜು ಪ್ರಾಂಶುಪಾಲರು ಮಾತನಾಡಿ, ಭಾರತೀಯ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾರ್ಗದಾತರಲ್ಲಿ ಶಿಕ್ಷಕರ ಪರಂಪರೆ ಅಮೂಲಾಗ್ರವಾದ ಪಾತ್ರ ನಿರ್ವಹಿಸಿದೆ. ಶಿಕ್ಷಕರಾಗಿ ಕೇವಲ ಶಾಲೆಯ ಪಾಠಕ್ಕೆ ಸೀಮಿತವಾಗದೆ, ಜನತೆಯಲ್ಲಿದ ಅಂಧಕಾರವನ್ನು ಹೊಡೆದೊಡಿಸಲು ಅನೇಕರು ಶ್ರಮಿಸಿದ್ದಾರೆ. ಅಂತಹ ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರಶಿಕ್ಷಣಾರ್ಥಿಗಳು ಉತ್ತಮ ಮಾರ್ಗದಲ್ಲಿ ನಡೆಯುವಂತಾಗಬೇಕು. ಬೋಧನೆಯ ಜೊತೆಗೆ ಮಕ್ಕಳಲ್ಲಿ ಸಾಮಾಜಿಕ ಕಳಕಳಿಯನ್ನು, ಸಾಮಾಜಿಕ ಜವಬ್ದಾರಿಯನ್ನು ಬೆಳೆಸಬೇಕು. ಕುಟುಂಬ, ಸಮಾಜದ ಸಾಮಾಜಿಕ ಹಾಗೂ ರಾಷ್ಟ್ರೀಯ ಮೌಲ್ಯಗಳ ಪಾಲನೆಯ ಅರಿವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಕರೆನೀಡಿದರು, ಮತ್ತೊರ್ವ ಅತಿಥಿಗಳಾದ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಶ್ರೀಮತಿ ವಿಶಾಲಎಸ್. ರವರು ಮಾತನಾಡಿ ಶಿಕ್ಷಕರ ದಿನದ ಶುಭಾಶಯ ಕೋರಿ ಪ್ರಶಿಕ್ಷಣಾರ್ಥಿಗಳಿಗೆ ಶುಭ ಹಾರೈಸಿದರು. ಬಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ಮಾತನಾಡಿ, ವಿದ್ಯಾರ್ಥಿ ಸಂಘದ ಕಾರ್ಯ ಚಟುವಟಿಕೆ ತಿಳಿಸಿ, ಸಮಾಜ ಕಟ್ಟುವಲ್ಲಿ ಶಿಕ್ಷಕ ಪಾತ್ರವನ್ನು ತಿಳಿಸಿದರು, ಶ್ರೀಯುತ ಪ್ರಶಾಂತ್ ಕುಮಾರ್, ವಿದ್ಯಾರ್ಥಿ ಸಂಘದ ಪದಧಾಕಾರಿಗಳನ್ನು ಪರಿಚಯಿಸಿದರು, ಉಪನ್ಯಾಸಕರಾದ ಶ್ರೀಮತಿ ನೇತ್ರಾವತಿ, ವಿವಿಧ ಸ್ಪರ್ಧೆಗಳಲ್ಲಿ ಜಯಶೀಲರಾದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ಕಾರ್ಯಕ್ರಮ ನಡೆಸಿಕೊಟ್ಟರು, ಭುವನೇಶ್ವರಿ ಶಿಕ್ಷಕರ ದಿನಾಚರಣೆಯ ಶುಭಾಶಯ ತಿಳಿಸಿದರು, ಉಪನ್ಯಾಸಕರಾದ ನಂದೀಶ್ ಕೆ, ಹಾಗೂ ಬೋಧಕೇತರ ಸಿಬ್ಬಂಧಿವರ್ಗ, ಮತ್ತು ನರ್ಸಿಂಗ್, ಪ್ಯಾರಮೆಡಿಕಲ್ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಾರ್ಯಕ್ರಮವನ್ನು ದ್ವಿತೀಯ ಬಿ.ಇಡಿ.ಪ್ರಶಿಕ್ಷಣಾರ್ಥಿಯಾದ ಮಲಿಹಾ ತಮ್ಕಿನ್ ನಿರೂಪಿಸಿದರು, ಪೂಜಾ ಸ್ವಾಗತಿಸಿದರು, ಮಹಾಲಕ್ಷಿ ವಂದಿಸಿದರು.
ಪ್ರಥಮ ವರ್ಷದಪ್ರಶಿಕ್ಷಣಾರ್ಥಿಗಳು
ECO CLUB ಉದ್ಘಾಟನೆ
ಪತ್ರಿಕಾ ವರದಿಗಳು
|
ನಳಂದ ಪತ್ರಿಕೆ |
|
ಪ್ರಜಾವಾಣಿ |
|
ಜನಸಾಗರ ಪತ್ರಿಕೆ |