Saturday, 24 September 2022

 

ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಚಿತ್ರದುರ್ಗ.

 

        ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಕೋರ್ಸ್ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ. ತೃತೀಯ (3ನೇ ಸೆಮಿಸ್ಟರ್) ಸೆಮಿಸ್ಟರ್ನಲ್ಲಿ 98% ರಷ್ಟು ಫಲಿತಾಂಶ ಪಡೆದಿದೆ. 35 ವಿದ್ಯಾರ್ಥಿಗಳು ಅತ್ಯನ್ನತ ಶ್ರೇಣಿ, 2 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ತೃತೀಯ ಸೆಮಿಸ್ಟರ್ ಶುಭ ಕೆ.ಜೆ. 85% (510) ಅಂಕಗಳನ್ನು ಗಳಿಸಿ ಪ್ರಥಮ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ, ಅನಿಲ್ ಬೋರಯ್ಯ ಎನ್. ಬಿ. 84.33% (506)  ಅಂಕಗಳನ್ನು ಗಳಿಸಿ ದ್ವಿತೀಯ  ಅತ್ಯುನ್ನತ ಶ್ರೇಣಿ ಹಾಗೂ  ಪ್ರದೀಪ್ ಜಿ. 83.67% (502) ತೃತೀಯ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ. ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಸದ್ಗುರು ಶಿವಲಿಂಗಾನAದಸ್ವಾಮಿಜೀಯವರು, ಪ್ರಾಂಶಪಾಲರಾದ ಡಾ. ಟಿ ಗಿರೀಶ್ ಹಾಗೂ ಎಲ್ಲ ಉಪನ್ಯಾಸಕರ ವರ್ಗದವರು ಅಭಿನಂದಿಸಿದರು.




Wednesday, 6 April 2022

ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ (ಬಿ.ಇಡಿ) ಮಹಾವಿದ್ಯಾಲಯ ಚಿತ್ರದುರ್ಗ-2022

 


ಬಿ.ಇಡಿ. 4ನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ-2022

 ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಕೋರ್ಸ್   ಅಂತಿಮ (೪ನೇ) ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ (ಬಿ.ಇಡಿ) ಮಹಾವಿದ್ಯಾಲಯವು ಬಿ.ಇಡಿ. ಅಂತಿಮ (ನಾಲ್ಕನೆ) ಸೆಮಿಸ್ಟರ್ನಲ್ಲಿ  100% ರಷ್ಟು ಫಲಿತಾಂಶ ಪಡೆದಿದೆ, ನಾಲ್ಕನೇ ಸೆಮಿಸ್ಟರ್ ಅರ್ಫೀನ್ ತಾಜ್ ಪ್ರಥಮ ಅತ್ಯುನ್ನತ ಶ್ರೇಣಿ 89.16 % (535) ಪಡೆದಿದ್ದಾರೆ



ಜಗದೀಶ್ ಕೆ 88.5% (531) ದ್ವಿತೀಯ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ



ಹಾಗೂ ತೃತೀಯ ಅತ್ಯುನ್ನತ ಶ್ರೇಣಿ ಯಶವಂತ್ ಕುಮಾರ್ ಡಿ, 87.75% (526) ಪಡೆದಿದ್ದಾರೆ


 ಪೂಜಾ ಎಮ್ ಯಾದವ್ 87.5 % (525) ತೃತೀಯ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ


 ಒಟ್ಟು ಬಿ.ಇಡಿ. ಕೋರ್ಸ್  39 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳು ಅತ್ಯನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಉತ್ತಮ ಫಲಿತಾಂಶ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಸದ್ಗುರು ಶಿವಲಿಂಗಾನAದಸ್ವಾಮಿಜೀಯವರು, ಪ್ರಾಂಶಪಾಲರಾದ ಡಾ. ಟಿ ಗಿರೀಶ್ ಹಾಗೂ ಎಲ್ಲ ಉಪನ್ಯಾಸಕರ ವರ್ಗದವರು ಅಭಿನಂದಿಸಿದರು.

ಬಿ.ಇಡಿ. ಪದವಿ ಫಲಿತಾಂಶ ಪ್ರಕಟಣೆ 2024

  ಫಲಿತಾಂಶ ಪ್ರಕಟಣೆ 2024 ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಪದವಿ ಜನವರಿ 2024 ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗ...