Thursday, 25 January 2024

ಬಿ.ಇಡಿ. ಪದವಿ ಫಲಿತಾಂಶ ಪ್ರಕಟಣೆ 2024

 ಫಲಿತಾಂಶ ಪ್ರಕಟಣೆ 2024

ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಪದವಿ ಜನವರಿ 2024 ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ-ಬಿ.ಇಡಿ. ಪದವಿಯ 4ನೇ ಸೆಮಿಸ್ಟರ್‌ನಲ್ಲಿ 100.%ರಷ್ಟು ಫಲಿತಾಂಶ ಪಡೆದಿದೆ. 32 ಪ್ರಶಿಕ್ಷಣಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇಂದುಶ್ರೀ ಜಿ. ಆರ್. 551, (92%) ಅಂಕಗಳಿಸಿ ಪ್ರಥಮ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ, ಪ್ರೇಮ ಆರ್ 536 (89.5%,) ಅಂಕಗಳಿಸಿ ದ್ವಿತೀಯ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ, ಹಾಗೂ ಪ್ರಶಾಂತ್ ಈ, 529 (88.3%) ಪಡೆದಿದ್ದಾರೆ ಅಂಕಗಳಿಸಿ ತೃತೀಯ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ.

          ಬಿ.ಇಡಿ. 2ನೇ ಸೆಮಿಸ್ಟರ್‌ನಲ್ಲಿ 35 ಪ್ರಶಿಕ್ಷಣಾರ್ಥಿಗಳು ಅತ್ಯುನ್ನತ ಶ್ರೇಣಿ, 06 ಪ್ರಶಿಕ್ಷಣಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಚಿರಂಜೀವಿ 516 (86%) ಪಡೆದು ಪ್ರಥಮ ಅತ್ಯುನ್ನತ ಶ್ರೇಣಿ, ಶಬರಿ ಕೆ. ಯು. 499 (83.2%), ಅಂಕಗಳನ್ನು ದ್ವಿತೀಯ ಅತ್ಯುನ್ನತ ಶ್ರೇಣಿ ಹಾಗೂ ಅರ್ಪೀತ ಜಿ 492 (82%) ಅಂಕಗಳೊಂದಿಗೆ ತೃತೀಯ ಅತ್ಯುನ್ನತ ಶ್ರೇಣಿಯನ್ನು ಪಡೆದಿದ್ದಾರೆ. ಉತ್ತಮ ಫಲಿತಾಂಶ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಸದ್ಗುರು ಶಿವಲಿಂಗಾನಂದಸ್ವಾಮಿಜೀಯವರು, ಪ್ರಾಂಶಪಾಲರಾದ ಡಾ. ಟಿ. ಗಿರೀಶ್ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಎಲ್ಲ ಉಪನ್ಯಾಸಕರ ವರ್ಗದವರು ಅಭಿನಂದಿಸಿದರು 





ಬಿ.ಇಡಿ. ಪದವಿ ಫಲಿತಾಂಶ ಪ್ರಕಟಣೆ 2024

  ಫಲಿತಾಂಶ ಪ್ರಕಟಣೆ 2024 ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಪದವಿ ಜನವರಿ 2024 ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗ...