Thursday, 11 November 2021

ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ - ರಾಷ್ಟ್ರೀಯ ಶಿಕ್ಷಣ ದಿನಾಚರಣೆ

 ಶ್ರೀ ಸದ್ಗುರು ಕಬೀರಾನಂದಸ್ವಾಮಿ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಚಿತ್ರದುರ್ಗ. 


ದಿನಾಂಕ: 11-11-2021

“ರಾಷ್ಟ್ರೀಯ ಶಿಕ್ಷಣ ದಿನಾಚರಣೆ”

ಭಾರತದ ಸ್ವತಂತ್ರ್ಯ ಹೋರಾಟಗಾರರೂ ಸ್ವತಂತ್ರ್ಯ ಭಾರತದ ಪ್ರಥಮ ಶಿಕ್ಷಣ ಸಚಿವರಾದ ‘ಮೌಲಾನಾಅಬುಲ್ ಕಲಾಂ ಆಜಾದ್’ ರವರ ಜನ್ಮ ದಿನವಾದ ನವೆಂಬರ್ 11 ರಂದು “ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ” ಆಚರಿಸಲಾಗುತ್ತಿದೆ ಎಂದು ‘ಎಸ್.ಎಸ್.ಕೆ.ಎಸ್.  ಶಿಕ್ಷಣ ಮಹಾವಿದ್ಯಾಲಯದ’ ಪ್ರಾಂಶುಪಾಲರಾದ ‘ಡಾ. ಗಿರೀಶ್ ಟಿ’ ಯವರು ತಿಳಿಸಿದರು, ಚಿತ್ರದುರ್ಗ ನಗರದ ಶ್ರೀ ಸದ್ಗುರು ಕಬೀರಾನಂದ ಬಿ.ಇಡಿ. ಕಾಲೇಜನಲ್ಲಿ ಏರ್ಪಡಿಸಿದ್ದ “ರಾಷ್ಟ್ರೀಯ ಶಿಕ್ಷಣ ದಿನ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 


        ಭಾರತ ಸ್ವತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರ ಆತ್ಮೀಯ ಒಡನಾಡಿಯಾಗಿದ್ದವರು ‘ಅಬುಲ್ ಕಲಾಂ ಆಜಾದ್‍ರವರು’. ಅತ್ಯುತ್ತಮ ಬರಹಗಾರರಾದ ಕಲಾಂರವರು ತನ್ನ ಲೇಖನಗಳ ಮೂಲಕ ಬ್ರಿಟಿಷರ ಆಡಳಿತದ ವಿರುದ್ಧ ಹಾಗೂ ಭಾರತೀಯರಲ್ಲಿ ಹೋರಾಟ ಸಂಘಟನೆಯ ಮನೋಭಾವನೆಯ ವಿಚಾರಗಳನ್ನು ಬರೆಯುತ್ತಿದ್ದರು. ಸ್ವತಂತ್ರ್ಯ ಹೋರಾಟದಲ್ಲಿ ಹಲವುಬಾರಿ ಸೆರೆಮನೆ ವಾಸವನ್ನು ಸಹ ಅನುಭವಿಸಿದರು. ಕಲಾಂರು ಭಾರತೀಯ ಕಾಂಗ್ರೇಸ್‍ನ ಅಧ್ಯಕ್ಷರಾಗಿಯೂ ಸಹ ಕಾರ್ಯ ನಿರ್ವಹಿಸಿದರು. ಇವರು ತನ್ನ ಜೀವನಪೂರ್ಣ ಹಿಂದೂ-ಮುಸ್ಲಿಂರ ಐಕ್ಯತೆಗಾಗಿ, ಐಕ್ಯತೆಯ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಅಪ್ಪಟ ಭಾರತೀಯ. ಭಾರತದೇಶ ವಿಭಜನೆಯನ್ನು ವಿರೋಧಿಸಿ, ಅಖಂಡ ಭಾರತ ರಚನೆಗೆ ಒತ್ತು ನೀಡಿದವರು.ಜ್ಯಾತ್ಯಾತೀತ ನಿಲುವಿಗೆ ಕಟಿಬದ್ಧತೆ ಹೊಂದಿದವರು. ಸ್ವತಂತ್ರ್ಯ ಭಾರತದ ಸಚಿವ ಸಂಪುಟದಲ್ಲಿ ಇವರು ಪ್ರಥಮ ಶಿಕ್ಷಣ ಸಚಿವರಾಗಿ, ಶಿಕ್ಷಣದಲ್ಲಿ ಅಮೂಲಾಗ್ರ ಕಾರ್ಯಗಳನ್ನು ಮಾಡಿದವರು. ಭಾರತದ ಶಿಕ್ಷಣಕ್ಕೆ ಭದ್ರ ತಳಹದಿಯನ್ನು ರೂಪಿಸಿದ ಶಿಕ್ಷಣದ ರೂವಾರಿ. ಶಿಕ್ಷಣ ವ್ಯವಸ್ಥೆ ಹಾಗೂ ಉನ್ನತ ಶಿಕ್ಷಣದ ರೂಪುರೇಷೆಯ ನಾಯಕತ್ವವಹಿಸಿ ಯಶಸ್ವಿಗೊಳಿಸಿದವರು. ಹಾಗಾಗಿ ಇವರ ಶೈಕ್ಷಣಿಕ ಸೇವೆಯ ಸವಿನೆನಪಿಗಾಗಿ ಇವರ ಜನ್ಮ ದಿನವನ್ನು “ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ” ಆಚರಿಸಲಾಗುತ್ತಿದೆ, ಕಲಾಂರಂತಹ ನಾಯಕರ ಗುಣಗಳು ಇಂದಿನ ಸಚಿವರಿಗೆ, ನಾಯಕರುಗಳಿಗೆ ಹಾಗೂ ಶೈಕ್ಷಣಿಕ ಚಿಂತಕರುಗಳಿಗೆ ಆದರ್ಶವಾಗಬೇಕಿದೆ.   ಅಬುಲ್‍ ಕಲಾಂ ಆಜಾದ್‍ರಂತಹ ನಾಯಕರ ವಿಚಾರಗಳನ್ನು ಎಲ್ಲಿಯೂ ಓದಲು ಅವಕಾಶವಿಲ್ಲದ ಪರಿಣಾಮವಾಗಿ ಅವರ ಬಗ್ಗೆ ತಿಳಿಯುವಲ್ಲಿ ಅವಕಾಶವಂಚಿತರಾಗುತ್ತಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿರುವವರು ಶಾಲಾ ಕಾಲೇಜುಗಳಲ್ಲಿ ಇಂತಹ ಹಲವು ವ್ಯಕ್ತಿಗಳ ಚಿಂತನೆಗಳನ್ನು ತಿಳಿಸುವಂತಹ ಕಾರ್ಯಗಳಾಗಬೇಕೆಂದು ಕರೆನೀಡಿದರು.

ಶ್ರೀ ಪ್ರಶಾಂತ್‍ರವರು ಅಬುಲ್‍ ಕಲಾಂರವರ ಶೈಕ್ಷಣಿಕ ಸುಧಾರಣೆಗಳನ್ನು ನಾವು ಶಿಕ್ಷಣ ಕ್ಷೇತ್ರದಲ್ಲಿರುವವರು ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು. ಅವರ ಶೈಕ್ಷಣಿಕ ಚಿಂತನೆ, ಆಡಳಿತವು ಇಂದು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ನಾಯಕರು ಹಾಗು ಅಧಿಕಾರಿಗಳು ಅನುಸರಿಸುವುದರಿಂದ ಶಿಕ್ಷಣದ ಪ್ರಗತಿ ಸಾಧಿಸಬಹುದಾಗಿದೆ. ಶ್ರೀಮತಿ ನೇತ್ರಾವತಿಯವರು ಮಾತನಾಡಿ ಅಬುಲ್ ಕಲಾಂ ಆಜಾದ್‍ರವರ ನಾಯಕತ್ವ ಗುಣಗಳು, ಶಿಕ್ಷಕರಿಗೆ, ಪ್ರಶಿಕ್ಷಣಾರ್ಥಿಗಳಿಗೆ ಆದರ್ಶವಾಗಿವೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಬಿ.ಇಡಿ. ಪ್ರಶಿಕ್ಷಣಾರ್ಥಿಯಾದ ಅನುದೀಪ್ ನಿರೂಪಿಸಿದರು, ಲೋಕೇಶ್ ಪ್ರಾರ್ಥಸಿದರು, ಶಿವಪುತ್ರ ಸ್ವಾಗತಿಸಿದರು, ಅರ್ಫೀನ್‍ತಾಜ್ ವಂದಿಸಿದರು. ಆಚರಣೆ ಕುರಿತು ಪ್ರಶಿಕ್ಷಣಾರ್ಥಿಗಳು ಭಾಷಣ ಮಾಡಿದರು.


ಬಿ.ಇಡಿ. ಪದವಿ ಫಲಿತಾಂಶ ಪ್ರಕಟಣೆ 2024

  ಫಲಿತಾಂಶ ಪ್ರಕಟಣೆ 2024 ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಪದವಿ ಜನವರಿ 2024 ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗ...